‘ಡೀಕ್ಲಾಸಿಫೈಡ್: ಆಪರೇಷನ್ ಸಿಂಧೂರ’ ನೋಡಲೇಬೇಕಾದ ಡಾಕ್ಯುಮೆಂಟರಿ

declassified operation sindoor: ಪಾಕ್ ನೆಲದಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿಯಲ್ಲಿ ಹಲವು ಭಯೋತ್ಪಾದಕರು ಮತ್ತು ಅವರ ಅಡುತಾಣಗಳನ್ನು ಧ್ವಂಸ ಮಾಡಲಾಗಿತ್ತು. ಅತ್ಯಂತ ರೋಚಕವಾದ ಆಪರೇಷನ್ ಇದಾಗಿದ್ದು, ಈ ಆಪರೇಷನ್ ಅನ್ನು ಮುನ್ನಡೆಸಿದ್ದು ಮಹಿಳಾ ಸೈನ್ಯಾಧಿಕಾರಿಗಳು ಈ ಆಪರೇಷನ್​​ನ ನೇತೃತ್ವದಲ್ಲಿದ್ದು ಮತ್ತೊಂದು ವಿಶೇಷ. ಪಾಕಿಸ್ತಾನಕ್ಕೆ ಮತ್ತು ಅಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರಿಗೆ ಭೀತಿ ಹುಟ್ಟಿಸಿದ್ದ ಈ ಆಪರೇಷನ್ ಕುರಿತಾದ ಡಾಕ್ಯುಮೆಂಟರಿ ಇದೀಗ ಬಿಡುಗಡೆ ಆಗಿದ್ದು, ಈ ಡಾಕ್ಯುಮೆಂಟರಿ ಸಹ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ನಡುಕ ಹುಟ್ಟಿಸಿದೆ.

‘ಡೀಕ್ಲಾಸಿಫೈಡ್: ಆಪರೇಷನ್ ಸಿಂಧೂರ’ ನೋಡಲೇಬೇಕಾದ ಡಾಕ್ಯುಮೆಂಟರಿ
Operation Sndoor

Updated on: Aug 20, 2026 | 5:11 PM

ಕಾಶ್ಮೀರದ (Kashmir) ಪಹಲ್ಗಾಮ್​​ನಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರ ಮೇಲೆ ರಕ್ಕಸ ದಾಳಿ ನಡೆಸಿ 26 ಅಮಾಯಕರನ್ನು ಕೊಂದ ಭಯೋತ್ಪಾದಕ ಕೃತ್ಯಕ್ಕೆ ಉತ್ತರವಾಗಿ ಭಾರತೀಯ ಸೇನೆ ನಡೆಸಿದ ದಾಳಿಯೇ ‘ಆಪರೇಷನ್ ಸಿಂಧೂರ’. ಪಾಕ್ ನೆಲದಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿಯಲ್ಲಿ ಹಲವು ಭಯೋತ್ಪಾದಕರು ಮತ್ತು ಅವರ ಅಡುತಾಣಗಳನ್ನು ಧ್ವಂಸ ಮಾಡಲಾಗಿತ್ತು. ಅತ್ಯಂತ ರೋಚಕವಾದ ಆಪರೇಷನ್ ಇದಾಗಿದ್ದು, ಈ ಆಪರೇಷನ್ ಅನ್ನು ಮುನ್ನಡೆಸಿದ್ದು ಮಹಿಳಾ ಸೈನ್ಯಾಧಿಕಾರಿಗಳು ಈ ಆಪರೇಷನ್​​ನ ನೇತೃತ್ವದಲ್ಲಿದ್ದು ಮತ್ತೊಂದು ವಿಶೇಷ. ಪಾಕಿಸ್ತಾನಕ್ಕೆ ಮತ್ತು ಅಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರಿಗೆ ಭೀತಿ ಹುಟ್ಟಿಸಿದ್ದ ಈ ಆಪರೇಷನ್ ಕುರಿತಾದ ಡಾಕ್ಯುಮೆಂಟರಿ ಇದೀಗ ಬಿಡುಗಡೆ ಆಗಿದ್ದು, ಈ ಡಾಕ್ಯುಮೆಂಟರಿ ಸಹ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ನಡುಕ ಹುಟ್ಟಿಸಿದೆ.

‘ಆಪರೇಷನ್ ಸಿಂಧೂರ’ ಕುರಿತಾದ ಹಲವು ಮಾಹಿತಿ, ಸಂದರ್ಶನಗಳನ್ನು ಒಳಗೊಂಡಿರುವ ‘ಡೀಕ್ಲಾಸಿಫೈಡ್: ಆಪರೇಷನ್ ಸಿಂದೂರ್’ ಡಾಕ್ಯುಮೆಂಟರಿ ಡಿಸ್ಕವರಿ ಚಾನೆಲ್‌ನಲ್ಲಿ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದೆ. ಎರಡು ಭಾಗಗಳಲ್ಲಿ ಡಾಕ್ಯುಮೆಂಟರಿ ಬಿಡುಗಡೆ ಆಗಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಭಾರತೀಯ ಸೈನ್ಯದ ಹಲವು ಪ್ರಮುಖರು, ಆಪರೇಷನ್ ಸಿಂಧೂರದಲ್ಲಿ ನೇರವಾಗಿ, ಪರೋಕ್ಷವಾಗಿ ಪಾಲ್ಗೊಂಡಿದ್ದವರು ಸಹ ಈ ಡಾಕ್ಯುಮೆಂಟರಿಯಲ್ಲಿ ಮಾತನಾಡಿದ್ದಾರೆ. ಆಪರೇಷನ್ ಸಿಂಧೂರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪುಗಳ ಅಡಗುತಾಣ, ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕ್ಷಿಪಣಿ ದಾಳಿ ‘ಆಪರೇಷನ್ ಸಿಂದೂರ್’ ಯೋಜನೆ ಮತ್ತು ಅದರ ನಿರ್ವಹಣೆಯ ಬಗ್ಗೆ ಈ ಸರಣಿ ಬೆಳಕು ಚೆಲ್ಲುತ್ತದೆ. ಇದು ತಲಾ 45 ನಿಮಿಷಗಳ ‘ದಿ ಗ್ರೀನ್‌ಲೈಟ್’ ಮತ್ತು ‘ಅಟ್ಯಾಕ್ ಅಂಡ್ ಕೌಂಟರ್‌ಸ್ಟ್ರೈಕ್’ ಎಂಬ ಎರಡು ಕಂತುಗಳನ್ನು ಒಳಗೊಂಡಿದೆ. 88 ಗಂಟೆಗಳ ಕಾಲ ನಡೆಸಿದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದರಲ್ಲಿ ಭಾಗವಹಿಸಿದ ಕಾರ್ಯಾಚರಣೆಯ ಅಧಿಕಾರಿಗಳು ಮತ್ತು ತಜ್ಞರ ವಿವರಗಳಿವೆ.

ಇದನ್ನೂ ಓದಿ:‘ಜಮ್ಮು ಕಾಶ್ಮೀರ ಭಾರತದ ಮುಖ್ಯ ಭಾಗ’; ಐತಿಹಾಸಿಕ ಭೇಟಿ ವೇಳೆ ಅಮೆರಿಕ ರಾಯಭಾರಿ ಸೆರ್ಗಿಯೋ ಮಹತ್ವದ ಹೇಳಿಕೆ

ಈ ಡಾಕ್ಯುಮೆಂಟರಿ ಅದೆಷ್ಟು ಸದ್ದು ಮಾಡಿದೆಯೆಂದರೆ ಡಾಕ್ಯುಮೆಂಟರಿ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಈ ಡಾಕ್ಯುಮೆಂಟರಿ ಕುರಿತಾಗಿ ರಾತ್ರಿ 2 ಗಂಟೆಗೆ ಪಾಕಿಸ್ತಾನದ ಜನರಲ್ ಒಬ್ಬರು ‘ಹೇಳಿಕೆ’ ನೀಡಿದ್ದು, ಡಾಕ್ಯುಮೆಂಟರಿ ಬೀರಿರುವ ಪ್ರಭಾವಕ್ಕೆ ಇದು ಸಾಕ್ಷಿಯಾಗಿದೆ. ‘ಡೀಕ್ಲಾಸಿಫೈಡ್: ಆಪರೇಷನ್ ಸಿಂಧೂರ’ ಡಾಕ್ಯುಮೆಂಟರಿಯನ್ನು ಡಿಸ್ಕವರಿ ಪ್ಲಸ್ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಅದರ ಹೊರತಾಗಿ ಡಿಸ್ಕವರಿ ಚಾನೆಲ್ ಇಂಡಿಯಾನಲ್ಲೂ ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us