ಈ ವಾರ ರಿಲೀಸ್ ಆಗುತ್ತಿವೆ ಸ್ಟಾರ್ ನಟರ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

Updated on: Nov 18, 2026 | 6:41 PM

ಮತ್ತೊಂದು ಶುಕ್ರವಾರ ಹೊಸ್ತಿಲಲ್ಲಿದೆ. ಪ್ರತಿ ವಾರದಂತೆ ಈ ವಾರವೂ ಸಹ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಕಳೆದ ಕೆಲ ವಾರಕ್ಕೆ ಹೋಲಿಸಿದರೆ ಈ ವಾರ ತುಸು ಹೆಚ್ಚೇ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತಮಿಳು ಭಾಷೆಗಳಿಂದಲೂ ಸಹ ಕೆಲ ಪ್ರಮುಖ ಸಿನಿಮಾಗಳು, ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ...

1 / 6
ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ರೊಮ್ಯಾಂಟಿಕ್ ಸಿನಿಮಾ ‘ಬೃಂದವಿಹಾರಿ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ‘ಪ್ರೇಮದ ಊರಲಿ’ ಸಿನಿಮಾದ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಿಕೊಂಡಿದ್ದ ಈ ಸಿನಿಮಾ ಈಗ ತೆರೆಗೆ ಬರುತ್ತಿದೆ. ಸಿನಿಮಾ ಅನ್ನು ‘ಕೃಷ್ಣಂ ಪ್ರಣಯ ಸಖಿ’ ನಿರ್ದೇಶಕ ಶ್ರೀನಿವಾಸ ರಾಜು ನಿರ್ದೇಶನ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ರೊಮ್ಯಾಂಟಿಕ್ ಸಿನಿಮಾ ‘ಬೃಂದವಿಹಾರಿ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ‘ಪ್ರೇಮದ ಊರಲಿ’ ಸಿನಿಮಾದ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಿಕೊಂಡಿದ್ದ ಈ ಸಿನಿಮಾ ಈಗ ತೆರೆಗೆ ಬರುತ್ತಿದೆ. ಸಿನಿಮಾ ಅನ್ನು ‘ಕೃಷ್ಣಂ ಪ್ರಣಯ ಸಖಿ’ ನಿರ್ದೇಶಕ ಶ್ರೀನಿವಾಸ ರಾಜು ನಿರ್ದೇಶನ ಮಾಡಿದ್ದಾರೆ.

2 / 6

ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ ನಟನೆ ಮಾಡಿರುವ ಹಾರರ್​, ಕಾಮಿಡಿ ಸಿನಿಮಾ ‘ಶಂಕರಾಭರಣ’ ಈ ವಾರ ರಿಲೀಸ್ ಆಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಗಮನ ಸೆಳೆದಿದೆ. ಈ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಇದೇ ವಾರ ‘ಮಾರಿಗೆ ದಾರಿ’ ಎಂಬ ಕನ್ನಡ ಸಿನಿಮಾ ಸಹ ರಿಲೀಸ್ ಆಗುತ್ತಿದೆ.

3 / 6

ದುಲ್ಕರ್ ಸಲ್ಮಾನ್ ನಟನೆಯ ಮಾಡಿರುವ ತೆಲುಗು ಸಿನಿಮಾ ‘ಆಕಾಶಂಲೊ ಒಕ ತಾರಾ’ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಪತಿಯೊಬ್ಬ, ಪತ್ನಿಯ ಗಗನಯಾತ್ರಿ ಆಗುವ ಕನಸನ್ನು ನನಸು ಮಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

4 / 6

‘ಆಕಾಶಂಲೊ ಒಕ ತಾರಾ’ ಸಿನಿಮಾದ ಕತೆಯನ್ನು ಆಧರಿಸಿ ‘ಡಿಯರ್ ಆಸ್ಟ್ರೊನಾಟ್’ ತೆಲುಗು ಸಿನಿಮಾ ಸಹ ಈ ವಾರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಹ ಪತಿಯೊಬ್ಬ ತನ್ನ ಪತ್ನಿಯ ಗಗನಯಾತ್ರಿ ಆಗುವ ಕನಸನ್ನು ನನಸು ಮಾಡುವ ಯತ್ನ ಮಾಡುವ ಕತೆಯನ್ನು ಒಳಗೊಂಡಿದೆ.

5 / 6

ಕೆಲ ವರ್ಷಗಳ ಹಿಂದೆ ರಿಲೀಸ್ ಆಗಿದ್ದ ‘ಈ ನಗರಾನಿಕಿ ಏಮೈಯ್ಯಿಂದಿ’ ತೆಲುಗು ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಸಿನಿಮಾದ ಸೀಕ್ವೆಲ್ ಅದೇ ಸಿನಿಮಾದ ಸೀಕ್ವೆಲ್ ‘ಈ ನಗರಾನಿಕಿ ಏಮಯ್ಯಿಂದಿ-ರಿಪೀಟ್’ ರಿಲೀಸ್ ಆಗುತ್ತಿದೆ. ಇದೊಂದು ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾ ಆಗಿರಲಿದೆ.

6 / 6

ಮಮ್ಮುಟಿ, ಧನುಶ್, ಸಾಯಿ ಪಲ್ಲವಿ, ಶ್ರೀಲೀಲಾ ಒಟ್ಟಿಗೆ ನಟನೆ ಮಾಡಿರುವ ತಮಿಳು ಸಿನಿಮಾ ‘ಓಂ’ ಇದೇ ವಾರ ರಿಲೀಸ್ ಆಗುತ್ತಿದೆ. ರಕ್ತ ಚಂದನ ಕಳ್ಳ ಸಾಗಣೆ ಕುರಿತಾದ ಕತೆಯನ್ನು ‘ಓಂ’ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ.

Published On - 6:34 pm, Wed, 18 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us