ಹಾಲಿವುಡ್​ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು

Updated on: Jun 03, 2026 | 12:36 PM

Indian Movie: ಬಾಲಿವುಡ್ ಸೇರಿದಂತೆ ಕೆಲವು ಚಿತ್ರರಂಗಗಳು ಹಾಲಿವುಡ್ ಮತ್ತು ಇತರೆ ಕೆಲವು ವಿದೇಶಿ ಸಿನಿಮಾಗಳನ್ನು ಸಹ ರೀಮೇಕ್ ಮಾಡಿ ನಿರ್ಮಾಣ ಮಾಡಿವೆ. ಅದರಲ್ಲೂ ಹಾಲಿವುಡ್ ಸಿನಿಮಾಗಳಿಂದ ಭಾರತದ ನಿರ್ದೇಶಕರು ಸ್ಪೂರ್ತಿ ಪಡೆದಿದ್ದೇ ಹೆಚ್ಚು. ಆದರೆ ಭಾರತದ ಸಿನಿಮಾಗಳು ಹಾಲಿವುಡ್​ನಲ್ಲಿ ರೀಮೇಕ್ ಮಾಡಲಾಗಿದೆ. ಆದರೆ ಆ ಸಂಖ್ಯೆ ಬಹಳ ಕಡಿಮೆ. ಇಲ್ಲಿದೆ ಅಂಥಹಾ ಕೆಲ ಸಿನಿಮಾಗಳ ಪಟ್ಟಿ.

1 / 7
1993 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ನಟನೆಯ ‘ಡರ್’ (ಕನ್ನಡದಲ್ಲಿ ಪ್ರೀತ್ಸೆ) ಸಿನಿಮಾವನ್ನು ಹಾಲಿವುಡ್ ರೀಮೇಕ್ ಮಾಡಿತ್ತು. ಕತೆ ಮಾತ್ರವಲ್ಲ ಹೆಸರನ್ನೂ ಬದಲಾಯಿಸಲಿಲ್ಲ. ಹಿಂದಿಯಲ್ಲಿ ‘ಡರ್’ ಎಂದಿದ್ದ ಹೆಸರನ್ನು ಇಂಗ್ಲೀಷ್​​ನಲ್ಲಿ ‘ಫಿಯರ್’ ಎಂದು ಮಾಡಲಾಯ್ತು. ಈ ಸಿನಿಮಾ 1996 ರಲ್ಲಿ ಬಿಡುಗಡೆ ಆಯ್ತು.

1993 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ನಟನೆಯ ‘ಡರ್’ (ಕನ್ನಡದಲ್ಲಿ ಪ್ರೀತ್ಸೆ) ಸಿನಿಮಾವನ್ನು ಹಾಲಿವುಡ್ ರೀಮೇಕ್ ಮಾಡಿತ್ತು. ಕತೆ ಮಾತ್ರವಲ್ಲ ಹೆಸರನ್ನೂ ಬದಲಾಯಿಸಲಿಲ್ಲ. ಹಿಂದಿಯಲ್ಲಿ ‘ಡರ್’ ಎಂದಿದ್ದ ಹೆಸರನ್ನು ಇಂಗ್ಲೀಷ್​​ನಲ್ಲಿ ‘ಫಿಯರ್’ ಎಂದು ಮಾಡಲಾಯ್ತು. ಈ ಸಿನಿಮಾ 1996 ರಲ್ಲಿ ಬಿಡುಗಡೆ ಆಯ್ತು.

2 / 7

1995 ರಲ್ಲಿ ಬಿಡುಗಡೆ ಆದ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ ಆಮಿರ್ ಖಾನ್, ಜಾಕಿ ಶ್ರಾಫ್, ಊರ್ಮಿಳಾ ಮತೋಡ್ಕರ್ ನಟಿಸಿದ್ದ ‘ರಂಗೀಲಾ’ ಸಿನಿಮಾ ಹಾಲಿವುಡ್​​ನಲ್ಲಿ ‘ವಿನ್ ಎ ಡೇಟ್ ವಿತ್ ಹ್ಯಾಮಿಲ್ಟನ್’ ಹೆಸರಿನ ಸಿನಿಮಾ ಮಾಡಲಾಯ್ತು. ಆ ಸಿನಿಮಾ ಫ್ಲಾಪ್ ಆಯ್ತು.

3 / 7

ಮಲಯಾಳಂನ ‘ದೃಶ್ಯಂ’ ಸಿನಿಮಾ, ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಭಾರತೀಯ ಸಿನಿಮಾ. ಈ ಸಿನಿಮಾ ಚೈನೀಸ್​​ಗೆ ರೀಮೇಕ್ ಆಗಿದೆ, ಇಂಡೋನೇಷ್ಯಾ, ಶ್ರೀಲಂಕಾ, ಕೊರಿಯಾಗಳಲ್ಲಿ ಈಗಾಗಲೇ ರೀಮೇಕ್ ಆಗಿದ್ದು, ಪನೊರಮಾ ಮೂವೀಸ್ ಈಗ ಹಾಲಿವುಡ್​​ನಲ್ಲಿ ಸಿನಿಮಾ ರೀಮೇಕ್ ಮಾಡುತ್ತಿದೆ. ಸ್ಪ್ಯಾನಿಷ್​​ನಲ್ಲೂ ಸಿನಿಮಾ ರೀಮೇಕ್ ಆಗಲಿದೆ.

4 / 7

ಬಾಲಿವುಡ್​​ನ ಸೂಪರ್ ಹಿಟ್ ಸಿನಿಮಾ ‘ಫರಿಂದಾ’ ಹಾಲಿವುಡ್​​ನಲ್ಲಿ ‘ಬ್ರೋಕನ್ ಹಾರ್ಸಸ್’ ಹೆಸರಿನಲ್ಲಿ 2015 ರಲ್ಲಿ ರೀಮೇಕ್ ಆಯ್ತು. ಆದರೆ ಈ ರೀಮೇಕ್ ಮಾಡಿದ್ದು ಖುದ್ದು ವಿದು ವಿನೋದ್ ಚೋಪ್ರಾ. ‘ಫರಿಂದಾ’ ಸಿನಿಮಾವನ್ನು ಸಹ ಇವರೇ ನಿರ್ದೇಶಿಸಿದ್ದರು.

5 / 7

ಪವನ್ ಕುಮಾರ್ ನಿರ್ದೇಶಿಸಿ, ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಕನ್ನಡದ ‘ಯೂ ಟರ್ನ್’ ಸಿನಿಮಾವನ್ನು ತೆಲುಗು, ಹಿಂದಿಯ ಜೊತೆಗೆ ಫಿಲಿಫೀನ್ಸ್ ಮತ್ತು ಶ್ರೀಲಂಕಾದ ಸಿಂಹಳ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ.

6 / 7

ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಕರೀನಾ, ಬೊಮನ್ ಇರಾನಿ ನಟಿಸಿದ್ದ ‘3 ಇಡಿಯಟ್ಸ್’ ಸಿನಿಮಾವನ್ನು ಮೆಕ್ಸಿಕೋನಲ್ಲಿ ‘3 ಇಡಿಯೋಟಾಸ್’ ಹೆಸರಿನಲ್ಲಿ ರೀಮೇಕ್ ಮಾಡಲಾಯ್ತು. ಆ ಸಿನಿಮಾ ಅಲ್ಲಿಯೂ ಬ್ಲಾಕ್ ಬಸ್ಟರ್ ಆಯ್ತು.

7 / 7

ಲಕ್ಷ್ಯ ಮತ್ತು ರಾಘವ್ ಜುರೆಲ್ ನಟಿಸಿದ್ದ ಹಿಂಸಾತ್ಮಕ ಸಿನಿಮಾ ‘ಕಿಲ್’ ಸಹ ಇದೀಗ ಹಾಲಿವುಡ್​​ಗೆ ರೀಮೇಕ್ ಆಗಲಿದೆ. ‘ಜಾನ್ ವಿಕ್’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾ ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ ಇದೀಗ ‘ಕಿಲ್’ ಸಿನಿಮಾದ ರೀಮೇಕ್ ಹಕ್ಕು ಖರೀದಿ ಮಾಡಿದೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us