ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಮಗಳು ವಮಿಕಾ ಜನಿಸಿದ ಬಳಿಕ ಈ ದಂಪತಿ ಬಾಳಲ್ಲಿ ಸಂತಸ ಹೆಚ್ಚಿದೆ. ಈ ದಂಪತಿ ಅನೇಕ ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಇವುಗಳ ಬೆಲೆ ನೂರಾರು ಕೋಟಿ ರೂಪಾಯಿಗೂ ಅಧಿಕವಾಗಿದೆ. ಕಳೆದ ವರ್ಷ ಅನುಷ್ಕಾ-ವಿರಾಟ್ (Virat Kohli) ಮುಂಬೈನ ಹೊರ ಭಾಗ ಅಲೀಬಾಗ್ನಲ್ಲಿ ಎಂಟು ಎಕರೆ ಜಾಗ ಖರೀದಿ ಮಾಡಿದ್ದರು. ಈಗ ಇಲ್ಲಿ ಫಾರ್ಮ್ಹೌಸ್ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸದ್ಯ ಈ ದಂಪತಿ ಮುಂಬೈನಲ್ಲಿ ವಾಸವಾಗಿದ್ದಾರೆ. ಆಗಾಗ ಒಟ್ಟಾಗಿ ಸಮಯ ಕಳೆಯಲು ವಿದೇಶಕ್ಕೆ ತೆರಳುತ್ತಾರೆ. ಈಗ ಮುಂಬೈ ಹೊರ ಭಾಗದಲ್ಲಿ ಒಂದು ಫಾರ್ಮ್ಹೌಸ್ ನಿರ್ಮಾಣ ಮಾಡುವ ನಿರ್ಧಾರಕ್ಕೆ ಇವರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಳೆದ ವರ್ಷ ಅಲೀಬಾಗ್ನಲ್ಲಿ 8 ಎಕರೆ ಜಾಗವನ್ನು ಇವರು ಖರೀದಿ ಮಾಡಿದ್ದರು. ಈಗ ಇಲ್ಲಿ ಫಾರ್ಮ್ಹೌಸ್ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ.
ಮಂಜುದರ್ ಬ್ರಾವೋ ಅವರು ಈ ಫಾರ್ಮ್ಹೌಸ್ನ ಡಿಸೈನ್ ಮಾಡಿದ್ದಾರೆ. ಮೂಲಗಳ ಪ್ರಕಾರ ಇಲ್ಲಿ ವಾಸಕ್ಕೆ ದೊಡ್ಡದಾದ ಮನೆ, ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ತರಬೇತಿಗೆ ವಿಶೇಷ ವ್ಯವಸ್ಥೆ, ತೋಟ ಸೇರಿ ಅನೇಕ ಅಂಶಗಳು ಇರಲಿವೆ. ಈ ಜಾಗವನ್ನು ವಿರಾಟ್-ಅನುಷ್ಕಾ 19 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಈ ಫಾರ್ಮ್ಹೌಸ್ ನಿರ್ಮಾಣಕ್ಕೆ ನೂರು ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ತಿರಸ್ಕರಿಸಿದ ಪಾತ್ರ ಮಾಡಲು ಅನುಷ್ಕಾ ಶರ್ಮಾ ನಕಾರ; ಫರ್ಹಾನ್ ಅಖ್ತರ್ಗೆ ಹೆಚ್ಚಿತು ಚಿಂತೆ
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ತಮ್ಮದೇ ಫಾರ್ಮ್ಹೌಸ್ ಹೊಂದಿದ್ದಾರೆ. ಇದು ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇನ್ನು, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಶಾರುಖ್ ಖಾನ್-ಗೌರಿ ಖಾನ್, ಶಾರುಖ್ ಮಗಳು ಸುಹಾನಾ ಖಾನ್ ಸೇರಿ ಅನೇಕರು ಅಲೀಬಾಗ್ನಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.
ಅಲೀಬಾಗ್ನಲ್ಲಿರುವ ಪ್ರಾಪರ್ಟಿಯಲ್ಲಿ ವಿರಾಟ್ ಕ್ರಿಕೆಟ್ ಮೈದಾನ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ವಿರಾಟ್ ಕೊಹ್ಲಿ ಅಲ್ಲ ಗಳೆದಿದ್ದರು. ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿ ಇದು ಸುಳ್ಳು ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 am, Wed, 16 August 23