‘ಲಾಲ್​ ಸಿಂಗ್ ಚಡ್ಡಾ’ ಸೋತಿದ್ದಕ್ಕೆ ಆಮಿರ್​ ಖಾನ್​ನ ಟೀಕೆ ಮಾಡಿದ ಜಸ್​​ಪ್ರೀತ್​ ಬುಮ್ರಾ; ನಟನ ಉತ್ತರ ಏನು?

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಗ್ಗೆ, ಚಿತ್ರದ ಬಾಕ್ಸ್ ಆಫೀಸ್ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಈಗ ಜಸ್​ಪ್ರೀತ್ ಬುಮ್ರಾ ಕೂಡ ಆಮಿರ್ ಅವರನ್ನು ಟೀಕಿಸಿದ್ದಾರೆ.

‘ಲಾಲ್​ ಸಿಂಗ್ ಚಡ್ಡಾ’ ಸೋತಿದ್ದಕ್ಕೆ ಆಮಿರ್​ ಖಾನ್​ನ ಟೀಕೆ ಮಾಡಿದ ಜಸ್​​ಪ್ರೀತ್​ ಬುಮ್ರಾ; ನಟನ ಉತ್ತರ ಏನು?
ಆಮಿರ್ ಖಾನ್

Updated on: Apr 13, 2023 | 6:30 AM

ಮುಖ್ಯಾಂಶಗಳು

  • ಡ್ರೀಮ್ 11 ಜಾಹೀರಾತಿನಲ್ಲಿ ಆಮಿರ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ
  • 15 ಸೆಕೆಂಡ್​ ಜಾಹೀರಾತು ವೈರಲ್ ಆಗಿದೆ
  • ಲಾಲ್ ಸಿಂಗ್ ಚಡ್ಡಾ ಟೀಕೆ ಮಾಡಿದ ಬೂಮ್ರಾ

ನಟ ಆಮಿರ್ ಖಾನ್ ಅವರು ಸ್ಟಾರ್ ಹೀರೋ. ಅವರ ಸಿನಿಮಾಗಳು ಅನಾಯಸವಾಗಿ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದ್ದ ಕಾಲ ಒಂದಿತ್ತು. ಆದರೆ, ಇತ್ತೀಚೆಗೆ ಅವರ ಲಯತಪ್ಪಿದೆ. ಅವರ ಸಿನಿಮಾಗಳು ಬಿಸ್ನೆಸ್ ಮಾಡುತ್ತಿಲ್ಲ. ಇತ್ತೀಚೆಗೆ ಆಮಿರ್ ಖಾನ್ (Aamir Khan) ದೊಡ್ಡ ಯಶಸ್ಸು ಕಂಡಿಲ್ಲ. ಕಳೆದ ವರ್ಷ ರಿಲೀಸ್ ಆದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿತು. ಈ ಚಿತ್ರ ಸೋತ ನಂತರ ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದರು. ಈಗ ಅವರ ಸಿನಿಮಾ ಸೋತ ಬಗ್ಗೆ ಬೌಲರ್ ಜಸ್​​ಪ್ರೀತ್​ ಬುಮ್ರಾ (Jasprit Bumrah) ಅವರು ಆಮಿರ್ ಖಾನ್ ಅವರನ್ನು ಟೀಕೆ ಮಾಡಿದ್ದಾರೆ.

ಹಾಲಿವುಡ್​ನ ‘ದಿ ಫಾರೆಸ್ಟ್​ ಗಂಪ್​’ ಚಿತ್ರವನ್ನು ಆಮಿರ್ ಖಾನ್ ರಿಮೇಕ್ ಮಾಡೋಕೆ ಮುಂದಾದರು.  ‘ಲಾಲ್ ಸಿಂಗ್ ಚಡ್ಡಾ’ ಟ್ರೇಲರ್ ನೋಡಿದ ಅನೇಕರು ಸಿನಿಮಾ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು. ಇದರ ಜೊತೆಗೆ ಆಮಿರ್ ಖಾನ್ ಅವರ ಹಳೆಯ ಹೇಳಿಕೆ ಇಟ್ಟುಕೊಂಡು ಸಿನಿಮಾ ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು. ಒಟ್ಟಾರೆ ಸಿನಿಮಾ ಸೋತಿತು. ಚಿತ್ರ 100 ಕೋಟಿ ರೂಪಾಯಿ ಬಿಸ್ನೆಸ್ ಮಾಡದೆ ಆಟ ಪೂರ್ಣಗೊಳಿಸಿತು. ಈ ಸಿನಿಮಾ ಬಗ್ಗೆ, ಚಿತ್ರದ ಬಾಕ್ಸ್ ಆಫೀಸ್ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಈಗ ಜಸ್​ಪ್ರೀತ್ ಬುಮ್ರಾ ಕೂಡ ಆಮಿರ್ ಅವರನ್ನು ಟೀಕಿಸಿದ್ದಾರೆ.

ಡ್ರೀಮ್ 11 ಜಾಹೀರಾತಿನಲ್ಲಿ ಆಮಿರ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಮತ್ತು ಕ್ರಿಕೆಟ್ ಮಧ್ಯೆ ಲಿಂಕ್ ಕೊಟ್ಟು ವಿವಿಧ ರೀತಿಯ ಜಾಹೀರಾತುಗಳನ್ನು ತಯಾರಿಸಲಾಗಿದೆ. ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಜಸ್​ಪ್ರೀತ್​ ಬುಮ್ರಾ, ಹಾರ್ದಿಕ್ ಪಾಂಡ್ಯ ಮೊದಲಾದವರು ಈ ಜಾಹೀರಾತಿನಲ್ಲಿ ನಟಿಸಿದ್ದಾರೆ. ಹೀರೋ ಪೈಕಿ ಆಮಿರ್, ಮಾಧವನ್ ಮೊದಲಾದವರು ಇದ್ದಾರೆ. ಇತ್ತೀಚೆಗೆ ಬಂದ ಜಾಹೀರಾತಿನಲ್ಲಿ ಬುಮ್ರಾ ಹಾಗೂ ಆಮಿರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

15 ಸೆಕೆಂಡ್​ ಜಾಹೀರಾತು ಇದಾಗಿದೆ. ‘ಬೂಮ್ ಬೂಮ್ ಜಾಗರೂಕತೆಯಿಂದ ಬಾಲ್ ಹಾಕಿ, ನಾನು ಬಿಗ್ ಹಿಟ್ ಬಾರಿಸ್ತೀನಿ’ ಎಂದು ಬುಮ್ರಾಗೆ ಹೇಳುತ್ತಾರೆ ಆಮಿರ್ ಖಾನ್. ‘ನೀವು ಅಷ್ಟು ದೊಡ್ಡ ಹಿಟ್ಟರ್ ಎಂದರೆ ಲಾಲ್​ ಸಿಂಗ್ ಚಡ್ಡಾಗೆ ಏನಾಯ್ತು?’ ಎಂದು ಆಮಿರ್ ಖಾನ್ ಅವರನ್ನು ಬುಮ್ರಾ ಟೀಕೆ ಮಾಡಿದ್ದಾರೆ. ಇದಕ್ಕೆ ಆಮಿರ್ ನಕ್ಕಿದ್ದಾರೆ. ಜೊತೆಗೆ ಗ್ರೌಂಡ್​ನಲ್ಲಿ ತಮ್ಮನ್ನು ಫೇಸ್ ಮಾಡುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಜನ್ಮದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಇವರು ಮಾಡುವ ಕಸರತ್ತು ನೋಡಿದರೆ ತಲೆತಿರುಗುತ್ತೆ..

ಆಮಿರ್ ಖಾನ್ ಅವರು ಸೋಲನ್ನು ಪಾಸಿಟಿವ್ ಆಗಿ ತೆಗೆದುಕೊಂಡ ಬಗ್ಗೆ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಆಮಿರ್ ಅವರನ್ನು ಬೆಂಬಲಿಸಿದ್ದಾರೆ. ‘ಕಳೆದ ಏಳು ತಿಂಗಳಿಂದ ಆಮಿರ್ ಖಾನ್ ಹಾಗೂ ಜಸ್​ಪ್ರಿತ್ ಬುಮ್ರಾ ಆಡಿದ ಗೇಮ್ ಸಂಖ್ಯೆ ಜೀರೋ’ ಎಂದಿದ್ದಾರೆ. ಈ ಮೂಲಕ ಬುಮ್ರಾ ಅವರನ್ನು ಟೀಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us