ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಭಾರತೀಯ ವಾಯುಪಡೆಯಯಲ್ಲಿ ಅವಿವಾಹಿತ ಯುವಕ ಯುವತಿಯರಿಗೆ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್ಗಳಲ್ಲಿ ಅಗ್ನಿಪಥ್ ಯೋಜನೆ (Agnipath Scheme) ಅಡಿಯಲ್ಲಿ ಅಗ್ನಿವೀರ್ ವಾಯುಸೇವೆಯ ನೇಮಕಾತಿಗಾಗಿ (Agniveer Vayu Seva Recruitment 2023) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ವೆಬ್ ಸೈಟ್ https://agnipathvayu.cdac.in ಗೆ ಭೇಟಿ ನೀಡಿ ಮಾರ್ಚ್ 31 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯ ಶುಲ್ಕ ರೂ.250 ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ http://careerindianairforce.cdac.in ಗೆ ಭೇಟಿ ನೀಡಬಹುದು ಅಥವಾ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಕೆ.ಜಿ.ರಸ್ತೆ, ಬೆಂಗಳೂರು 560009 ಇಲ್ಲಿಗೆ ಭೇಟಿ ನೀಡಬಹುದು ಎಂದು ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜ್ಞಾನ ಸ್ಟ್ರೀಮ್ನ ಅಭ್ಯರ್ಥಿಗಳಾಗಿದ್ದರೆ ದ್ವಿತೀಯ ಪಿ.ಯು.ಸಿ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಹಾಗೂ ಇಂಗ್ಲೀಷ್ ವಿಷಯಗಳನ್ನೊಳಗೊಂಡಂತೆ ಶೇ. 50 ಅಂಕಗಳನ್ನು ಪಡೆದು ಪಾಸಾಗಿರಬೇಕು ಹಾಗೂ ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಇಂಜಿನಿಯರಿಂಗ್ನಲ್ಲಿ ಶೇಕಡ 50 ಅಂಕಗಳೊಂದಿಗೆ ಮೆಕಾನಿಕಲ್ / ಎಲೆಕ್ಟ್ರಿಕ್ / ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನಫರ್ಮೇಷನ್ ಟೆಕ್ನಾಲಜಿ/ ಆಟೋಮೊಬೈಲ್/ ಇನ್ಸ್ಟ್ರೊಮೆಂಟ್ ಟಕ್ನಾಲಜಿ ವೃತ್ತಿಗಳಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕು ಅಥವಾ ಎರಡು ವರ್ಷಗಳ ವೃತ್ತಿಪರ ಕೋರ್ಸ್ಗಳಲ್ಲಿ ವೃತ್ತಿಯೇತರ ವಿಷಯಗಳಾದ ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳೊಂದಿಗೆ ಶೇಕಡ 50 ಅಂಕಗಳನ್ನು ಪಡೆದು ಪಾಸಾಗಿರಬೇಕು.
ಇದನ್ನೂ ಓದಿ: KPSC Recruitment 2023: ಕೆಪಿಎಸ್ಸಿ ನೇಮಕಾತಿ: ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿ
ವಿಜ್ಞಾನೇತರ ಸ್ಟ್ರೀಮ್ನ ಅಭ್ಯರ್ಥಿಗಳಾಗಿದ್ದರೆ ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡ 50 ಅಂಕದೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕು ಅಥವಾ ಎರಡು ವರ್ಷಗಳ ವೃತ್ತಿಪರ ಕೋರ್ಸ್ಗಳಲ್ಲಿ ಶೇಕಡ 50 ಅಂಕಗಳನ್ನು ಪಡೆದು ಪಾಸಾಗಿರಬೇಕು.
ವಯೋಮಿತಿ: ಅಭ್ಯರ್ಥಿಗಳು 26-12-2002 ರಿಂದ 20-06-2006ರ ನಡುವೆ (ಎರಡೂ ದಿನಾಂಕಗಳನ್ನು ಒಳಗೊಂಡಂತೆ) ಜನಿಸಿದವರಾಗಿರಬೇಕು.
ದೇಹದಾರ್ಢ್ಯತೆ: ಪರುಷರು 152.5 ಸೆ.ಮೀ ಹಾಗೂ ಮಹಿಳೆಯರು 152 ಸೆಂ.ಮೀ ಎತ್ತವಿರಬೇಕು ಮತ್ತು ಎತ್ತರಕ್ಕೆ ಅನುಗುಣವಾದ ತೂಕವನ್ನು ಹೊಂದಿರಬೇಕು.
ನೇಮಕಾತಿ ವಿಧಾನ: ನೇಮಕಾತಿ ಪ್ರಕಿಯು ಎರಡು ಹಂತದ ಆನ್ ಲೈನ್ ಪರೀಕ್ಷೆಗಳು, ದೈಹಿಕ ಸಾಮರ್ಥ್ಯ ಪರೀಕ್ಷೆ, ಅಡಾಪ್ಟೀವ್ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಮತ್ತಷ್ಟು ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ