‘ಸರ್ವಮ್ ಮಾಯಾ’ ಚಿತ್ರದಲ್ಲಿ ಅಂಥದ್ದೇನಿದೆ? ಕ್ಲೈಮ್ಯಾಕ್ಸ್ ಅರ್ಥವೇನು?

ನಿವೀನ್ ಪೌಳಿ 'ಸರ್ವಮ್ ಮಾಯಾ' ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಮಲಯಾಳಂ ಜೊತೆ ಕನ್ನಡದಲ್ಲೂ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಈ ಚಿತ್ರ, ಹಾಸ್ಯ, ಪ್ರೀತಿ ಮತ್ತು ವಿಶಿಷ್ಟ ಆತ್ಮದ ಕಥೆಯನ್ನು ಒಳಗೊಂಡಿದೆ. ಇದು ಭಯ ಹುಟ್ಟಿಸುವ ಹಾರರ್ ಚಿತ್ರವಲ್ಲ, ಬದಲಿಗೆ ಮನರಂಜನಾತ್ಮಕ ಕಥಾಹಂದರ ಹೊಂದಿದೆ. ನಿವೀನ್ ಪೌಳಿ ಹಾಗೂ ಅಜು ವರ್ಗೀಸ್ ಕಾಂಬಿನೇಷನ್ ನಗೆಯ ಕಚಗುಳಿ ಇಡುತ್ತದೆ.

‘ಸರ್ವಮ್ ಮಾಯಾ’ ಚಿತ್ರದಲ್ಲಿ ಅಂಥದ್ದೇನಿದೆ? ಕ್ಲೈಮ್ಯಾಕ್ಸ್ ಅರ್ಥವೇನು?
ಸರ್ವಮ್ ಮಾಯ

Updated on: Feb 05, 2026 | 1:18 PM

ನಿವೀನ್ ಪೌಳಿ (Nivin Pauly) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಆದರೆ, ಅವರಿಗೆ ಇತ್ತೀಚೆಗೆ ಗೆಲುವು ಸಿಕ್ಕಿರಲಿಲ್ಲ. ಆದರೆ, ‘ಸರ್ವಮ್ ಮಾಯಾ’ ಚಿತ್ರದ ಮೂಲಕ ಅವರು ಗೆಲುವಿನ ನಗೆ ಬೀರಿದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ಅಂಥದ್ದೇನಿದೆ? ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ಏಕೆ? ಆ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿದೆ ಉತ್ತರ. ಈ ಸಿನಿಮಾ ಹಾಟ್​​ಸ್ಟಾರ್​​ನಲ್ಲಿ ಮಲಯಾಳಂ ಜೊತೆ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.

ಪ್ರಭೇಂದು (ನಿವೀನ್ ಪೌಳಿ) ದೊಡ್ಡ ಗಿಟಾರ್ ವಾದಕ ಆಗಬೇಕು ಎಂದು ಕನಸು ಕಾಣುತ್ತಾನೆ. ಅವರ ಟೀಂ ಯುರೋಪ್​​ಗೆ ತೆರಳುತ್ತದೆ. ಆದರೆ, ಪ್ರಭೇಂದುಗೆ ಮಾತ್ರ ವೀಸಾ ಸಿಗೋದಿಲ್ಲ. ಹೀಗಾಗಿ ಆತ ಊರಿಗೆ ಮರಳುತ್ತಾನೆ. ಇವರದ್ದು ಅರ್ಚಕರ ಕುಟುಂಬ. ಆ ವೃತ್ತಿಯನ್ನು ಮಾಡೋದಿಲ್ಲ ಎಂದು ದಿಕ್ಕರಿಸಿ ಹೋದವನು ಪ್ರಭೇಂದು. ನಂತರ ಮತ್ತೆ ಇದೇ ವೃತ್ತಿ ಮಾಡೋ ಪರಿಸ್ಥಿತಿ ಬರುತ್ತದೆ. ಆಗ ಶುರುವಾಗುತ್ತೆ ನೋಡಿ ಸಮಸ್ಯೆ.

ಮಯಾ ಮ್ಯಾಥೀವ್/ಡೆಲುಲು (ರಿಯಾ ಶಿಬು) ಆತ್ಮ ಪ್ರಭೇಂದು ಬೆನ್ನು ಬೀಳುತ್ತದೆ . ಮಾಯಾ ಈತನ ಹಿಂದೆ ಬೀಳಲು ಕಾರಣ ಏನು? ಕೊನೆ ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಹಾಸ್ಯದ ರೂಪದಲ್ಲಿ ಹೇಳಲಾಗಿದೆ. ಅಜು ವರ್ಗೀಸ್ ಹಾಗೂ ನಿವೀನ್ ಪೌಳಿಯ ಕಾಂಬಿನೇಷನ್​​ನಲ್ಲಿ ಮೂಡಿಬರೋ ಹಾಸ್ಯ ಸಖತ್ ಆಗಿದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂಬುದನ್ನು ಸಾಬೀತು ಮಾಡಲು ಬೇರೆ ಹಂತಕ್ಕೆ ಹೋದ ನಿವೀನ್ ಪೌಳಿ

ಇದು ಆತ್ಮ/ದೆವ್ವದ ಸಿನಿಮಾ ಆದರೂ ಇಲ್ಲಿ ಎಲ್ಲಿಯೂ ಭಯ ಬೀಳೋ ಒಂದೇ ಒಂದು ದೃಶ್ಯ ಇಲ್ಲ. ಹೀಗಾಗಿ, ಹಾಹರ್ ಸಿನಿಮಾ ಎಂದು ದೂರ ಓಡುವವರು ಯಾವುದೇ ಅಂಜಿಕೆ ಇಲ್ಲದೆ ಈ ಚಿತ್ರ ವೀಕ್ಷಣೆ ಮಾಡಬಹುದು. ಈ ಸಿನಿಮಾದಲ್ಲಿ ಹಾಸ್ಯ ಇದೆ, ಒಂದು ಮಧರು ಪ್ರೇಮಕಥೆ ಇದೆ. ಆತ್ಮದ ಕಥೆ ಇಟ್ಟುಕೊಂಡು ಹೀಗೂ ಸಿನಿಮಾ ಮಾಡಬಹುದು ಎಂಬುದನ್ನು ನಿರ್ದೇಶಕ ಅಖಿಲ್ ಸತ್ಯನ್ ತೋರಿಸಿಕೊಟ್ಟಿದ್ದಾರೆ.

ಕ್ಲೈಮ್ಯಾಕ್ಸ್ ಅರ್ಥವೇನು? (ಸಿನಿಮಾ ನೋಡಿದವರಿಗೆ ಮಾತ್ರ)

ಚಿತ್ರದ ಕ್ಲೈಮ್ಯಾಕ್ಸ್ ಅಲ್ಲಿ ಪ್ರಭೇಂದು ಮಾಯಾ ಮನೆಗೆ ಬರುತ್ತಾನೆ. ಮಾಯಾ ತಾಯಿ, ನೀನೇನಾ ನನ್ನ ಮಗಳನ್ನು ಪ್ರೀತಿಸಿದ್ದು ಎಂದು ಕೇಳುತ್ತಾಳೆ. ಆಗ ಪ್ರಭೇಂದು ಹೌದು ಎನ್ನುವ ಉತ್ತರ ಕೊಡುತ್ತಾನೆ. ಆದರೆ, ಡೆಲುಲು ಅಥವಾ ಮಾಯ ಬದುಕಿದ್ದಾಗ ಪ್ರೀತಿಸಿದ ಹುಡುಗ ಪ್ರಭೇಂದು ಅಲ್ಲ. ಒಂದೊಮ್ಮೆ ಪ್ರಭೇಂದುವೇ ಆಕೆ ಪ್ರೀತಿಸಿದ ಹುಡುಗನಾಗಿದ್ದರೆ ಮೊದಲ ಭೇಟಿಯಲ್ಲೇ ಗೊತ್ತಾಗಿಬಿಡುತ್ತಿತ್ತು. ಆಕೆ ಪ್ರೀತಿಸಿದ ಹುಡುಗನ ಮಿಸ್ಟರಿಯಾಗಿಯೇ ಇಡಲಾಗಿದೆ. ಪ್ರಭೇಂದು ಹೇಳುವ ‘ಯೆಸ್’ ಎಂಬುದರಿಂದ ಮಾಯಾಗೆ ಮುಕ್ತಿ ಸಿಗುತ್ತದೆ. ಏಕೆಂದರೆ ತಾನು ಪ್ರೀತಿಸಿದ ಹುಡುಗನ ಮನೆಯವರಿಗೆ ಪರಿಚಯಿಸಬೇಕು ಎಂಬುದು ಆಕೆಯ ಕೊನೆಯ ಆಸೆ ಕೂಡ ಆಗಿತ್ತು. ಸತ್ತ ಬಳಿಕ ನಿಜಕ್ಕೂ ಪ್ರಭೇಂದು ಮೇಲೆ ಮಾಯಾಗೆ ಪ್ರೀತಿ ಆಗಿದ್ದರಿಂದ, ಅವಳು ಯೆಸ್ ಹೇಳಿದ್ದರಲ್ಲಿ ಅರ್ಥವಿದೆ ಎಂದು ಕೂಡ ಹೇಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us