‘ಮುಸಾಫಿರ್ ಕೆಫೆ’ ಮಾದರಿಯಲ್ಲಿ ಎರಡು ಕೆಫೆ ಓಪನ್ ಮಾಡಿದ ವಿಕ್ರಾಂತ್ ಮಾಸ್ಸಿ

ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ತಮ್ಮ ಜನಪ್ರಿಯ ಸರಣಿ 'ಮುಸಾಫಿರ್ ಕೆಫೆ' ಮಾದರಿಯ ರಿಯಲ್ ಕೆಫೆಗಳನ್ನು ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಆರಂಭಿಸುತ್ತಿದ್ದಾರೆ. ಕಲಾವಿದರು ತಂಗಲು ಕೊಠಡಿಗಳ ಸೌಲಭ್ಯ ಹೊಂದಿರುವ ಈ ವಿಶೇಷ ಯೋಜನೆ ಪ್ರವಾಸಿಗರು ಮತ್ತು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

‘ಮುಸಾಫಿರ್ ಕೆಫೆ’ ಮಾದರಿಯಲ್ಲಿ ಎರಡು ಕೆಫೆ ಓಪನ್ ಮಾಡಿದ ವಿಕ್ರಾಂತ್ ಮಾಸ್ಸಿ
ಮುಸಾಫಿರ್ ಕೆಫೆ

Updated on: Sep 18, 2026 | 2:51 PM

ಮುಖ್ಯಾಂಶಗಳು

  • ರಿಯಲ್ ಲೈಫ್‌ನಲ್ಲಿ ಶುರುವಾಗಲಿದೆ 'ಮುಸಾಫಿರ್ ಕೆಫೆ'
  • ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ವಿಕ್ರಾಂತ್ ಮಾಸ್ಸಿ ಹೊಸ ಸಾಹಸ
  • ಕೆಫೆ ಜೊತೆಗೆ ನಿರ್ಮಾಣವಾಗಲಿವೆ 20 ವಿಶೇಷ ರೂಮ್‌ಗಳು  

ಬಾಲಿವುಡ್‌ನ ಪ್ರಸಿದ್ಧ ನಟ ವಿಕ್ರಾಂತ್ ಮಾಸ್ಸಿ ತಮ್ಮ ‘ಮುಸಾಫಿರ್ ಕೆಫೆ’ ಯಶಸ್ಸಿನ ನಂತರ ಉದ್ಯಮ ರಂಗಕ್ಕೆ ಕಾಲಿಡುತ್ತಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಸುಂದರ ಮಡಿಲಲ್ಲಿ ‘ಮುಸಾಫಿರ್ ಕೆಫೆ’ ಮಾದರಿಯ ಎರಡು ಕೆಫೆಗಳನ್ನು ತೆರೆಯಲು ಅವರು ಸಜ್ಜಾಗಿದ್ದಾರೆ. ಈ ಕೆಫೆಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು ಪ್ರೇಕ್ಷಕರಲ್ಲಿ ಮತ್ತು ಪ್ರವಾಸಿಗರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.

ವಿಕ್ರಾಂತ್ ಮಾಸ್ಸಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಹೋಮ್ ಮೇಡ್ ಸ್ಟೋರೀಸ್’ ಮೂಲಕ ಈ ಯೋಜನೆ ಜಾರಿಗೆ ತರುತ್ತಿದ್ದಾರೆ. ಸರಣಿಯಲ್ಲಿ ಕಾಣಿಸಿಕೊಂಡಿದ್ದ ಕೆಫೆಯನ್ನೇ ಹೋಲುವಂತೆ ಈ ನೈಜ ಕೆಫೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ತೆರೆಯ ಮೇಲೆ ಕಂಡ ರಮಣೀಯ ವಾತಾವರಣವನ್ನು ಪ್ರವಾಸಿಗರು ನೇರವಾಗಿ ಅನುಭವಿಸಲು ಈ ಕೆಫೆಗಳು ಸಾಕ್ಷಿಯಾಗಲಿವೆ.

ಈ ವಿಶೇಷ ಕೆಫೆಗಳ ಜೊತೆಗೆ ಸುಮಾರು 20 ಕೊಠಡಿಗಳನ್ನು ಸಹ ನಿರ್ಮಿಸಲಾಗುತ್ತಿದೆ. ದೇಶದ ನಾನಾ ಭಾಗಗಳಿಂದ ಬರುವ ಕಲಾವಿದರು ಇಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಕಲಾವಿದರು ತಮ್ಮ ಹೊಸ ಯೋಜನೆಗಳ ಮೇಲೆ ಕೆಲಸ ಮಾಡಲು ಈ ಸ್ಥಳ ಅತ್ಯಂತ ಸೂಕ್ತ ವಾತಾವರಣ ಒದಗಿಸಲಿದೆ.

ಆರಂಭದಿಂದಲೂ ಹಿಮಾಚಲ ಪ್ರದೇಶದಲ್ಲಿ ಕೆಫೆ ತೆರೆಯುವುದು ವಿಕ್ರಾಂತ್ ಅವರ ಕನಸಾಗಿತ್ತು. ಅವರ ಪತ್ನಿ ಶೀತಲ್ ಠಾಕೂರ್ ಹಿಮಾಚಲ ಪ್ರದೇಶದ ಮೂಲದವರಾಗಿದ್ದಾರೆ. ಧರ್ಮಕೋಟ್ ಅಥವಾ ಧರ್ಮಶಾಲಾ ಸುತ್ತಮುತ್ತ ಕೆಫೆ ಆರಂಭಿಸುವ ಇಚ್ಛೆಯನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ

ನೆಟ್‌ಫ್ಲಿಕ್ಸ್‌ನಲ್ಲಿ ಬಂದ ‘ಮುಸಾಫಿರ್ ಕೆಫೆ’ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಶೈಲಿಯ ಕೆಫೆಗಳು ಇದೀಗ ನೈಜ ರೂಪ ಪಡೆಯುತ್ತಿರುವುದು ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ. ಬಣ್ಣದ ಲೋಕದ ಜೊತೆಗೆ ನಟ ವಿಕ್ರಾಂತ್ ಮಾಸ್ಸಿ ಉದ್ಯಮದಲ್ಲೂ ಹೊಸ ಹೆಜ್ಜೆ ಇಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us