ಬಾಲಿವುಡ್ನಲ್ಲಿ ಖ್ಯಾತ ತಾರೆಯರ ಕುಟುಂಬದವರು ಚಿತ್ರರಂಗ ಪ್ರವೇಶಿಸುವುದು ಮಾಮೂಲು. ಆದರೆ ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಖಾನ್ ಪುತ್ರಿ, ಚಿತ್ರರಂಗ ಪ್ರವೇಶಿಸದೆಯೇ ಸಖತ್ ಸುದ್ದಿಯಲ್ಲಿದ್ದಾರೆ. ಅದೂ ಕೂಡ ಒಂದು ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ. ಹೌದು. ಅಲ್ವಿರಾ ಖಾನ್ ಹಾಗೂ ಖ್ಯಾತ ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಪುತ್ರಿಯಾಗಿರುವ ಅಲಿಜೇಹ್ ಅಗ್ನಿಹೋತ್ರಿ(Alizeh Agnihotri) ಜಾಹಿರಾತೊಂದರಲ್ಲಿ ಕಾಣಿಸಿಕೊಂಡು ಎಲ್ಲೆಡೆ ಸುದ್ದಿಯಾಗಿದ್ದಾರೆ.
ಆಭರಣಗಳ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿರುವ ಅಲಿಜೇಹ್, ತಮ್ಮ ಮಾದಕ ನೋಟದಿಂದ ವೀಕ್ಷಕರ ಮನಸೆಳೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಪ್ರಸ್ತುತ ವೈರಲ್ ಆಗಿದ್ದು, ಸಹಜ ಸೌಂದರ್ಯದಿಂದ ಗಮನ ಸೆಳೆಯುತ್ತಿರುವ ಅವರ ಆತ್ಮವಿಶ್ವಾಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೊಕ್ಕೆ ತಮ್ಮ ಅನುಭವಗಳನ್ನಾಧರಿಸಿ ಒಂದು ಸುಂದರ ಕ್ಯಾಪ್ಶನ್ಅನ್ನು ಕೂಡ ಅವರು ನೀಡಿದ್ದಾರೆ.
ವಿಡಿಯೊದೊಂದಿಗೆ ಹಂಚಿಕೊಂಡಿರುವ ಅಡಿಬರಹದಲ್ಲಿ, ಪ್ರತಿ ಹೆಣ್ಣು ಮಕ್ಕಳು ಜೀವನದಲ್ಲಿ ಮೊದಲು ಧರಿಸಬಹುದಾದ ಆಭರಣವೆಂದರೆ ಅದು ಕಿವಿಯೋಲೆ. ಆದರೆ ತಾನು ಅದನ್ನು ಧರಿಸುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ‘‘ಹೆಣ್ಣು ಮಕ್ಕಳು ಜೀವನದಲ್ಲಿ ಮೊದಲು ಧರಿಸುವ ಆಭರಣವೆಂದರೆ ಅದು ಬಹುಶಃ ಕಿವಿಯೋಲೆ. ಕೆಲವರಿಗೆ ಅದು ಬಹಳ ಸಹಜವಾಗಿರುತ್ತದೆ. ಆದರೆ ಏಕೋ ಗೊತ್ತಿಲ್ಲ. ನಾನು ಸಣ್ಣ ವಯಸ್ಸಿನಿಂದಲೂ ಕಿವಿಯೋಲೆ ಧರಿಸುತ್ತಿರಲಿಲ್ಲ. ಬಹಳಷ್ಟು ಜನಕ್ಕೆ ಇದು ವಿಚಿತ್ರವಾಗಿ ಕಾಣಬಹುದು. ಆದರೆ ನನಗೆ ಮಾತ್ರ ಧರಿಸಬೇಕು ಎಂದು ಅನಿಸುತ್ತಲೇ ಇರಲಿಲ್ಲ. ಆದರೆ ಈಗ, ನಾನು ನನ್ನ ಉಡುಪನ್ನು ನಿರ್ಧರಿಸುವ ಮೊದಲೇ, ಆಭರಣಗಳನ್ನು ನಿರ್ಧರಿಸಿರುತ್ತೇನೆ. ಆಭರಣಗಳು ನನ್ನನ್ನು ನಾನು ಅಭಿವ್ಯಕ್ತಪಡಿಸಲು ಇರುವ ಒಂದು ಮಾರ್ಗ ಎಂದು ಭಾವಿಸುತ್ತೇನೆ’’ ಎಂದು ಅವರು ಬರೆದುಕೊಂಡಿದ್ದಾರೆ.
ಅಲಿಜೇಹ್ ರೂಪದರ್ಶಿಯಾಗಿರುವ ವಿಡಿಯೊ ಇಲ್ಲಿದೆ:
ಅಲಿಜೇಹ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಆಗಾಗ ವಿಭಿನ್ನ ಶೈಲಿಯ ಫೋಟೋಗಳಿಗೆ ಪೋಸ್ ನೀಡಿ ಗಮನ ಸೆಳೆಯುತ್ತಿರುತ್ತಾರೆ. ಅಂತಹ ಕೆಲವು ಚಿತ್ರಗಳು ಇಲ್ಲಿವೆ.
ಕೆಲವು ಮೂಲಗಳ ಪ್ರಕಾರ, ಅಲಿಜೇಹ್ ಬಾಲಿವುಡ್ಗೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಅವರು ನೃತ್ಯದ ಅಭ್ಯಾಸದಲ್ಲೂ ತೊಡಗಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಈ ಕುರಿತು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ.
ಇದನ್ನೂ ಓದಿ:
ಗೀತ ಗೋವಿಂದಂ ರೀತಿಯಲ್ಲೇ ಚಲಿಸುತ್ತಿರುವ ಬಸ್ಸಲ್ಲಿ ಯುವತಿಯನ್ನು ಚುಂಬಿಸಿದ ಯುವಕ; ಕೇಸ್ ದಾಖಲು
(Salman Khan niece Alizeh Agnihotri took netizens attention after featuring in a jewelry commercial)