ಭೂಗತ ಲೋಕದ ಭೀತಿ, ಬಾಲಿವುಡ್​​ ನಟರಿಗೆ ಹೆಚ್ಚಾಯ್ತು ಭದ್ರತೆ

1990ರ ದಶಕದಲ್ಲಿ ಚಿತ್ರರಂಗದ ಮೇಲೆ ಭೂಗತ ಲೋಕ ಹೊಂದಿದ್ದ ಹಿಡಿತದ ನೆನಪುಗಳು ಮರುಕಳಿಸಿವೆ. ಒಂದರ ಹಿಂದೊಂದರಂತೆ ದಾಳಿಗಳು, ಬೆದರಿಕೆ ಕರೆಗಳು ಬಾಲಿವುಡ್ ನಟ-ನಟಿಯರಿಗೆ ಬರುತ್ತಿವೆ. ಭೂಗತ ಪಾತಕಿಗಳು ಪೊಲೀಸರ ಭಯವಿಲ್ಲದೆ ದಾಳಿಗಳನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಬಾಲಿವುಡ್ ನಟ ನಟಿಯರು ತಮ್ಮ ಭದ್ರತೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ.

ಭೂಗತ ಲೋಕದ ಭೀತಿ, ಬಾಲಿವುಡ್​​ ನಟರಿಗೆ ಹೆಚ್ಚಾಯ್ತು ಭದ್ರತೆ
Bollywood Actors

Updated on: Nov 14, 2026 | 8:46 PM

ಬಾಲಿವುಡ್ ಸ್ಟಾರ್ ನಟ-ನಟಿಯರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿ ಮತ್ತು ಸುಲಿಗೆ ಬೆದರಿಕೆಗಳು ಬಾಲಿವುಡ್ ಅನ್ನು ಬೆಚ್ಚಿಬೀಳಿಸಿವೆ. 1990ರ ದಶಕದಲ್ಲಿ ಚಿತ್ರರಂಗದ ಮೇಲೆ ಭೂಗತ ಲೋಕ ಹೊಂದಿದ್ದ ಹಿಡಿತದ ನೆನಪುಗಳು ಮರುಕಳಿಸಿವೆ. ಒಂದರ ಹಿಂದೊಂದರಂತೆ ದಾಳಿಗಳು, ಬೆದರಿಕೆ ಕರೆಗಳು ಬಾಲಿವುಡ್ ನಟ-ನಟಿಯರಿಗೆ ಬರುತ್ತಿವೆ. ಭೂಗತ ಪಾತಕಿಗಳು ಪೊಲೀಸರ ಭಯವಿಲ್ಲದೆ ದಾಳಿಗಳನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಬಾಲಿವುಡ್ ನಟ ನಟಿಯರು ತಮ್ಮ ಭದ್ರತೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ.

ಪೊಲೀಸರು ಆಗೊಮ್ಮೆ ಈಗೊಮ್ಮೆ ಆರೋಪಿಗಳನ್ನು ಬಂಧಿಸುತ್ತಿದ್ದಾರಾದರೂ, ಈ ದಾಳಿಗಳು ನಿಲ್ಲುತ್ತಿಲ್ಲ. ಹಾಗಾಗಿ ತಾರೆಯರು ಈಗ ಹೆಚ್ಚುವರಿ ಭದ್ರತೆಯೊಂದಿಗೆ ಓಡಾಡುತ್ತಿದ್ದಾರೆ. ನಟರು ತಮಗೆ ಮಾತ್ರವಲ್ಲ ಕುಟುಂಬ ಸದಸ್ಯರು ಮತ್ತು ಮಕ್ಕಳಿಗೂ ಭದ್ರತೆ ಹೆಚ್ಚು ಮಾಡಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿರುವ ನಟ ಹಾಗೂ ಭದ್ರತಾ ಸಂಸ್ಥೆ ಮಾಲೀಕ ರೋನಿತ್ ರಾಯ್, ಇತ್ತೀಚೆಗೆ ಭದ್ರತೆಯವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದಿದ್ದಾರೆ. ಅಮಿತಾಭ್ ಬಚ್ಚನ್ ಸಹ ಗುಂಡುನಿರೋಧಕ ಗಾಜಿನ ಹಿಂದಿನಿಂದ ಅಭಿಮಾನಿಗಳತ್ತ ಕೈಬೀಸಿದ್ದನ್ನು, ಶಾರುಖ್ ಖಾನ್ ಮನೆಯ ಭದ್ರತೆಯೂ ಬಿಗಿಯಾಗಿರುವುದನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ.

Loading...

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳು

ಜೊತೆಗೆ ಕೆಲ ಸ್ಟಾರ್ ನಟ, ನಟಿಯರು ವಿದೇಶಗಳಿಂದಲೂ ಸಹ ಭದ್ರತೆಯವರನ್ನು ಕರೆಸಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ವಾಹನಗಳಿಗೆ ವಿಶೇಷ ಭದ್ರತೆಗಳನ್ನು ಸಹ ಮಾಡಿಸಿಕೊಂಡಿದ್ದಾರೆ. ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಹೆಚ್ಚಿನ ಭದ್ರತೆ, ಬಹಿರಂಗ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭದ್ರತೆಗೆ ಮನವಿ ಮಾಡುತ್ತಿದ್ದಾರೆ. ಕೆಲವರು ಹೆಚ್ಚಿನ ಭದ್ರತೆಗೆ ಪೊಲೀಸರಿಗೆ ಮನವಿಯನ್ನು ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಲವರು ಈಗಾಗಲೇ ತಮ್ಮ ಮಕ್ಕಳು, ಕುಟುಂಬದವರನ್ನು ಭಾರತದಿಂದ ದೂರ ವಿದೇಶಗಳಲ್ಲಿ ಇರಿಸಿದ್ದಾರೆ. ಈಗ ಇನ್ನೂ ಕೆಲವರು ಇದೇ ಕಾರ್ಯಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಹರಿದಾಡಿದ್ದ ಸುದ್ದಿಯ ಪ್ರಕಾರ, ಮುಂಬೈ ಪೊಲೀಸರೇ ಖುದ್ದು ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಹಿರಂಗ ಕಾರ್ಯಕ್ರಮಗಳಲ್ಲಿ ಭಾಗಿ ಆಗದಂತೆ ಕೋರಿದ್ದಾರೆ ಎನ್ನಲಾಗಿತ್ತು. ಆದರೆ ಈ ಸುದ್ದಿಯನ್ನು ಮುಂಬೈ ಪೊಲೀಸರು ತಳ್ಳಿ ಹಾಕಿದ್ದಾರೆ. ಏನೇ ಆಗಲಿ ಬಾಲಿವುಡ್ ನಟರಲ್ಲಿ ಭಯ ಮನೆ ಮಾಡಿದೆ. ಅದು ಸಹಜವೂ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us