ನೇರ ನೇಮಕಾತಿ ಮೂಲಕ ಸ್ಪೆಷಲಿಸ್ಟ್ ಆಫೀಸರ್ (SO) ಕೇಡರ್‌ನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಐಡಿಬಿಐ ಬ್ಯಾಂಕ್ ಎಸ್‌ಒ (IDBI Bank SO) ನೇಮಕಾತಿ 2023-24ಕ್ಕೆ ಅರ್ಜಿ ಸಲ್ಲಿಸಲು ಐಡಿಬಿಐ ಬ್ಯಾಂಕ್ ಆನ್‌ಲೈನ್ ಲಿಂಕ್ ಅನ್ನು ಸಕ್ರಿಯಗೊಳಿಸಿದೆ. ಈ ನೇಮಕಾತಿ ಅಭಿಯಾನದಲ್ಲಿ ಒಟ್ಟು 114 ಹುದ್ದೆಗಳನ್ನು (Posts) ಭರ್ತಿ ಮಾಡಬೇಕಿದ್ದು, ಇದರಲ್ಲಿ 75 ಮ್ಯಾನೇಜರ್ ಮತ್ತು 29 ಸಹಾಯಕ ಜನರಲ್ ಮ್ಯಾನೇಜರ್ ಮತ್ತು 10 ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗಳಿವೆ.
IDBI ಬ್ಯಾಂಕ್ SO ನೇಮಕಾತಿ 2023-24 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು IDBI ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbibank.in ಗೆ ಭೇಟಿ ನೀಡಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಕೆಳಗೆ ನೀಡಲಾದ ನೇರ ಲಿಂಕ್‌ನಿಂದ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಬಹುದು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಗಳನ್ನು ಪರಿಶೀಲಿಸಬೇಕಾಗುತ್ತದೆ. IDBI ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2023-24 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಮಾರ್ಚ್ 2023.
IDBI ಬ್ಯಾಂಕ್ SO ನೇಮಕಾತಿ 2023-24 ಅಧಿಸೂಚನೆ PDF ಅನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್‌ಗಾಗಿ IDBI ಬ್ಯಾಂಕ್ SO ನೇಮಕಾತಿ 2023-24 ಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು 21 ಫೆಬ್ರವರಿ 2023 ರಿಂದ ಸಕ್ರಿಯಗೊಳಿಸಲಾಗಿದೆ. ಅಭ್ಯರ್ಥಿಗಳು IDBI ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬಹುದು.
ಅಭ್ಯರ್ಥಿಗಳು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೂಲಕವೂ ಅರ್ಜಿ ಸಲ್ಲಿಸಬಹುದು
IDBI ಬ್ಯಾಂಕ್ SO ನೇಮಕಾತಿ 2023-24 ಗೆ ಅರ್ಜಿ ಸಲ್ಲಿಸಲು ನೇರ ಲಿಂಕ್
ಡೆಪ್ಯುಟಿ ಜನರಲ್ ಮ್ಯಾನೇಜರ್ ಗ್ರೇಡ್ ‘ಡಿ’
ಸಹಾಯಕ ಜನರಲ್ ಮ್ಯಾನೇಜರ್ ಗ್ರೇಡ್ ‘ಸಿ’
ಮ್ಯಾನೇಜರ್ – ಗ್ರೇಡ್ ‘ಬಿ’
ಸಾಮಾನ್ಯ ಶೈಕ್ಷಣಿಕ ಅರ್ಹತೆಗಳು ಹೀಗಿವೆ:
ಇದನ್ನೂ ಓದಿ: ಮಾಸಿಕ ವೇತನ 60 ಸಾವಿರ ರೂ; 120 ಸಹಾಯಕ ಹುದ್ದೆಗಳಿಗೆ ಅರ್ಜಿ ಅಹ್ವಾನ
ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಸಂಬಂಧಿತ ಅನುಭವವನ್ನು ಹೊಂದಿರಬೇಕು. ಶೈಕ್ಷಣಿಕ ಅರ್ಹತೆಗಳು ಮತ್ತು ಅನುಭವದ ವಿವರಗಳಿಗಾಗಿ, ಅಧಿಕೃತ ಅಧಿಸೂಚನೆಯನ್ನು ಓದಿ. ಅಭ್ಯರ್ಥಿಯು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.