ಮಹೇಶ್ ಬಾಬುಗೆ ಮಗಳು ಸಿತಾರಾ ಕೇಳಿದ್ರು ತಲೆತಿನ್ನೋ ಪ್ರಶ್ನೆ; ನಿಮಗೆ ಉತ್ತರಿಸೋಕೆ ಸಾಧ್ಯವಾ?

| Updated By: ಮಂಜುನಾಥ ಸಿ.

Updated on: Sep 01, 2024 | 3:20 PM

Mahesh Babu: ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇನ್​ಸ್ಟಾಗ್ರಾಂ ಸೆಲೆಬ್ರಿಟಿ ಆಗಿದ್ದಾರೆ. ತಂದೆಯೊಟ್ಟಿಗೆ ಆತ್ಮೀಯ ಬಂಧ ಹೊಂದಿರುವ ಸಿತಾರಾ, ತಂದೆಯೊಟ್ಟಿಗೆ ಚಿತ್ರ-ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ತಂದೆಗೆ ಒಂದು ತರ್ಲೆ ಪ್ರಶ್ನೆಯನ್ನು ಸಿತಾರಾ ಕೇಳಿದ್ದಾರೆ.

ಮಹೇಶ್ ಬಾಬುಗೆ ಮಗಳು ಸಿತಾರಾ ಕೇಳಿದ್ರು ತಲೆತಿನ್ನೋ ಪ್ರಶ್ನೆ; ನಿಮಗೆ ಉತ್ತರಿಸೋಕೆ ಸಾಧ್ಯವಾ?
Follow us on

ಒಂದಲ್ಲಾ ಒಂದು ಕಾರಣಕ್ಕೆ ಸಿತಾರಾ ಘಟ್ಟಮನೇನಿ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಮಹೇಶ್ ಬಾಬು ಮಗಳು ಎನ್ನುವ ಕಾರಣಕ್ಕೆ ಅವಳಿಗೆ ಸಖತ್ ಜನಪ್ರಿಯತೆ ದೊರೆತಿದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಶೀಘ್ರವೇ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಅಚ್ಚರಿ ಏನಿಲ್ಲ. ಆಗಾಗ ಸಿತಾರಾ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಆ ಪೈಕಿ ತಂದೆ ಮಹೇಶ್ ಬಾಬುಗೆ ಅವರು ಕೇಳಿದ ಪ್ರಶ್ನೆ ಗಮನ ಸೆಳೆದಿದೆ. ಆ ವಿಡಿಯೋ ಇಲ್ಲಿದೆ. ಆ ಪ್ರಶ್ನೆಗೆ ನೀವು ಉತ್ತರಿಸಬಹುದಾ ನೋಡಿ.

ಸಿತಾರಾ ಅವರು ನಾಚಿಕೆ ಸ್ವಭಾವದವರಲ್ಲ. ಕ್ಯಾಮೆರಾ ಕಂಡರೆ ಅವರು ದೂರ ಹೋಗುವವರೂ ಅಲ್ಲ. ಈ ಕಾರಣದಿಂದಲೇ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇಷ್ಟಕ್ಕೆ ನಿಂತಿಲ್ಲ. ಅವರು ತಂದೆ ಜೊತೆ ಸಾಕಷ್ಟು ಸಂದರ್ಶನಗಳನ್ನು ಎದುರಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಅವರು ಅತಿಥಿಯಾಗಿ ತೆರಳಿ ಮಿಂಚಿದ್ದಾರೆ. ಅಕುಲ್ ಬಾಲಾಜಿ ನಡೆಸಿಕೊಡೋ ತೆಲುಗು ರಿಯಾಲಿಟಿ ಶೋನಲ್ಲಿ ಸಿತಾರಾ ಹಾಗೂ ಮಹೇಶ್ ಬಾಬು ಆಗಮಿಸಿದ್ದರು. ಈ ವೇಳೆ ಕೇಳಿದ ಒಂದು ಪ್ರಶ್ನೆ ಗಮನ ಸೆಳೆದಿತ್ತು.

ಇದನ್ನೂ ಓದಿ:ಮಹೇಶ್ ಬಾಬು ಮಗಳ ಇಷ್ಟದ ನಟಿ ಕನ್ನಡದವರು ಅನ್ನೋದು ಗೊತ್ತಾ?

ಶೋನಲ್ಲಿ ‘ನಾನು ತಂದೆಗೆ ಪ್ರಶ್ನೆ ಕೇಳುತ್ತೇನೆ’ ಎಂದರು ಸಿತಾರಾ. ‘ಅಷ್ಟೆಲ್ಲ ಶಕ್ತಿ ಇದೆಯೇ’ ಎಂದು ಅಕುಲ್ ಬಾಲಾಜಿ ಕೇಳಿದರು. ‘ಸಾಕಷ್ಟು ಶಕ್ತಿ’ ಇದೆ ಎಂದರು ಸಿತಾರಾ. ‘ಬೌಲ್ನಲ್ಲಿರೋ ಬಿಸಿ ಹಾಲನ್ನು ಬೆಕ್ಕು ಕುಡಿದರೆ ಏನಾಗುತ್ತದೆ’ ಎಂದು ಸಿತಾರಾ ಕೇಳಿದರು. ಇದಕ್ಕೆ ಮಹೇಶ್ ಬಾಬು ಯೋಚಿಸಿ ಉತ್ತರಿಸಿದರು. ಹಾಲು ಬಿಸಿ ಇದೆ ಎನ್ನುವ ಕಾರಣಕ್ಕೆ ‘ಬೆಕ್ಕಿನ ಬಾಯಿ ಸುಡುತ್ತದೆ’ ಎಂದರು.

ಅಷ್ಟೆಲ್ಲ ಯೋಚಿಸುವ ಮಾತೇ ಇಲ್ಲ. ಏಕೆಂದರೆ ಇದು ಅಷ್ಟು ಗಂಭೀರವಾದ ಪ್ರಶ್ನೆ ಅಲ್ಲವೇ ಅಲ್ಲ. ಈ ಪ್ರಶ್ನೆಗೆ ಉತ್ತರ ತುಂಬಾನೇ ಸಿಂಪಲ್. ಬೌಲ್ನಲ್ಲಿರೋ ಹಾಲು ಖಾಲಿ ಆಗುತ್ತದೆ. ಈ ಉತ್ತರವನ್ನು ಸಿತಾರಾ ಹೇಳಿದರು. ಇದನ್ನು ಕೇಳುತ್ತಿದ್ದಂತೆ ಎಲ್ಲರೂ ನಕ್ಕರು.

ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಹೇಶ್ ಬಾಬು ಬರ್ತ್ಡೇ ದಿನ ಈ ಚಿತ್ರದ ಬಗ್ಗೆ ಅಪ್ಡೇಟ್ ಸಿಗಬಹುದು ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ, ಆ ರೀತಿಯ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಇನ್ನು, ಸಿತಾರಾ ಅವರು ಶಿಕ್ಷಣದ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ