ಗಡಿಯಲ್ಲಿ ನಿಂತು ಶತ್ರುಗಳ ವಿರುದ್ಧ ಹೋರಾಡಿದ್ದ ನಾನಾ ಪಟೇಕರ್

ಚಿತ್ರರಂಗದವರು ಸಿನಿಮಾ ಹಿಟ್ ಮಾಡಿಕೊಳ್ಳಲು ಹಣ ಮಾಡಿಕೊಳ್ಳಲು ಮಾತ್ರ ಭಾರತೀಯ ಸೇನೆಯ ಬಗ್ಗೆ ಸಿನಿಮಾಗಳನ್ನು ಮಾಡುತ್ತಾರೆ, ಸೇನೆಯ ಬಗ್ಗೆ ಪ್ರೀತಿ, ಗೌರವಗಳನ್ನು ತೋರಿಸುತ್ತಾರೆ. ಆದರೆ ನಾನಾ ಪಟೇಕರ್ ಇದಕ್ಕೆ ವ್ಯತಿರಿಕ್ತವಾಗಿದ್ದರು. ನಾನಾ ಪಟೇಕರ್ ಸಹ ಸೇನೆಯ ಕುರಿತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದು ಮಾತ್ರವೇ ಅಲ್ಲದೆ, ಸಂಕಷ್ಟದ ಸಮಯದಲ್ಲಿ ಅಂದರೆ ಯುದ್ಧದ ಸಮಯದಲ್ಲಿ ಖುದ್ದು ಸೇನಾ ಸಮವಸ್ತ್ರ ಧರಿಸಿ ಸೈನಿಕರೊಟ್ಟಿಗೆ ಹೋಗಿ ಯುದ್ಧದಲ್ಲಿ ಭಾಗಿ ಆಗಿದ್ದರು.

ಗಡಿಯಲ್ಲಿ ನಿಂತು ಶತ್ರುಗಳ ವಿರುದ್ಧ ಹೋರಾಡಿದ್ದ ನಾನಾ ಪಟೇಕರ್
Nana Patekar Kargil

Updated on: Oct 08, 2026 | 11:37 AM

ಮುಖ್ಯಾಂಶಗಳು

  • ಕಾರ್ಗಿಲ್ ಯುದ್ಧದಲ್ಲಿ ಭಾಗಿ ಆಗಿದ್ದ ನಾನಾ ಪಟೇಕರ್
  • ಮೂರು ವರ್ಷ ಸೈನ್ಯದ ತರಬೇತಿ ಪಡೆದಿದ್ದ ನಾನಾ ಪಟೇಕರ್
  • ಯುದ್ಧದಲ್ಲಿ ಸೈನಿಕರ ಜೊತೆ ನಿಂತು ಹೋರಾಡಿದ್ದ ಸ್ಟಾರ್ ನಟ

ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಬಾಲಿವುಡ್​​ನವರು ಭಾರತೀಯ ಸೇನೆಯ ಬಗ್ಗೆ ಹಲವಾರು ಸಿನಿಮಾಗಳನ್ನು ಮಾಡಿಬಿಟ್ಟಿದ್ದಾರೆ. ಭಾರತೀಯ ಸೇನೆಯ ಶಕ್ತಿ, ಧೈರ್ಯ, ದೇಶಭಕ್ತಿಯನ್ನು ಮೆರೆಸುವ ಈ ರೀತಿಯ ಸಿನಿಮಾಗಳು ಬಹುತೇಕ ಹಿಟ್ ಆಗಿವೆ. ಚಿತ್ರರಂಗದವರು ಸಿನಿಮಾ ಹಿಟ್ ಮಾಡಿಕೊಳ್ಳಲು ಹಣ ಮಾಡಿಕೊಳ್ಳಲು ಮಾತ್ರ ಭಾರತೀಯ ಸೇನೆಯ ಬಗ್ಗೆ ಸಿನಿಮಾಗಳನ್ನು ಮಾಡುತ್ತಾರೆ, ಸೇನೆಯ ಬಗ್ಗೆ ಪ್ರೀತಿ, ಗೌರವಗಳನ್ನು ತೋರಿಸುತ್ತಾರೆ. ಆದರೆ ನಾನಾ ಪಟೇಕರ್ ಇದಕ್ಕೆ ವ್ಯತಿರಿಕ್ತವಾಗಿದ್ದರು. ನಾನಾ ಪಟೇಕರ್ ಸಹ ಸೇನೆಯ ಕುರಿತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದು ಮಾತ್ರವೇ ಅಲ್ಲದೆ, ಸಂಕಷ್ಟದ ಸಮಯದಲ್ಲಿ ಅಂದರೆ ಯುದ್ಧದ ಸಮಯದಲ್ಲಿ ಖುದ್ದು ಸೇನಾ ಸಮವಸ್ತ್ರ ಧರಿಸಿ ಸೈನಿಕರೊಟ್ಟಿಗೆ ಹೋಗಿ ಯುದ್ಧದಲ್ಲಿ ಭಾಗಿ ಆಗಿದ್ದರು.

1991ರಲ್ಲಿ ಬಿಡುಗಡೆ ಆಗಿದ್ದ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಸಿನಿಮಾನಲ್ಲಿ ನಾನಾ ಪಟೇಕರ್ ಅವರು ಸೈನಿಕನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾನಲ್ಲಿ ನಟಿಸುವ ಕಾರಣಕ್ಕಾಗಿ ಅವರು ಮರಾಠಾ ಲೈಟ್ ಇನ್​​ಫ್ಯಾಂಟ್ರಿಯಲ್ಲಿ ಮೂರು ವರ್ಷಗಳ ತರಬೇತಿ ಪಡೆದಿದ್ದರು. ಈ ಸಮಯದಲ್ಲಿ ಅವರು ಸೈನಿಕ ವೃತ್ತಿಯ ಬಗ್ಗೆ, ಯುದ್ಧದ ತರಬೇತಿಗಳನ್ನು ಸಹ ಪಡೆದುಕೊಂಡಿದ್ದರು. ಅದಾದ ಕೆಲ ವರ್ಷಗಳ ಬಳಿಕ ಅಂದರೆ 1999 ರಲ್ಲಿ ಕಾರ್ಗಿಲ್ ಯುದ್ಧ ಶುರುವಾದಾಗ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರಿಂದ ವಿಶೇಷ ಅನುಮತಿ ಪಡೆದುಕೊಂಡು ಯುದ್ಧದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ರಾಮಾಯಣ; ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರಾ ಕಚೇರಿ, ಮನೆ ಮೇಲೆ ಐಟಿ ದಾಳಿ

ಲೈನ್​ ಆಫ್ ಕಂಟ್ರೋಲ್ ಬಳಿ ನಿಯೋಜನೆಗೊಂಡಿದ್ದ ನಾನಾ ಪಟೇಕರ್ ಅವರು ಸುಮಾರು 60 ದಿನಗಳ ಕಾಲ ಸೈನಿಕರೊಟ್ಟಿಗೆ ಯುದ್ಧ ಭೂಮಿಯಲ್ಲಿದ್ದರು. ಅವರು ದ್ರಾಸ್, ಕುಪ್ವಾರ, ಬಾರಾಮುಲ್ಲಾ, ಸೋಪೋರ್ ಮತ್ತು ಲೇಹ್‌ನಂತಹ ಯುದ್ಧದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದರು. ಅವರು ‘ಕ್ವಿಕ್ ರಿಪೋರ್ಟ್ ಟೀಮ್​​’ನ ಭಾಗವಾಗಿ ಸೇವೆ ಸಲ್ಲಿಸಿದರು, ಸೇನಾ ಆಸ್ಪತ್ರೆಗಳಲ್ಲಿ ನೆರವಾದರು ಹಾಗೂ ಗಸ್ತು ಕರ್ತವ್ಯಗಳನ್ನು ನಿರ್ವಹಿಸಿದರು. ಪಾಕಿಸ್ತಾನದ ಸೈನಿಕರೊಟ್ಟಿಗೆ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಬಹಳ ಕಠಿಣವಾದ ಪರಿಸ್ಥಿತಿಗಳಲ್ಲಿ ಅವರು ಕೆಲಸ ಮಾಡಿದ್ದರು. ಅವರೇ ಒಮ್ಮೆ ಹೇಳಿಕೊಂಡಿದ್ದಂತೆ ಸೇನೆಗೆ ಸೇರುವಾಗ 76 ಕೆಜಿ ಇದ್ದ ನಾನಾ ಪಟೇಕರ್ ಎರಡು ತಿಂಗಳಲ್ಲಿ 20 ಕೆಜಿ ತೂಕ ಕಳೆದುಕೊಂಡಿದ್ದರಂತೆ. ಕಾರ್ಗಿಲ್ ಸಮಯದಲ್ಲಿ ಸಾಕಷ್ಟು ರೋಚಕ ಅನುಭವಗಳನ್ನು ಸಹ ನಾನಾ ಪಟೇಕರ್ ಪಡೆದುಕೊಂಡಿದ್ದರು. ಈ ಬಗ್ಗೆ ಹಿಂದೆ ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿದ್ದಾರೆ. ಇದೀಗ ನಾನಾ ಪಟೇಕರ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು, ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Thu, 8 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us