AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು ಮಗಳ ಇಷ್ಟದ ನಟಿ ಕನ್ನಡದವರು ಅನ್ನೋದು ಗೊತ್ತಾ?

ಮಹೇಶ್ ಬಾಬು ಅವರ ಮಗಳು ಸಿತಾರಾ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಅವರು ಕನ್ನಡದ ನಟಿಯೊಬ್ಬರ ಬಗ್ಗೆ ಮಾತನಾಡಿದ್ದಾರೆ.

ಮಹೇಶ್ ಬಾಬು ಮಗಳ ಇಷ್ಟದ ನಟಿ ಕನ್ನಡದವರು ಅನ್ನೋದು ಗೊತ್ತಾ?
ಸಿತಾರಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 26, 2024 | 11:20 AM

Share

ನಟ ಮಹೇಶ್ ಬಾಬು ಅವರು ಸ್ಟಾರ್ ಹೀರೋ. ಅವರಿಗೆ ಟಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಅವರ ಮಗಳು ಸಿತಾರಾ ಘಟ್ಟಮನೇನಿ ಕೂಡ ಜನಪ್ರಿಯತೆ ಪಡೆದಿದ್ದಾರೆ. ಅವರು ಹಲವು ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋ ಸೂಚನೆ ನೀಡಿದ್ದಾರೆ. ಅವರಿಷ್ಟದ ನಟಿ ಕನ್ನಡದವರು ಅನ್ನೋ ವಿಚಾರ ನಿಮಗೆ ಗೊತ್ತೇ? ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ, ಆ ನಟಿಯ ಬಗ್ಗೆ ಬಹುತೇಕ ಕನ್ನಡಿಗರಿಗೆ ದ್ವೇಷ ಇದೆ!

ಸಿತಾರಾ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದರು. ‘ನಿಮ್ಮಿಷದ ಕಲಾವಿದರು ಯಾರು’ ಎಂದು ಕೇಳಿದಾಗ ಅವರು ತಂದೆ ಮಹೇಶ್ ಬಾಬು ಹೆಸರನ್ನು ತೆಗೆದುಕೊಂಡಿದ್ದಾರೆ. ಅವರನ್ನು ಬಿಟ್ಟು ಒಬ್ಬರ ಹೆಸರನ್ನು ಹೇಳಿ ಎಂದಾಗ ಅವರು ತೆಗೆದುಕೊಂಡಿದ್ದು ನಟಿ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಅವರ ಹೆಸರು. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಈ ಮೊದಲು ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಗಮನ ಸೆಳೆದಿತ್ತು. ಆಗ ಸಿತಾರಾಗೆ ರಶ್ಮಿಕಾ ಅವರ ಪರಿಚಯ ಆಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಸಿತಾರಾ ಅವರು ರಶ್ಮಿಕಾರ ಸಂದರ್ಶನ ಕೂಡ ಮಾಡಿದ್ದರು. ಈ ಎಲ್ಲಾ ಕಾರಣದಿಂದ ಸಿತಾರಾ ಹಾಗೂ ಮಹೇಶ್ ಬಾಬು ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ.

ಸಿತಾರಾ ಅವರು ಈ ಮೊದಲು ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನಲ್ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರೋ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: ಒಂದೇ ದಿನ ರಿಲೀಸ್ ಆಗಲಿವೆ ರಶ್ಮಿಕಾ ಮಂದಣ್ಣ ನಟನೆಯ 2 ಬಹುನಿರೀಕ್ಷಿತ ಸಿನಿಮಾಗಳು

ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಡಿಸೆಂಬರ್ 6ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಅವರ ನಟನೆಯ ‘ಛಾವ್ವಾ’ ಕೂಡ ಬಿಡುಗಡೆ ಹೊಂದುತ್ತಿದೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ