‘ಕಾಂತಾರ’ ರೆಕಾರ್ಡ್ ಮುರಿದ ‘ಹನುಮಾನ್ ಅಂಶ್’: 9ನೇ ವಾರದಲ್ಲಿ ಹೊಸ ದಾಖಲೆ

‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಟೇಕಾಫ್ ಆದಾಗಿನಿಂದಲೂ ಪ್ರತಿ ವಾರ ಒಂದಲ್ಲ ಒಂದು ಹೊಸ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿರುವ ಈ ಸಿನಿಮಾ ರಿಲೀಸ್ ಆಗಿ ಒಂಬತ್ತು ವಾರಗಳಾಗಿದ್ದು, ಇದೀಗ ಈ ಸಿನಿಮಾ ಕನ್ನಡದ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ’ ಮತ್ತು ‘ಧುರಂಧರ್’ ದಾಖಲೆಯನ್ನೂ ಸಹ ಮುರಿದು ಮೂಲೆಗುಂಪು ಮಾಡಿದೆ.

‘ಕಾಂತಾರ’ ರೆಕಾರ್ಡ್ ಮುರಿದ ‘ಹನುಮಾನ್ ಅಂಶ್’: 9ನೇ ವಾರದಲ್ಲಿ ಹೊಸ ದಾಖಲೆ
Hanuman Ansh Poster

Updated on: Oct 10, 2026 | 5:02 PM

ಮುಖ್ಯಾಂಶಗಳು

  • ಹೊಸ ದಾಖಲೆ ಬರೆದ ‘ಹನುಮಾನ್ ಅಂಶ್’ ಸಿನಿಮಾ
  • ‘ಹನುಮಾನ್ ಅಂಶ್’ ಸಿನಿಮಾ ರಿಲೀಸ್ ಆಗಿ ಒಂಬತ್ತು ವಾರಗಳಾಗಿವೆ
  • ಒಂಬತ್ತನೇ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿದೆ ‘ಹನುಮಾನ್ ಅಂಶ್’

‘ಹನುಮಾನ್ ಅಂಶ್’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಕೇವಲ 2-3 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ ಭಾರಿ ಬಜೆಟ್​​ನ, ಸ್ಟಾರ್ ನಟರ ಸಿನಿಮಾಗಳನ್ನೇ ಹಿಂದಿಕ್ಕಿ ಇಂದಿಗೂ ದೇಶದ ಹಲವಾರು ಚಿತ್ರಮಂದಿರಗಳಲ್ಲಿ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಟೇಕಾಫ್ ಆದಾಗಿನಿಂದಲೂ ಪ್ರತಿ ವಾರ ಒಂದಲ್ಲ ಒಂದು ಹೊಸ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿರುವ ಈ ಸಿನಿಮಾ ರಿಲೀಸ್ ಆಗಿ ಒಂಬತ್ತು ವಾರಗಳಾಗಿದ್ದು, ಇದೀಗ ಈ ಸಿನಿಮಾ ಕನ್ನಡದ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ’ ಮತ್ತು ‘ಧುರಂಧರ್’ ದಾಖಲೆಯನ್ನೂ ಸಹ ಮುರಿದು ಮೂಲೆಗುಂಪು ಮಾಡಿದೆ.

ಅಕ್ಟೋಬರ್ 8ಕ್ಕೆ ‘ಹನುಮಾನ್ ಅಂಶ್’ ಸಿನಿಮಾ ರಿಲೀಸ್ ಆಗಿ 9ನೇ ವಾರಗಳಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 9ನೇ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಹೊರಹೊಮ್ಮಿದೆ ‘ಹನುಮಾನ್ ಅಂಶ್’. ಅಜಯ್ ದೇವಗನ್ ಅವರ ‘ದೃಶ್ಯಂ 3: ದಿ ಕನ್ಕ್ಲೂಷನ್’ ಚಿತ್ರದಿಂದ ಪೈಪೋಟಿ ಎದುರಾಗಿದ್ದರೂ ಸಹ ಈ ಸಿನಿಮಾದ ವೇಗ ಚಿತ್ರಮಂದಿರಗಳಲ್ಲಿ ತಗ್ಗೇ ಇಲ್ಲ.

ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ಹನುಮಾನ್ ಅಂಶ್’ ಚಿತ್ರವು 9ನೇ ವಾರದಲ್ಲಿ 10.60 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ತನ್ನ 9ನೇ ವಾರದಲ್ಲಿ 2.55 ಕೋಟಿ ರೂ. ಗಳಿಸಿ ಇದುವರೆಗೆ ಮೊದಲ ಸ್ಥಾನದಲ್ಲಿತ್ತು. ‘ಧುರಂಧರ್’ ಸಿನಿಮಾ ಸಹ ಒಂಬತ್ತನೇ ವಾರದಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಆದರೆ ‘ಹನುಮಾನ್ ಅಂಶ್’ ಸಿನಿಮಾ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದ್ದು, ಹೊಸ ದಾಖಲೆ ಸೃಷ್ಟಿ ಮಾಡಿದೆ.

ಇದನ್ನೂ ಓದಿ:‘ಹನುಮಾನ್ ಅಂಶ್’ ಯಶಸ್ಸು, ಟಿವಿಗೂ ಬಂತು ಕರೋಲಿ ಬಾಬಾ ಕತೆ

ಪ್ರಸ್ತುತ ಈ ಚಿತ್ರದ ಭಾರತದ ಒಟ್ಟು ನೆಟ್ ಕಲೆಕ್ಷನ್ 310.63 ಕೋಟಿ ರೂ. ತಲುಪಿದೆ. ಆರಂಭಿಕ ವಾರದಲ್ಲಿ ಕೇವಲ 90 ಲಕ್ಷ ರೂ. ಗಳಿಕೆ ಮಾಡುವ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ಈ ಚಿತ್ರದ ಪಯಣ ಅಚ್ಚರಿ ಮೂಡಿಸುವಂತಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಿನಿಮಾ 300 ಕೋಟಿ ರೂ. ಕ್ಲಬ್ ಸೇರುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಶುಕ್ರವಾರ ಯಾವುದೇ ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲದಿರುವುದರಿಂದ, ‘ಹನುಮಾನ್ ಅಂಶ’ ಚಿತ್ರವು 10ನೇ ವಾರಾಂತ್ಯದಲ್ಲೂ ತನ್ನ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿಸಿದ ಈ ಸಿನಿಮಾ ಇದೀಗ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಿ ಇತ್ತೀಚೆಗಷ್ಟೆ ರಿಲೀಸ್ ಆಗಿದ್ದು, ತೆಲುಗು ರಾಜ್ಯಗಳಲ್ಲಿ ಒಳ್ಳೆಯ ಪ್ರದರ್ಶನವನ್ನೇ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us