ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

Hollywood Actress: ಹಾಲಿವುಡ್​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳತ್ತೆ ಮೆಚ್ಚುಗೆ ಮತ್ತು ಗೌರವದಿಂದ ನೋಡುತ್ತಿದ್ದಾರೆ. ಹಲವು ಹಾಲಿವುಡ್​​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ಹಾಲಿವುಡ್ ನಟಿಯೊಬ್ಬರು ತಮಗೆ ಪ್ರಭಾಸ್ ಹಾಗೂ ಆಮಿರ್ ಖಾನ್ ಎಂದರೆ ಇಷ್ಟ ಅವರು ನಟಿಸಿರುವ ಸಿನಿಮಾಗಳನ್ನು ತಾವು ಪದೇ ಪದೇ ನೋಡುವುದಾಗಿ ಹೇಳಿಕೊಂಡಿದ್ದಾರೆ.

ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ
Prabhas Emma

Updated on: May 28, 2026 | 1:07 PM

ಭಾರತೀಯ ನಟ-ನಟಿಯರು ಹಾಲಿವುಡ್ (Hollywood)​ ಸಿನಿಮಾಗಳಲ್ಲಿ ನಟಿಸಲು, ಹಾಲಿವುಡ್ ಸ್ಟಾರ್​​ಗಳನ್ನು ಭೇಟಿ ಆಗಲು ಉತ್ಸುಕರಾಗಿರುತ್ತಿದ್ದ ಸಮಯ ಇತ್ತು. ಆದರೆ ಈಗ ಸಾಕಷ್ಟು ಬದಲಾಗಿದೆ. ಹಾಲಿವುಡ್​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳತ್ತೆ ಮೆಚ್ಚುಗೆ ಮತ್ತು ಗೌರವದಿಂದ ನೋಡುತ್ತಿದ್ದಾರೆ. ಹಲವು ಹಾಲಿವುಡ್​​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ಹಾಲಿವುಡ್ ನಟಿಯೊಬ್ಬರು ತಮಗೆ ಪ್ರಭಾಸ್ ಹಾಗೂ ಆಮಿರ್ ಖಾನ್ ಎಂದರೆ ಇಷ್ಟ ಅವರು ನಟಿಸಿರುವ ಸಿನಿಮಾಗಳನ್ನು ತಾವು ಪದೇ ಪದೇ ನೋಡುವುದಾಗಿ ಹೇಳಿಕೊಂಡಿದ್ದಾರೆ.

ಹಾಲಿವುಡ್​​ನ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ವೆಡ್​​ನೆಸ್​ ಡೇ’ ಭಾರತದಲ್ಲಿಯೂ ಬಲು ಜನಪ್ರಿಯ. ಈ ವೆಬ್ ಸರಣಿಯ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿರುವ ನಟಿ ಎಮ್ಮಾ ಮೈಯರ್ಸ್​​ ಇದೀಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡಿದ್ದು, ತಮಗೆ ಭಾರತೀಯ ಸಿನಿಮಾಗಳೆಂದರೆ ಬಲು ಇಷ್ಟ ಎಂದಿದ್ದಾರೆ. ಅದರಲ್ಲೂ ತಮಗೆ ಪ್ರಭಾಸ್ ನಟಿಸಿರುವ ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳು ಬಹಳ ಇಷ್ಟ, ನನ್ನ ಗೆಳೆಯರಿಗೆ ಅದನ್ನು ನೋಡುವಂತೆ ರೆಕೆಮೆಂಡ್ ಮಾಡುತ್ತಿರುತ್ತೇನೆ’ ಎಂದಿದ್ದಾರೆ.

ತಮ್ಮ ಹೊಸ ಸಿನಿಮಾ ‘ಎ ಮೈನ್‌ಕ್ರಾಫ್ಟ್ ಮೂವಿ’ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ಎಮ್ಮಾ, ಅಮೀರ್ ಖಾನ್ ನಟನೆಯ ‘3 ಇಡಿಯಟ್ಸ್’ ಮತ್ತು ಎಸ್‌ಎಸ್‌ ರಾಜಮೌಳಿ ನಿರ್ದೇಶನದ, ಪ್ರಭಾಸ್ ನಟನೆಯ ‘ಬಾಹುಬಲಿ’ ಚಿತ್ರಗಳು ತಮ್ಮ ಆಲ್-ಟೈಮ್ ಫೇವರಿಟ್ ಎಂದು ಅವರು ತಿಳಿಸಿದ್ದಾರೆ. ‘ನಾನು ಬಾಲಿವುಡ್ ಸಿನಿಮಾಗಳ ದೊಡ್ಡ ಅಭಿಮಾನಿ. ನಾನು ಮೊದಲ ಬಾರಿಗೆ ನೋಡಿದ ಭಾರತೀಯ ಸಿನಿಮಾ ‘3 ಇಡಿಯಟ್ಸ್’. ಆ ಚಿತ್ರ ನನಗೆ ಎಷ್ಟು ಇಷ್ಟವಾಯಿತೆಂದರೆ, ಅಲ್ಲಿಂದ ನಾನು ಭಾರತೀಯ ಚಿತ್ರಗಳನ್ನು ಹುಡುಕಿ ನೋಡಲು ಆರಂಭಿಸಿದೆ. ಅದರ ಕಥೆ, ಭಾವನೆಗಳು ಮತ್ತು ಹಾಡುಗಳು ನನ್ನನ್ನು ಸಂಪೂರ್ಣವಾಗಿ ಸೆಳೆದವು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

‘ನಾನು ‘ಬಾಹುಬಲಿ’ ಚಿತ್ರವನ್ನೂ ನೋಡಿದ್ದೇನೆ ಮತ್ತು ಅದು ನಿಜಕ್ಕೂ ಅದ್ಭುತವಾಗಿತ್ತು. ಅದರ ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಕಲ್ಪನೆ ಬೆರಗುಗೊಳಿಸುವಂತಿತ್ತು. ಪ್ರಭಾಸ್ ಅವರ ನಟನೆ ನನಗೆ ತುಂಬಾ ಇಷ್ಟವಾಯಿತು’ ಎಂದು ಎಮ್ಮಾ ಮೈಯರ್ಸ್ ಭಾರತೀಯ ಚಿತ್ರರಂಗದ ಮೇಲಿರುವ ತಮ್ಮ ಕ್ರೇಜ್ ಅನ್ನು ಬಿಚ್ಚಿಟ್ಟಿದ್ದಾರೆ.

ಸದ್ಯಕ್ಕೆ ಎಮ್ಮಾ ಮೈಯರ್ಸ್ ಜನಪ್ರಿಯ ವಿಡಿಯೋ ಗೇಮ್ ಆಧಾರಿತ ಲೈವ್-ಆಕ್ಷನ್ ಚಿತ್ರ ‘ಎ ಮೈನ್‌ಕ್ರಾಫ್ಟ್ ಮೂವಿ’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ಅವರು ಜ್ಯಾಕ್ ಬ್ಲಾಕ್ ಮತ್ತು ಜೇಸನ್ ಮೊಮೊವಾ ಅವರಂತಹ ಪ್ರಮುಖ ಹಾಲಿವುಡ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಜಗತ್ತಿನಾದ್ಯಂತ ಕೋಟ್ಯಂತರ ವೀಕ್ಷಕರು ಕಾತರದಿಂದ ಕಾಯುತ್ತಿರುವ ‘ವೆಡ್ನೆಸ್‌ಡೇ ಸೀಸನ್ 3’ ರಲ್ಲೂ ಅವರು ಮರಳಿ ಎನಿಡ್ ಸಿಂಕ್ಲೇರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us