ಪಿಎಂ ನರೇಂದ್ರ ಮೋದಿ ಜನ್ಮದಿನಕ್ಕೆ ‘ಆಶೀರ್ವಾದ್ ಕಾ ದಿಯಾ’ ಸಾಂಗ್ ರಿಲೀಸ್

ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಸಂಗೀತ ಸಂಯೋಜಕ ಅಮನ್ ಪಂತ್ "ಆಶೀರ್ವಾದ್ ಕಾ ದಿಯಾ" ಎಂಬ ವಿಶೇಷ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಅವರ 25 ವರ್ಷಗಳ ದೇಶಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಸಂಗೀತ ರೂಪಕ ಮೂಡಿಬಂದಿದ್ದು, ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ

ಪಿಎಂ ನರೇಂದ್ರ ಮೋದಿ ಜನ್ಮದಿನಕ್ಕೆ ‘ಆಶೀರ್ವಾದ್ ಕಾ ದಿಯಾ’ ಸಾಂಗ್ ರಿಲೀಸ್
ಮೋದಿ
Image Credit source: PMO Twitter

Updated on: Sep 17, 2026 | 11:17 AM

ಮುಖ್ಯಾಂಶಗಳು

  • ಮೋದಿ 76ನೇ ಜನ್ಮದಿನಕ್ಕೆ ವಿಶೇಷ ಗಿಫ್ಟ್
  • 25 ವರ್ಷಗಳ ಸಾರ್ವಜನಿಕ ಸೇವೆ
  • 'ಆಶೀರ್ವಾದ್ ಕಾ ದಿಯಾ' ಹಾಡಿನಲ್ಲಿ ನಾಯಕತ್ವದ ಅನಾವರಣ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 17) 76ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಸಂಗೀತ ಸಂಯೋಜಕ ಅಮನ್ ಪಂತ್ ಅವರು ‘ಆಶೀರ್ವಾದ್ ಕಾ ದಿಯಾ’ ಎಂಬ ವಿಶೇಷ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ದೇಶಕ್ಕಾಗಿ ಸಲ್ಲಿಸಿರುವ 25 ವರ್ಷಗಳ ನಿರಂತರ ಸಾರ್ವಜನಿಕ ಸೇವೆಯನ್ನು ಸ್ಮರಿಸುವ ಮತ್ತು ಗೌರವಿಸುವ ಉದ್ದೇಶದಿಂದ ಈ ಹಾಡನ್ನು ರಚಿಸಲಾಗಿದೆ. ಇಂದು ಈ ಹಾಡು ರಿಲೀಸ್ ಆಗಿದ್ದು, ಈ ಗೀತೆಯು ಪ್ರಧಾನಿಯವರ ನಾಯಕತ್ವ ಹಾಗೂ ದೇಶಪ್ರೇಮದ ಸಂದೇಶವನ್ನು ಸಾರುತ್ತದೆ.

ಪ್ರಧಾನಿ ಅವರ ಧೀಮಂತ ವ್ಯಕ್ತಿತ್ವ, ದಿಟ್ಟ ನಾಯಕತ್ವ ಹಾಗೂ ನವ ಭಾರತದ ನಿರ್ಮಾಣಕ್ಕಾಗಿ ಅವರು ಹೆಣೆದಿರುವ ದೂರದೃಷ್ಟಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ಹಾಡಿನ ಸ್ವರಸಂಯೋಜನೆ ಮಾಡಲಾಗಿದೆ. ಅಮನ್ ಪಂತ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಗೀತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಹಾಗೂ ಸಂಗೀತ ಪ್ರಿಯರು ಈ ಗೀತೆಯನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿಯವರಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ: 76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ: ರಾಷ್ಟ್ರಪತಿಯಿಂದ ಕೇಂದ್ರ ಸಚಿವರವರೆಗೆ ಶುಭಾಶಯಗಳ ಮಹಾಪೂರ

ಮೋದಿ ಅವರು ದೇಶಕ್ಕಾಗಿ ಏನೆಲ್ಲ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ವಿಡಿಯೋ ಸಾಂಗ್​​ನಲ್ಲಿ ಉಲ್ಲೇಖ ಮಾಡಲಾಗಿದೆ. ವಿಡಿಯೋ ಮೂಲಕ ಇದನ್ನು ವಿವರಿಸಲಾಗಿದೆ.

ಸಂಗೀತದ ಮೂಲಕ ನಾಯಕತ್ವ ಮತ್ತು ಜನಸೇವೆಯ ಮಹತ್ವವನ್ನು ಸಾರುವ ಈ ವಿಶೇಷ ಹಾಡು ಪ್ರಧಾನಿ ಮೋದಿ ಅಭಿಮಾನಿಗಳಲ್ಲಿ ಸಂತಸ ಹಾಗೂ ಹಬ್ಬದ ವಾತಾವರಣವನ್ನು ನಿರ್ಮಿಸಿದೆ. ಅಮನ್ ಪಂತ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಈ ಗೀತೆಯ ಪ್ರಚಾರ ಮತ್ತು ಹಿನ್ನೆಲೆ ವೀಡಿಯೊಗಳು ಹಂಚಿಕೆಯಾಗುತ್ತಿದ್ದು, ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:21 am, Thu, 17 September 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us