IIT ಬಾಂಬೆಯ (IIT Bombay) ಇತ್ತೀಚಿನ ಪ್ಲೇಸ್ಮೆಂಟ್ (Placement) ಅಲ್ಲಿ, ಸುಮಾರು 400 ಸಂಸ್ಥೆಗಳು 1500 ಉದ್ಯೋಗಗಳ ಆಫರ್ ಅನ್ನು(Employment offer) ಐಐಟಿ ಬಾಂಬೆ ಮುಂದೆ ಇಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಡೇಟಾವನ್ನು ನೋಡಿದಾಗ, 2017 ರಿಂದ ಉದ್ಯೋಗ ಆಫರ್‌ಗಳ ಸಂಖ್ಯೆ ಹೆಚ್ಚುತ್ತಿದೆ. 2017 ರಲ್ಲಿ ಸರಿಸುಮಾರು 1,114 ಉದ್ಯೋಗ ಆಫರ್‌ಗಳನ್ನು ಮಾಡಲಾಗಿದ್ದು 2018 ಮತ್ತು 2019 ರಷ್ಟೋತ್ತಿಗೆ ಅದು 1,112 ಮತ್ತು 1,319 ಕ್ಕೆ ಏರಿಕೆಯಾಗಿದೆ. 2022 ಪ್ಲೇಸ್ಮೆಂಟ್ ಮೊದಲ ಹಂತದಲ್ಲಿ 1,878 ಕ್ಕೆ ಜಿಗಿದಿದೆ.
ಕಳೆದ ಐದು ವರ್ಷಗಳಲ್ಲಿ ಮುಖ್ಯವಾಗಿ ಸರಾಸರಿ ವೇತನ ಹೆಚ್ಚುತ್ತಿದೆ. 2017 ರ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಯ ಸರಾಸರಿ ವೇತನವು ವಾರ್ಷಿಕ 11.41 ಲಕ್ಷ (ಅಂದಾಜು) ಆಗಿತ್ತು, ನಂತರ 2018 ರಲ್ಲಿ ವಾರ್ಷಿಕ 18.5 ಲಕ್ಷಕ್ಕೆ (ಅಂದಾಜು) ಮತ್ತು ನಂತರ 2019 ರಲ್ಲಿ ವಾರ್ಷಿಕ (ಅಂದಾಜು) 10.34 ಲಕ್ಷಕ್ಕೆ ಏರಿತು. ಆದರೆ 2020 ರಲ್ಲಿ ವಾರ್ಷಿಕ ರೂ 18.40 ಲಕ್ಷಕ್ಕೆ (ಅಂದಾಜು) ಇಳಿಯುತ್ತದೆ, ಇದು ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿರಬಹುದು.
ಆದಾಗ್ಯೂ, ಐಐಟಿ ಬಾಂಬೆ 2021 ರಲ್ಲಿ ವಾರ್ಷಿಕ ರೂ 22.7 ಲಕ್ಷ (ಅಂದಾಜು) ತಲುಪಿತು. 2022 ರ ಸರಾಸರಿ ವೇತನವನ್ನು ಸಂಸ್ಥೆಯು ಇನ್ನೂ ಬಹಿರಂಗಪಡಿಸಿಲ್ಲ. ಈ ವರ್ಷ, 400 ಕ್ಕೂ ಹೆಚ್ಚು ಸಂಸ್ಥೆಗಳಿಂದ 1500 ಕ್ಕೂ ಹೆಚ್ಚು ಆಫರ್ ಅನ್ನು ನೀಡಿದ್ದಾರೆ. ಒಟ್ಟು 25 ವಿದ್ಯಾರ್ಥಿಗಳು 1 ಕೋಟಿಗೂ ಅಧಿಕ ಮೊತ್ತದ ಪ್ಯಾಕೇಜ್ ಪಡೆದಿದ್ದಾರೆ. ಪ್ರಪಂಚದಾದ್ಯಂತ ನಡೆಯುತ್ತಿರುವ ವಜಾಗೊಳಿಸುವಿಕೆಯ ಮಧ್ಯೆ, 71 ಅಂತರಾಷ್ಟ್ರೀಯ ಆಫರ್ ಐಐಟಿ ಬಾಂಬೆಗೆ ನೀಡಲಾಯಿತು.
ಇದನ್ನೂ ಓದಿ: ಜೆಇಇ ಮೇನ್ಸ್ ಸೆಷನ್ 2 ಫಲಿತಾಂಶ ಪ್ರಕಟ; ಜೆಇಇ ಅಡ್ವಾನ್ಸ್ಡ್ 2023 ರ ಕಟ್-ಆಫ್ ಹೀಗಿದೆ
ಒಟ್ಟು ಆಫರ್ಗಳಲ್ಲಿ, 63 ಅಂತರರಾಷ್ಟ್ರೀಯ ಕೊಡುಗೆಗಳನ್ನು ಒಳಗೊಂಡಂತೆ 1224 ಹುದ್ದೆಗಳ ಅರ್ಜಿ ಆಹ್ವಾನವನ್ನು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ. ಈ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್, ಟಿಎಸ್‌ಎಂಸಿ, ಹೋಂಡಾ ಜಪಾನ್, ಮೆಕಿನ್ಸೆ & ಕಂಪನಿ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಮೋರ್ಗನ್ ಸ್ಟಾನ್ಲಿ, ಸ್ಪ್ರಿಂಕ್ಲರ್, ರಿಲಯನ್ಸ್, ಅದಾನಿ ಮತ್ತು ಟಾಟಾ ಅಂತಹ ಉನ್ನತ ನೇಮಕಾತಿದಾರರು ಸೇರಿದ್ದಾರೆ.