
ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಸಂಜಯ್ ಗುಪ್ತಾ ಅವರು ತಮ್ಮ 57ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು (ಅಕ್ಟೋಬರ್ 30) ಅವರ ನಿವಾಸದ ಶೌಚಾಲಯದಲ್ಲಿ ಆಕಸ್ಮಿಕವಾಗಿ ಬಿದ್ದು ಅವರು ಸಾವನ್ನಪ್ಪಿದ್ದಾರೆ. ಕ್ರೈಮ್ ಥ್ರಿಲ್ಲರ್ ಹಾಗೂ ಆಕ್ಷನ್ ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ನಿರ್ದೇಶಕನ ಅಗಲಿಕೆಗೆ ಇಡೀ ಬಾಲಿವುಡ್ ಕಂಬನಿ ಮಿಡಿದಿದೆ.
ಸಂಜಯ್ ಗುಪ್ತಾ ಅವರ ಸುದೀರ್ಘ ಸಿನಿಮಾ ಪಯಣದಲ್ಲಿ ನಟ ಸಂಜಯ್ ದತ್ ಅವರೊಂದಿಗಿನ ಕಾಂಬಿನೇಷನ್ ಅತ್ಯಂತ ಜನಪ್ರಿಯವಾಗಿತ್ತು. ಇವರಿಬ್ಬರ ಜೋಡಿಯಲ್ಲಿ ಮೂಡಿಬಂದ ‘ಕಾಂಟೇ’, ‘ಮುಸಾಫಿರ್’ ಹಾಗೂ ‘ಝಿಂದಾ’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. 1991ರ ನೈಜ ಘಟನೆಯನ್ನು ಆಧರಿಸಿ ಸಿದ್ಧಪಡಿಸಿದ ‘ಶೂಟೌಟ್ ಎಟ್ ಲೋಖಂಡ್ವಾಲಾ’ ಸಿನಿಮಾ ಕ್ರೈಮ್ ಥ್ರಿಲ್ಲರ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು.
ನಂತರದ ದಿನಗಳಲ್ಲಿ ಅವರು ನಿರ್ದೇಶಿಸಿದ ‘ಶೂಟೌಟ್ ಎಟ್ ವಡಾಲ’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದೊದಗಿತ್ತು. ಕೇವಲ ಕ್ರೈಮ್ ಸಿನಿಮಾಗಳಷ್ಟೇ ಅಲ್ಲದೆ ವೈವಿಧ್ಯಮಯ ಕಥೆಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಐಶ್ವರ್ಯಾ ರೈ ನಟನೆಯ ‘ಜಜ್ಬಾ’ ಮತ್ತು ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು.
ಇದನ್ನೂ ಓದಿ: ಹೃತಿಕ್ ರೋಷನ್ 25 ಕೋಟಿ ರೂ. ಸಂಭಾವನೆ ಪಡೆದಿಲ್ಲವೇ? ‘ಜೈಲರ್ 2’ ಅತಿಥಿ ಪಾತ್ರದ ಬಗ್ಗೆ ಅಪ್‌ಡೇಟ್
‘ದಸ್ ಕಹಾನಿಯಾ’ ಎಂಬ ಆಂಥಾಲಜಿ ಸಿನಿಮಾ ಮತ್ತು ಜಾನ್ ಅಬ್ರಹಾಂ ಅಭಿನಯದ ‘ಮುಂಬೈ ಸಾಗಾ’ ಚಿತ್ರಗಳು ಗಮನ ಸೆಳೆದವರು. ‘ವೈಟ್ ಫೆದರ್ ಫಿಲ್ಮ್ಸ್’ ಬ್ಯಾನರ್ ಮೂಲಕ ಅವರು ಹಲವು ಪ್ರತಿಭಾವಂತ ನಟರ ಸಿನಿಮಾಗಳನ್ನು ನಿರ್ಮಿಸಿದ್ದರು. 2024rರಲ್ಲಿ ತೆರೆಕಂಡ ‘ದಿ ಮಿರಾಂಡಾ ಬ್ರದರ್ಸ್’ ಅವರ ನಿರ್ದೇಶನದಲ್ಲಿ ಬಂದ ಕೊನೆಯ ಸಿನಿಮಾ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Sat, 31 October 26