‘ಅವೇಂಜರ್ಸ್: ಡೂಮ್ಸ್​​ಡೇ’ ಅಡ್ವಾನ್ಸ್ ಬುಕಿಂಗ್​​ಗೆ ಭರ್ಜರಿ ಸ್ಪಂದನೆ

ಇಂದು (ನವೆಂಬರ್ 17) ರಂದು ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದ್ದು, ಆರಂಭವಾದ ಕೆಲವೇ ಗಂಟೆಗಳಲ್ಲಿ ಸಿನಿಮಾದ 50 ಸಾವಿರಕ್ಕೂ ಹೆಚ್ಚು ಟಿಕೆಟ್​​ಗಳು ಬುಕ್​​ಮೈ ಶೋ ಮೂಲಕ ಮಾರಾಟವಾಗಿವೆ. ದೇಶದಾದ್ಯಂತ ಕೇವಲ 500 ಪ್ರದರ್ಶನಗಳನ್ನಷ್ಟೆ ‘ಅವೆಂಜರ್ಸ್: ಡೂಮ್ಸ್‌ಡೇ’ ಪಡೆದುಕೊಂಡಿದ್ದು, ಈಗಾಗಲೇ 50,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮಾರಾಟದ ಹೆಚ್ಚಿನ ಭಾಗವು ಪಿವಿಆರ್ ಮತ್ತು ಐನಾಕ್ಸ್​​​ಗಳಲ್ಲಿ ಆಗಿದೆ. ಸಿಂಗಲ್ ಸ್ಕ್ರೀನ್ ಅಥವಾ ಖಾಸಗಿ ಒಡೆತನದ ಮಲ್ಟಿಪ್ಲೆಕ್ಸ್​​ಗಳಲ್ಲಿ ಇನ್ನೂ ಅಡ್ವಾನ್ಸ್ ಬುಕಿಂಗ್ ಆರಂಭವೇ ಆಗಿಲ್ಲ.

‘ಅವೇಂಜರ್ಸ್: ಡೂಮ್ಸ್​​ಡೇ’ ಅಡ್ವಾನ್ಸ್ ಬುಕಿಂಗ್​​ಗೆ ಭರ್ಜರಿ ಸ್ಪಂದನೆ
Avengers Doomsday

Updated on: Nov 17, 2026 | 5:51 PM

ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ಹಾಲಿವುಡ್ ಸಿನಿಮಾ ‘ಅವೆಂಜರ್ಸ್: ಡೂಮ್ಸ್‌ಡೇ’. ಹಾಲಿವುಡ್ ಸಿನಿಮಾ ಒಂದರಲ್ಲಿ ಹಿಂದೆಂದೂ ಸೇರದ ಭಾರಿ ಸಂಖ್ಯೆಯ ಸ್ಟಾರ್ ನಟ, ನಟಿಯರು ಈ ಸಿನಿಮಾಕ್ಕಾಗಿ ಒಂದಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಸ್ಟಾರ್ಗಳ ಈ ಸಿನಿಮಾನಲ್ಲಿ ನಟನೆ ಮಾಡಿರುವುದು ವಿಶೇಷ. ‘ಐರನ್ ಮ್ಯಾನ್’ ಪಾತ್ರಧಾರಿಯಾಗಿ ಮಿಂಚಿದ್ದ ರಾಬರ್ಟ್ ಡೌನಿ ಜೂನಿಯರ್ ಈ ಸಿನಿಮಾನಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಅದೂ ಸಹ ಈ ಸಿನಿಮಾದ ಹೈಪ್ ಹೆಚ್ಚಾಗಲು ಪ್ರಮುಖ ಕಾರಣಗಳಲ್ಲಿ ಒಂದು. ಇದೀಗ ಈ ಸಿನಿಮಾದ ಅಡ್ವನ್ಸ್ ಬುಕಿಂಗ್ ಆರಂಭವಾಗಿದ್ದು, ಮೊದಲ ದಿನವೇ ಭಾರತದಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ ‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾ.

ಇಂದು (ನವೆಂಬರ್ 17) ರಂದು ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದ್ದು, ಆರಂಭವಾದ ಕೆಲವೇ ಗಂಟೆಗಳಲ್ಲಿ ಸಿನಿಮಾದ 50 ಸಾವಿರಕ್ಕೂ ಹೆಚ್ಚು ಟಿಕೆಟ್​​ಗಳು ಬುಕ್​​ಮೈ ಶೋ ಮೂಲಕ ಮಾರಾಟವಾಗಿವೆ. ದೇಶದಾದ್ಯಂತ ಕೇವಲ 500 ಪ್ರದರ್ಶನಗಳನ್ನಷ್ಟೆ ‘ಅವೆಂಜರ್ಸ್: ಡೂಮ್ಸ್‌ಡೇ’ ಪಡೆದುಕೊಂಡಿದ್ದು, ಈಗಾಗಲೇ 50,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮಾರಾಟದ ಹೆಚ್ಚಿನ ಭಾಗವು ಪಿವಿಆರ್ ಮತ್ತು ಐನಾಕ್ಸ್​​​ಗಳಲ್ಲಿ ಆಗಿದೆ. ಸಿಂಗಲ್ ಸ್ಕ್ರೀನ್ ಅಥವಾ ಖಾಸಗಿ ಒಡೆತನದ ಮಲ್ಟಿಪ್ಲೆಕ್ಸ್​​ಗಳಲ್ಲಿ ಇನ್ನೂ ಅಡ್ವಾನ್ಸ್ ಬುಕಿಂಗ್ ಆರಂಭವೇ ಆಗಿಲ್ಲ.

Loading...

ಇದನ್ನೂ ಓದಿ:‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು

ಸಿನಿಮಾದ ಕ್ರೇಜ್ ಅದ್ಯಾವ ಮಟ್ಟಿಗೆ ಇದೆಯೆಂದರೆ ಸಿನಿಮಾದ ಮೊದಲ ದಿನದ ಎಲ್ಲ ಶೋಗಳು ಮುಂಗಡ ಬುಕಿಂಗ್​​ನಿಂದಲೇ ಹೌಸ್​​ಫುಲ್ ಆಗುವ ದಟ್ಟ ಸಾಧ್ಯತೆ ಇದ್ದು, ಮೊದಲ ದಿನದ ಶೋನ ಟಿಕೆಟ್​​ಗಳು ಈ ವಾರದ ಒಳಗಾಗಿಯೇ ಮುಂಗಡವಾಗಿ ಬುಕ್ ಆಗಲಿವೆ. ವಿಶೇಷವೆಂದರೆ ‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾದ ಶೋಗಳು ಮುಂಬೈ ಮತ್ತು ಕೇರಳದ ಹಲವು ಕಡೆ ಮಧ್ಯರಾತ್ರಿಯೇ ಪ್ರಾರಂಭ ಆಗಲಿದೆ. ಮುಂಬೈ ಮತ್ತು ಕೇರಳದಲ್ಲಿ ರಾತ್ರಿ 12 ಗಂಟೆಗೆ ವಿಶೇಷ ಶೋ ಪ್ರದರ್ಶಿಸಲಾಗುತ್ತಿದೆ. ಉತ್ತರ ಭಾರತದ ಹಲವು ನಗರಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಶೋ ಪ್ರದರ್ಶಿಸಲಾಗುತ್ತಿದೆ.

ಪ್ರಸ್ತುತ ಕೇವಲ ಸಾಮಾನ್ಯ ಮಲ್ಟಿಪ್ಲೆಕ್ಸ್​ ಥಿಯೇಟರ್​​ಗಳಲ್ಲಿ ಮಾತ್ರವೇ ಸಿನಿಮಾದ ಮುಂಗಡ ಬುಕಿಂಗ್ ಆರಂಭ ಆಗಿದೆ. ಪಿಎಕ್ಸ್‌ಎಲ್ (PXL), 4ಡಿಎಕ್ಸ್ (4DX), ಡಾಲ್ಬಿ (Dolby) ಮುಂತಾದ ಪ್ರೀಮಿಯಂ ಫಾರ್ಮ್ಯಾಟ್‌ಗಳ ಟಿಕೆಟ್‌ಗಳು ಇನ್ನೂ ಮಾರಾಟಕ್ಕೆ ಬಂದಿಲ್ಲ. ಮೊದಲು ಸಾಮಾನ್ಯ ಸ್ಕ್ರೀನ್‌ಗಳನ್ನು ಭರ್ತಿ ಮಾಡಿ, ಬಳಿಕ ಪ್ರೀಮಿಯಂ ಫಾರ್ಮ್ಯಾಟ್‌ಗಳ ಬುಕಿಂಗ್ ಆರಂಭಿಸುವ ಯೋಜನೆ ಇದೆ. ಆದರೂ ಇದು ಅವೆಂಜರ್ಸ್ ಸಿನಿಮಾ ಆಗಿರುವುದರಿಂದ, ಯಾವುದೇ ಸ್ಕ್ರೀನ್ ತೆರೆದರೂ ಭರ್ತಿ ಖಾತ್ರಿ ಎನ್ನಲಾಗುತ್ತಿದೆ. ‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾವು ಇಂದಿಗೆ ಸರಿಯಾಗಿ ಒಂದು ತಿಂಗಳ ಬಳಿಕ ಅಂದರೆ ಡಿಸೆಂಬರ್ 17ಕ್ಕೆ ಭಾರತದಲ್ಲಿ ರಿಲೀಸ್ ಆಗಲಿದೆ. ಅದರ ಮಾರನೇಯ ದಿನ ಅಂದರೆ ಡಿಸೆಂಬರ್ 18ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us