ನರೇಂದ್ರ ಮೋದಿ ಹುಟ್ಟುಹಬ್ಬ: ಪವನ್-ಕಮಲ್ ಸಹಿತ ಹಲವು ಸೆಲೆಬ್ರಿಟಿಗಳಿಂದ ಶುಭಾಶಯ

ಬಿಜೆಪಿಯ ಹಲವು ಮುಖಂಡರು, ನಾಯಕರು ದೇವಸ್ಥಾನಗಳಲ್ಲಿ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆಗಳನ್ನು ಸಹ ಮಾಡಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಹೇಳಿದ್ದಾರೆ. ಯಾರು ಯಾವ ರೀತಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. ಮಾಹಿತಿ ಇಲ್ಲಿದೆ...

ನರೇಂದ್ರ ಮೋದಿ ಹುಟ್ಟುಹಬ್ಬ: ಪವನ್-ಕಮಲ್ ಸಹಿತ ಹಲವು ಸೆಲೆಬ್ರಿಟಿಗಳಿಂದ ಶುಭಾಶಯ
Narendra Modi Birthday

Updated on: Sep 17, 2026 | 3:52 PM

ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 17). ಮೋದಿ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪ್ರಧಾನಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಬಿಜೆಪಿಯ ಹಲವು ಮುಖಂಡರು, ನಾಯಕರು ದೇವಸ್ಥಾನಗಳಲ್ಲಿ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆಗಳನ್ನು ಸಹ ಮಾಡಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಹೇಳಿದ್ದಾರೆ. ಯಾರು ಯಾವ ರೀತಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. ಮಾಹಿತಿ ಇಲ್ಲಿದೆ…

ಪವನ್ ಕಲ್ಯಾಣ್ ಶುಭಾಶಯ

ಸ್ಟಾರ್ ನಟ, ಆಂಧ್ರ ಪ್ರದೇಶ ಉಪಮುಖ್ಯ ಮಂತ್ರಿಯೂ ಆಗಿರುವ ಪವನ್ ಕಲ್ಯಾಣ್, ಸುದೀರ್ಘವಾದ ಸಂದೇಶವನ್ನು ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹಂಚಿಕೊಂಡಿದ್ದಾರೆ. ಮೋದಿ ಅವರು ಜೀವನವನ್ನೇ ಭಾರತಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಭಾರತ ಪ್ರಗತಿ ಸಾಧಿಸಿದೆ ಎಂದಿರುವ ಪವನ್ ಕಲ್ಯಾಣ್, ಆಂಧ್ರ ಪ್ರದೇಶಕ್ಕೆ ಅಪಾರ ನೆರವನ್ನು ಮೋದಿ ನೀಡಿದ್ದಾರೆ ಎಂದಿದ್ದಾರೆ. ಜೊತೆಗೆ 2047ಕ್ಕೆ ವಿಕಸಿತ ಭಾರತ ನಮ್ಮದಾಗಲಿದೆ’ ಎಂದಿದ್ದಾರೆ. ಪವನ್ ಅವರ ಟ್ವಿಟ್ಟರ್ ಪೋಸ್ಟ್ ಇಲ್ಲಿದೆ…

ಅಕ್ಷಯ್ ಕುಮಾರ್

ಬಾಲಿವುಡ್ ನಟ ಮತ್ತು ಮೋದಿ ಅವರಿಗೆ ಆಪ್ತರೆಂದೇ ಹೇಳಲಾಗುವ ಅಕ್ಷಯ್ ಕುಮಾರ್ ಅವರು ಮೋದಿ ಅವರ ಹುಟ್ಟುಹಬ್ಬಕ್ಕೆ ಹಿಂದಿಯಲ್ಲಿ ಶುಭಾಶಯ ಕೋರಿದ್ದು, ‘ಇಂದು ಪ್ರಧಾನಿ ಅವರ ಹುಟ್ಟುಹಬ್ಬ, ಈ ದಿನವನ್ನು ಸೇವಾ ಸಂಕಲ್ಪ ದಿನ’ ಎಂದು ಆಚರಿಸಲಾಗುತ್ತಿದ್ದು, ಹುಟ್ಟುಹಬ್ಬವನ್ನು ಆಚರಿಸಲು ಇದಕ್ಕಿಂತಲೂ ಉತ್ತಮ ದಿನ ಇರಲು ಸಾಧ್ಯವಿಲ್ಲ’ ಎಂದಿದ್ದಾರೆ.

ನಟ ಮೋಹನ್​​ಲಾಲ್

ಮಲಯಾಳಂ ಸ್ಟಾರ್ ನಟ ಮೋಹನ್​​ಲಾಲ್ ಸಹ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು, ‘ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇಶದ ಪ್ರಗತಿಗಾಗಿ ನಿಮ್ಮ ಅವಿರತ ಬದ್ಧತೆಯು ಕೋಟ್ಯಂತರ ಜನರಿಗೆ ಸ್ಫೂರ್ತಿಯನ್ನು ನೀಡುತ್ತಲೇ ಬಂದಿದೆ. ಈ ವರ್ಷವು ನಿಮಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ರಾಷ್ಟ್ರ ಸೇವೆಯಲ್ಲಿ ನಿರಂತರ ಯಶಸ್ಸನ್ನು ತಂದುಕೊಡಲಿ’ ಎಂದಿದ್ದಾರೆ.

ಕಮಲ್ ಹಾಸನ್

ನಟ ಕಮಲ್ ಹಾಸನ್ ಸಹ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ಮುಂಬರುವ ವರ್ಷವು ನಿಮಗೆ ಉತ್ತಮ ಆರೋಗ್ಯ, ಶಕ್ತಿ ಹಾಗೂ ನಮ್ಮ ಮಹಾನ್ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನಿರಂತರ ಅವಕಾಶಗಳನ್ನು ತರಲಿ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಸರಳವಾಗಿ ವಿಶ್ ಮಾಡಿದ್ದಾರೆ ಕಮಲ್ ಹಾಸನ್.

ಅನುಪಮ್ ಖೇರ್

ತಮ್ಮನ್ನು ತಾವು ‘ಮೋದಿಯ ಭಕ್ತ’ ಎಂದೇ ಕರೆದುಕೊಳ್ಳುವ ಬಾಲಿವುಡ್ ನಟ ಅನುಪಮ್ ಖೇರ್ ಅವರು ಸಹ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದು, ‘ಮೋದಿ ಅವರು ಕೇವಲ ಭಾರತೀಯರಿಗೆ ಮಾತ್ರವೇ ಅಲ್ಲ, ವಿಶ್ವದ ಹಲವು ರಾಷ್ಟ್ರಗಳ ಜನರಿಗೆ ಮಾದರಿ ಹಾಗೂ ಸ್ಪೂರ್ತಿ ಆಗಿದ್ದಾರೆ. ಮೊದಲ ಬಾರಿಗೆ ಅಹಮದಾಬಾದ್​​ನಲ್ಲಿ ಮೋದಿ ಅವರನ್ನು ಭೇಟಿ ಆದ ಬಗ್ಗೆಯೂ ಸಹ ಅವರು ಬರೆದುಕೊಂಡಿದ್ದಾರೆ. ಅನುಪಮ್ ಅವರ ಟ್ವೀಟ್ ಇಲ್ಲಿದೆ…

 

 

Loading...
Unable to load recommendations.
Follow Us