‘ವಾರಣಾಸಿ’ಯ ಹಾಡು, ಹಿನ್ನೆಲೆ ಸಂಗೀತದ ಬಗ್ಗೆ ಕೀರವಾಣಿ ಬಿಟ್ಟಿಚ್ಚ ಆಸಕ್ತಿಕರ ಮಾಹಿತಿ

Varanasi movie: ರಾಜಮೌಳಿ ಈ ವರೆಗೆ ನಿರ್ದೇಶಿಸಿರುವ ಎಲ್ಲ ಸಿನಿಮಾಗಳಿಗೆ ಎಂಎಂ ಕೀರವಾಣಿ ಅವರೇ ಸಂಗೀತ ನೀಡಿದ್ದಾರೆ. ರಾಜಮೌಳಿ ಅವರ ಈ ಹಿಂದಿನ ಬ್ಲಾಕ್ ಬಸ್ಟರ್ ಸಿನಿಮಾ ‘ಆರ್​​ಆರ್​​ಆರ್’ನ ‘ನಾಟು ನಾಟು’ ಹಾಡಿಗೆ ಕೀರವಾಣಿ ಅವರಿಗೆ ಆಸ್ಕರ್ ಸಹ ದೊರೆತಿದೆ. ಇದೀಗ ಅವರೇ ‘ವಾರಣಾಸಿ’ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಹಾಡುಗಳು, ಹಿನ್ನೆಲೆ ಸಂಗೀತದ ಬಗ್ಗೆ ಮಾತನಾಡಿದ್ದಾರೆ.

‘ವಾರಣಾಸಿ’ಯ ಹಾಡು, ಹಿನ್ನೆಲೆ ಸಂಗೀತದ ಬಗ್ಗೆ ಕೀರವಾಣಿ ಬಿಟ್ಟಿಚ್ಚ ಆಸಕ್ತಿಕರ ಮಾಹಿತಿ
Mm Keeravani Varanasi

Updated on: Aug 20, 2026 | 12:59 PM

ರಾಜಮೌಳಿ (Rajamouli) ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಇದೊಂದು ಅಡ್ವೇಂಚರ್ ಆಕ್ಷನ್ ಥ್ರಿಲ್ಲರ್​ ಸಿನಿಮಾ ಆಗಿದ್ದು, ಸಿನಿಮಾ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಸಿನಿಮಾದ ಚಿತ್ರೀಕರಣದ ಮಾಹಿತಿಯನ್ನು ಇತ್ತೀಚೆಗಷ್ಟೆ ನಿರ್ದೇಶಕ ರಾಜಮೌಳಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಸಿನಿಮಾದ ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ, ಎಷ್ಟು ಭಾಗ ಚಿತ್ರೀಕರಣ ಪೂರ್ತಿ ಆಗಿದೆ ಇತರೆ ಮಾಹಿತಿಗಳನ್ನು ಹೇಳಿದ್ದರು. ಇದೀಗ ಸಿನಿಮಾದ ಸಂಗೀತ ನಿರ್ದೇಶಕ, ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಿನಿಮಾದ ಹಾಡುಗಳು, ಹಿನ್ನೆಲೆ ಸಂಗೀತದ ಬಗ್ಗೆ ಮಾತನಾಡಿದ್ದಾರೆ.

ಎಂಎಂ ಕೀರವಾಣಿ ಹೇಳಿರುವಂತೆ ‘ವಾರಣಾಸಿ’ ಸಿನಿಮಾ ಒಟ್ಟು ಆರು ಹಾಡುಗಳನ್ನು ಒಳಗೊಂಡಿರಲಿದೆಯಂತೆ. ರಾಜಮೌಳಿ ಅವರ ಈ ಹಿಂದಿನ ಸಿನಿಮಾ ‘ಆರ್​​ಆರ್​​ಆರ್’ನಲ್ಲಿ ಒಟ್ಟು ಏಳು ಹಾಡುಗಳಿದ್ದವು. ಆದರೆ ‘ವಾರಣಾಸಿ’ಯಲ್ಲಿ ಇರುವುದು ಆರು ಹಾಡುಗಳಷ್ಟೆ. ಇವುಗಳಲ್ಲಿ ಎರಡು ಹಾಡುಗಳು ದೇವರ ಕುರಿತಾದ ಹಾಡುಗಳಾಗಿರಲಿವೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ಹಿನ್ನೆಲೆ ಸಂಗೀತದ ಕೆಲಸವು ಸೆಪ್ಟೆಂಬರ್ ತಿಂಗಳಿನಿಂದ ಪ್ರಾರಂಭ ಆಗಲಿದೆ ಎಂಬ ಮಾಹಿತಿಯನ್ನು ಸಹ ಕೀರವಾಣಿ ನೀಡಿದ್ದಾರೆ.

‘ವಾರಣಾಸಿ’ ಸಿನಿಮಾದ ಸಂಗೀತದ ವಿಶೇಷ ಕಾಳಜಿಯನ್ನು ರಾಜಮೌಳಿ ಮತ್ತು ಖುದ್ದು ಕೀರವಾಣಿ ವಹಿಸಿದ್ದಾರೆ. ರಾಜಮೌಳಿಯ ಈ ಹಿಂದಿನ ಸಿನಿಮಾ ‘ಆರ್​​ಆರ್​​ಆರ್’ನ ‘ನಾಟು ನಾಟು’ ಹಾಡಿಗೆ ಆಸ್ಕರ್ ಧಕ್ಕಿದೆ. ಈ ಬಾರಿ ಅದಕ್ಕಿಂತಲೂ ಉತ್ತಮವಾದ ಹಾಡನ್ನು ನೀಡುವ ಪ್ರಯತ್ನದಲ್ಲಿ ಕೀರವಾಣಿ ಮತ್ತು ತಂಡ ಇದೆ. ‘ವಾರಣಾಸಿ’ ಸಿನಿಮಾದ ‘ಸಂಚಾರಿ’ ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ. ಹಾಡನ್ನು ಶ್ರುತಿ ಹಾಸನ್ ಹಾಡಿದ್ದಾರೆ. ಇನ್ನೂ ಕೆಲ ಹಾಡುಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿವೆ.

ಇದನ್ನೂ ಓದಿ: ವಾರಣಾಸಿ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುತ್ತಿರುವುದೇಕೆ? ಕಾರಣ ತಿಳಿಸಿದ ರಾಜಮೌಳಿ

ರಾಜಮೌಳಿ ಈ ವರೆಗೆ ನಿರ್ದೇಶನ ಮಾಡಿರುವ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಅವರೇ ಸಂಗೀತ ನೀಡಿದ್ದಾರೆ. ಈ ಹಿಂದೊಮ್ಮೆ ಕೀರವಾಣಿ ಅವರೇ ಹೇಳಿದ್ದಂತೆ, ರಾಜಮೌಳಿ ಅವರು ಸಿನಿಮಾದ ಚಿತ್ರೀಕರಣ ಆಗುವ ಮೊದಲು ಕೀರವಾಣಿ ಜೊತೆಗೆ ಸಿನಿಮಾದ ಸಂಗೀತ ಬಗ್ಗೆ ಚರ್ಚಿಸುತ್ತಾರಂತೆ. ಅದಾದ ಬಳಿಕ ಸುಮಾರು ಒಂದು ವರ್ಷದ ಬಳಿಕ ಮತ್ತೆ ಬಂದು ಹಾಡುಗಳ ಬಗ್ಗೆ ಚರ್ಚೆ ಮಾಡುತ್ತಾರಂತೆ. ಅದಾದ ಒಂದು ವರ್ಷದ ಬಳಿಕ ಚಿತ್ರೀಕರಣ ಮುಗಿಸಿ ಹಿನ್ನೆಲೆ ಸಂಗೀತ ಮಾಡಿಸುತ್ತಾರಂತೆ. ‘ವಾರಣಾಸಿ’ಗೂ ಬಹುಷಃ ಇದೇ ಮಾದರಿಯನ್ನು ಅನುಸರಿಸಿದಂತಿದೆ.

‘ವಾರಣಾಸಿ’ ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಇದೊಂದು ಆಕ್ಷನ್ ಅಡ್ವೇಂಚರ್ ಕತೆ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us