ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರಿಸ್ಥಿತಿಯ ವ್ಯಂಗ್ಯವೆಂದರೆ ಮುಸಲ್ಮಾನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ನಿರಂತರವಾಗಿ ಚರ್ಚಿಸಲಾಗುತ್ತದೆ. ಆದರೆ ಮುಸಲ್ಮಾನರು ಹೆಚ್ಚು ಸುಶಿಕ್ಷತರಾಗುತ್ತಿದ್ದಾರೆ. ಸಮಾಜವನ್ನು ಮುಖ್ಯವಾಹಿನಿಗೆ ತರಲು ಕೆಲವು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಇದರಿಂದಾಗಿ ಮುಸ್ಲಿಮರು ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆ ಕಾಳಜಿಯನ್ನು ಹೆಚ್ಚಿಸಿದ್ದಾರೆ. ಪರಿಣಾಮವಾಗಿ ಮುಸ್ಲಿಂ ಯುವಕರು UPSC ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ. ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮಾಜದಲ್ಲಿ ಈ ಆಮೂಲಾಗ್ರ ಬದಲಾವಣೆ ಹೇಗೆ ಸಾಧ್ಯವಾಗುತ್ತಿದೆ? ಈ ವಿಶೇಷ ವರದಿಯನ್ನು ಓದಿ… ದೇಶದ ಅತಿದೊಡ್ಡ, ಪ್ರತಿಷ್ಠಿತ ಆಡಳಿತ ಸೇವೆಗಳ ಪರೀಕ್ಷೆಯಾದ UPSC (ಕೇಂದ್ರ ಲೋಕಸೇವಾ ಆಯೋಗ -Union Public Service Commission) ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಈ ಫಲಿತಾಂಶವು ಹಲವು ಗಮನಾರ್ಹ ಸಾಧನೆಗಳನ್ನು ಕಂಡಿದೆ. ಇದರಲ್ಲಿ 51 ಮುಸ್ಲಿಂ ಮಕ್ಕಳು ಯಶಸ್ಸು ಸಾಧಿಸಿರುವುದು ಸಕಾರಾತ್ಮಕ ವಿಚಾರವಾಗಿದ್ದು, ಇದೀಗ ಬಹು ಚರ್ಚೆಯ ವಿಷಯವಾಗಿದೆ. ಇದು ಮುಸ್ಲಿಂ ಸಮಾಜದ ಭರವಸೆಯ ನವ ಚಿತ್ರಣವಾಗಿದೆ. ಗಮನಿಸಿ, ನಕಾರಾತ್ಮಕ ಕಾರಣಗಳಿಗಾಗಿ ಮುಸಲ್ಮಾನರು ಆಗಾಗ್ಗೆ ಸುದ್ದಿಯಾಗುತ್ತಿದ್ದರು. ಅನಕ್ಷರತೆ ಮತ್ತು ಬಡತನವು ಈ ಸಮುದಾಯವನ್ನು ಬಹಳ ಹಿಂದಿನಿಂದಲೂ ಬಹುವಾಗಿ ಕಾಡುತ್ತಿದೆ. ಆದರೆ ಈಗ ಆ ಪರಿಸರದಲ್ಲಿ ಕ್ರಮೇಣ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಇಂತಹ ದುಃಸ್ಥಿತಿಯಲ್ಲಿ ಸಿಲುಕಿರುವ ತಾವು ಇಲ್ಲಿ ನಿಂತನೀರಾಗದೆ ಮುಖ್ಯವಾಹಿನಿಯಲ್ಲಿ ಹರಿಯಬೇಕು, ಅದರ ಭಾಗವಾಗಬೇಕು ಮತ್ತು ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂಬ ಹಂಬಲ ಈ ಸಮಾಜದಲ್ಲಿಯೂ ದೃಗ್ಗೋಚರವಾಗುತ್ತಿದೆ. UPSC ಯ ಈ ಫಲಿತಾಂಶಗಳು ಇದಕ್ಕೆ ಸಾಕ್ಷಿಯಾಗಿದೆ. ಇದು ಹೇಗೆ ಸಂಭವಿಸಿತು ಎಂಬುದೇ...
Published On - 11:58 am, Sun, 19 May 24