ಬಹುತಾರಾಗಣದ ‘ಓಂ’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

ಧನುಶ್, ಮಮ್ಮುಟಿ, ಸಾಯಿ ಪಲ್ಲವಿ, ಶ್ರೀಲೀಲಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಓಂ’ ಸಿನಿಮಾ ಇಂದು (ನವೆಂಬರ್ 20) ರಿಲೀಸ್ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಸದ್ದು ಮಾಡಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್​​ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿರುವ ಕಾರಣ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ನೋಡಿದವರು ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಹುತಾರಾಗಣದ ‘ಓಂ’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ಮಮ್ಮುಟಿ, ಧನುಶ್, ಸಾಯಿ ಪಲ್ಲವಿ, ಶ್ರೀಲೀಲಾ ಒಟ್ಟಿಗೆ ನಟನೆ ಮಾಡಿರುವ ತಮಿಳು ಸಿನಿಮಾ ‘ಓಂ’ ಇದೇ ವಾರ ರಿಲೀಸ್ ಆಗುತ್ತಿದೆ. ರಕ್ತ ಚಂದನ ಕಳ್ಳ ಸಾಗಣೆ ಕುರಿತಾದ ಕತೆಯನ್ನು ‘ಓಂ’ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ.

Updated on: Nov 20, 2026 | 1:28 PM

ಮುಖ್ಯಾಂಶಗಳು

  • ಧನುಶ್ ನಟನೆಯ ‘ಓಂ’ ಸಿನಿಮಾ ರಿಲೀಸ್
  • ಧನುಶ್, ಮಮ್ಮುಟಿ, ಸಾಯಿ ಪಲ್ಲವಿ, ಶ್ರೀಲೀಲಾ ನಟನೆಯ ಸಿನಿಮಾ
  • ಸಿನಿಮಾ ನೋಡಿದವರು ಹೇಳಿದ್ದೇನು?

ಸ್ಟಾರ್ ನಟರುಗಳಾದ ಧನುಶ್, ಮಮ್ಮುಟಿ, ಸಾಯಿ ಪಲ್ಲವಿ, ಶ್ರೀಲೀಲಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಓಂ’ ಸಿನಿಮಾ ಇಂದು (ನವೆಂಬರ್ 20) ರಿಲೀಸ್ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಸದ್ದು ಮಾಡಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್​​ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿರುವ ಕಾರಣ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ನೋಡಿದವರು ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಓಂ ಸಿನಿಮಾ ಅದ್ಭುತ ಆರಂಭವನ್ನು ಪಡೆದುಕೊಳ್ಳುತ್ತದೆ. ಇಂಟರ್ವೆಲ್​​ಗೆ ಮುಂಚೆ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಸಮಯ ಮೀಸಲಿಡಲಾಗಿದೆ. ಇಂಟರ್ವೆಲ್​​ ಬರುವ ತುಸು ಮುಂಚೆಯಷ್ಟೆ ಸಿನಿಮಾದ ನಿಜವಾದ ಕತೆ ಆರಂಭವಾಗುತ್ತದೆ. ಆದರೆ ಸಿನಿಮಾ ಆಸಕ್ತಿಕರವಾಗಿದೆ. ನಿರ್ದೇಶಕರು ಹಿಡಿದಿಡುವಂಥಹ ಚಿತ್ರಕತೆ ಬರೆದಿದ್ದಾರೆ ಎಂದಿದ್ದಾರೆ ನೆಲ್ಸನ್ ಎಂಬ ಟ್ವಿಟ್ಟರ್ ಬಳಕೆದಾರ.

ಕಾರ್ತಿಕ್ಕು ಎಂಬುವರು ಟ್ವೀಟ್ ಮಾಡಿ, ಸಿನಿಮಾದ ಕೆಲವು ಭಾಗಗಳು ಮನರಂಜನಾತ್ಮಕವಾಗಿವೆ. ಪಾತ್ರಗಳು ಚೆನ್ನಾಗಿವೆ, ಅವುಗಳನ್ನು ಪರಿಚಯ ಮಾಡಿರುವ ರೀತಿಯೂ ಚೆನ್ನಾಗಿದೆ. ಆದರೆ ಸಿನಿಮಾದ ಹಲವು ದೃಶ್ಯಗಳನ್ನು ಮೊದಲೇ ಊಹೆ ಮಾಡಬಹುದು. ಸೆಕೆಂಡ್ ಹಾಫ್ ಸಹ ಚೆನ್ನಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಜಾರ್ಜ್ ಎಂಬುವರು ಸಿನಿಮಾದ ಮೊದಲಾರ್ಧದ ಬಗ್ಗೆ ಟ್ವೀಟ್ ಮಾಡಿದ್ದು, ‘ಸಿನಿಮಾದ ಮೊದಲಾರ್ಧ ಬ್ರಿಲಿಯಂಟ್ ಆಗಿದೆ. ಹಿಡಿದಿಟ್ಟುಕೊಳ್ಳುತ್ತದೆ, ಅಷ್ಟೇ ರೊಚಕವಾಗಿದೆ. ಸಿನಿಮಾದ ನಿರ್ದೇಶಕ ಮಾಡಿರುವ ರಿಸರ್ಚ್ ಚಿತ್ರಕತೆಯಲ್ಲಿ ಕಾಣುತ್ತದೆ. ಧನುಶ್ ಮತ್ತು ಮಮ್ಮುಟಿಯ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಸಾಯಿ ಪಲ್ಲವಿ ನಟನೆಯೂ ಅದ್ಭುತ. ಇಂಟರ್ವೆಲ್ ಅಂತೂ ಯಾರೂ ಊಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಆಲ್ ಅಬೌಟ್ ಮೂವೀಸ್ ಎಂಬ ಟ್ವಿಟ್ಟರ್ ಪೇಜಿನಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆ ಹಂಚಿಕೊಳ್ಳಲಾಗಿದೆ. ‘ಓಂ ಎಂಬುದು ಆಪರೇಷನ್ ಮೋಲ್ ಅಲ್ಲ, ಬದಲಿಗೆ ಆಪರೇಷನ್ ಮಿಡ್ ಎಂದಾಗಬೇಕು. ಸಿನಿಮಾನಲ್ಲಿ ಧನುಶ್ ಸಪ್ಪೆಯಾಗಿ ಕಾಣುತ್ತಾರೆ. ಸಾಯಿ ಪಲ್ಲವಿ ನಟನೆ ಸಾಧಾರಣವಾಗಿದೆ. ಶ್ರೀಲೀಲಾ ಪಾತ್ರ ಇರುವುದೇ ಗೊತ್ತಾಗುವುದಿಲ್ಲ. ಇಡೀ ಸಿನಿಮಾನಲ್ಲಿ ಮಮ್ಮುಟಿ ಒಬ್ಬರೇ ಪಾಸಿಟಿವ್’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us