ಚಲನಚಿತ್ರ ರಂಗಕ್ಕೆ ಕಮಲ್ ಹಾಸನ್ ಮನವಿ: ನೀಡಿದ ಸಲಹೆ ಏನು?

Kamal Haasan movie: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲ ಮನವಿಗಳನ್ನು ಭಾರತೀಯ ಜನರಿಗೆ ಮಾಡಿದ್ದಾರೆ. ವರ್ಕ್​ ಫ್ರಂ ಹೋಮ್ ಮಾಡಿ, ಚಿನ್ನ ಖರೀದಿಸಬೇಡಿ, ವಿದೇಶ ಪ್ರಯಾಣ ಕಡಿಮೆ ಇನ್ನಿತರೆ ಸಲಹೆಗಳನ್ನು ನೀಡಿದ್ದಾರೆ. ಇದೀಗ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಮಲ್ ಹಾಸನ್ ಚಿತ್ರರಂಗದ ಆರ್ಥಿಕತೆಗೆ ಸಂಬಂಧಿಸಿದಂತೆ ಇದೇ ರೀತಿಯ ಸಲಹೆಗಳನ್ನು ನೀಡಿದ್ದು, ಸಿನಿಮಾ ನಿರ್ಮಾಪಕರು ಖರ್ಚು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.

ಚಲನಚಿತ್ರ ರಂಗಕ್ಕೆ ಕಮಲ್ ಹಾಸನ್ ಮನವಿ: ನೀಡಿದ ಸಲಹೆ ಏನು?
Kamal Haasan

Updated on: May 16, 2026 | 5:32 PM

ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲ ಮನವಿಗಳನ್ನು ಭಾರತೀಯ ಜನರಿಗೆ ಮಾಡಿದ್ದಾರೆ. ವರ್ಕ್​ ಫ್ರಂ ಹೋಮ್ ಮಾಡಿ, ಚಿನ್ನ ಖರೀದಿಸಬೇಡಿ, ವಿದೇಶ ಪ್ರಯಾಣ ಕಡಿಮೆ ಇನ್ನಿತರೆ ಸಲಹೆಗಳನ್ನು ನೀಡಿದ್ದಾರೆ. ಇದೀಗ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಮಲ್ ಹಾಸನ್ (Kamal Haasan) ಚಿತ್ರರಂಗದ ಆರ್ಥಿಕತೆಗೆ ಸಂಬಂಧಿಸಿದಂತೆ ಇದೇ ರೀತಿಯ ಸಲಹೆಗಳನ್ನು ನೀಡಿದ್ದು, ಸಿನಿಮಾ ನಿರ್ಮಾಪಕರು ಖರ್ಚು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಗಗನಕ್ಕೇರುತ್ತಿರುವ ಚಲನಚಿತ್ರ ನಿರ್ಮಾಣ ವೆಚ್ಚಗಳು ಮತ್ತು ತಾರೆಯರ ಸಂಭಾವನೆಗಳ ಕುರಿತು ಹಿರಿಯ ನಟ ಕಮಲ್ ಹಾಸನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾ ಉದ್ಯಮವನ್ನು ಉಳಿಸಲು ನಿರ್ಮಾಣ ವೆಚ್ಚಗಳನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಕಮಲ್ ಹಾಸನ್ ಹೇಳಿದ್ದರೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಎಂದು ಕಮಲ್ ಸಲಹೆ ನೀಡಿದ್ದಾರೆ.

ಹೆಚ್ಚುತ್ತಿರುವ ಬೆಲೆಗಳು ಸಿನಿಮಾ ನಿರ್ಮಾಣದ ಮೇಲೆ ಮತ್ತು ಸಿನಿಮಾ ಟಿಕೆಟ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ. ನಟರು, ನಿರ್ಮಾಪಕರು, ಚಿತ್ರರಂಗದ ಎಲ್ಲ ವಿಭಾಗದವರು ಸೇರಿ ಸಿನಿಮಾ ರಂಗದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಪ್ರತಿ ಲವ್ ಸ್ಟೋರಿಗೆ ಪ್ಯಾರಿಸ್​​ಗೆ ಹೋಗುವುದು ಪ್ರತಿ ಹನಿಮೂನ್ ಶಾಟ್​​ಗೆ ತೆಗೆಯಲು ಸ್ವಿಟ್ಜರ್​​ಲ್ಯಾಂಡ್​​ಗೆ ಹೋಗುವುದನ್ನು ನಿರ್ದೇಶಕರು ಬಿಡಬೇಕಿದೆ ಎಂದಿರುವ ಕಮಲ್ ಹಾಸನ್, ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದನ್ನು ಕಡಿಮೆ ಮಾಡಿ ಎಂದಿದ್ದಾರೆ.

ಇದನ್ನೂ ಓದಿ:ಕಮಲ್ ಹಾಸನ್ ಮೇಲೆ ಭುಗಿಲೆದ್ದ ಆಕ್ರೋಶ: 50 ಸಾವಿರ ಮರಳಿಸುವಂತೆ ಒತ್ತಾಯ

ಕಮಲ್ ಹಾಸನ್ ಅವರ ಹೇಳಿಕೆ ಭಿನ್ನ-ಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ವತಃ ಕಮಲ್ ನಟಿಸುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್ ಮಾತನಾಡಿ, ‘ಕಮಲ್ ಹಾಸನ್ ಅವರು ಹೇಳಿರುವುದು ನೂರಕ್ಕೆ ನೂರು ನಿಜ ಮತ್ತು ಉದ್ಯಮದ ಹಿತದೃಷ್ಟಿಯಿಂದ ಅದು ಅತ್ಯಂತ ಪ್ರಸ್ತುತವಾಗಿದೆ. ಆದರೆ, ಇಂದಿನ ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದ ಸಿನಿಮಾಗಳನ್ನು ನೀಡಬೇಕಾದರೆ ಭಾರಿ ಹೂಡಿಕೆ ಅನಿವಾರ್ಯವಾಗುತ್ತದೆ. ಕಥೆಯ ಬೇಡಿಕೆಗೆ ತಕ್ಕಂತೆ ತಂತ್ರಜ್ಞಾನ ಮತ್ತು ನಟರ ಕಾಂಬಿನೇಷನ್ ಅನ್ನು ತರಬೇಕಾದಾಗ ಬಜೆಟ್ ತಾನಾಗಿಯೇ ದೊಡ್ಡದಾಗುತ್ತದೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಚಿತ್ರೀಕರಣದ ದಿನಗಳನ್ನು ಯೋಜಿತವಾಗಿ ನಿರ್ವಹಿಸಲು ನಿರ್ಮಾಪಕರು ಹೆಚ್ಚು ಜಾಗರೂಕರಾಗಿರಬೇಕು’ ಎಂದು ಹೇಳಿದರು.

ಕಮಲ್ ಹಾಸನ್ ಪ್ರಸ್ತುತ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ರಜನೀಕಾಂತ್ ಅವರ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವಕಾರ್ತಿಕೇಯನ್ ನಟಿಸಲಿರುವ ಮತ್ತೊಂದು ಸಿನಿಮಾವನ್ನು ಸಹ ಅವರು ನಿರ್ಮಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sat, 16 May 26

Follow Us