
ಇತ್ತೀಚೆಗಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ‘ಬ್ಲಾಸ್ಟ್’ ಚಿತ್ರಮಂದಿರದಲ್ಲಿ ಸಖತ್ ಸದ್ದು ಮಾಡಿತು. ಪ್ರಚಾರವೇ ಇಲ್ಲದೆ ಬಿಡುಗಡೆ ಆಗಿದ್ದರೂ ಸಹ ತನ್ನ ಕಂಟೆಂಟ್ನಿಂದ ಸಿನಿಮಾ ಸೂಪರ್ ಹಿಟ್ ಆಗಿದೆ. ಅರ್ಜುನ್ ಸರ್ಜಾ ನಟನೆಯ ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದ್ದು, ತಪ್ಪದೇ ನೋಡಬೇಕಾದ ಸಿನಿಮಾ ಇದಾಗಿದೆ.

ಪ್ರಖ್ಯಾತ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ಆಗಿರುವ ‘ಹೌಸ್ ಆಫ್ ದಿ ಡ್ರ್ಯಾಗನ್’ ವೆಬ್ ಸರಣಿಯ ಮೂರನೇ ಸೀಸನ್ ಕಳೆದ ವಾರವೇ ಆರಂಭವಾಗಿದೆ. ಇದೀಗ ಈ ವೆಬ್ ಸರಣಿಯ ಎರಡನೇ ಸೀಸನ್ ಈ ಭಾನುವಾರ ಬಿಡುಗಡೆ ಆಗಲಿದೆ. ವೆಬ್ ಸರಣಿಯನ್ನು ಎಚ್ಬಿಓ, ಜಿಯೋ ಹಾಟ್ಸ್ಟಾರ್ ಗಳಲ್ಲಿ ವೀಕ್ಷಿಸಬಹುದಾಗಿದೆ.

ಜೇಮ್ಸ್ ಕ್ಯಾಮರನ್ ನಿರ್ದೇಶನದ ವಿಶ್ವ ಪ್ರಸಿದ್ಧ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳುಗಳ ಬಳಿಕ ಇದೀಗ ಒಟಿಟಿಗೆ ಬಂದಿದೆ. ಅದೂ ಉಚಿತವಾಗಿ. ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ ಮತ್ತು ಅಮೆಜಾನ್ನಲ್ಲಿ ಹೆಚ್ಚುವರಿ ಹಣ ನೀಡದೆ ನೋಡಬಹುದಾಗಿದೆ.

‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳು ಭಾರತದ ಸಿನಿಮಾ ಇತಿಹಾಸದಲ್ಲೇ ಪ್ರಮುಖವಾದ ಸಿನಿಮಾಗಳು. ಈ ಸಿನಿಮಾದ ಚಿತ್ರೀಕರಣ ಇನ್ನಿತರೆಗಳ ಬಗ್ಗೆ ಸಿನಿಮಾದ ಕಲಾವಿದರು, ತಂತ್ರಜ್ಞರು ಮಾತನಾಡಿರುವ ಅಪರೂಪದ ಡಾಕ್ಯುಮೆಂಟರಿ ‘ಬಾಹುಬಲಿ: ದಿ ಟಾರ್ಚ್ ಬೇರರ್’ ಇದು ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ಕಬಡ್ಡಿ ಆಟಗಾರನೊಬ್ಬ ಅನಿವಾರ್ಯ ಕಾರಣಗಳಿಂದ ಭೂಗತ ಲೋಕಕ್ಕೆ ಇಳಿಯುವ ಕತೆಯನ್ನು ಒಳಗೊಂಡಿರುವ ತಮಿಳು ಸಿನಿಮಾ ‘ಲಿಂಗಂ’. ಚಿತ್ರಮಂದಿರಗಳಲ್ಲಿ ಗಮನ ಸೆಳೆದಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

ಈ ಹಿಂದೆ ಬೇರೆ ಒಟಿಟಿಯಲ್ಲಿ ಪ್ರಸಾರ ಆಗಿದ್ದ ‘ಲಾಕಪ್’ ಒಟಿಟಿ ರಿಯಾಲಿಟಿ ಶೋ ಈ ಬಾರಿ ನೆಟ್ಫ್ಲಿಕ್ಸ್ಗೆ ಬಂದಿದೆ. ಕಳೆದ ಸೀಸನ್ ವಿನ್ನರ್ ಮುನಾವರ್ ಫಾರುಖಿ ನಿರೂಪಕರಾದರೆ, ರಿತೇಶ್ ದೇಶ್ಮುಖ್ ಮತ್ತು ಫರಾ ಖಾನ್ ಮುಖ್ಯ ನಿರೂಪಕರಾಗಿದ್ದಾರೆ. ಇದೇ ವಾರದಿಂದ ಈ ಶೋ ನೆಟ್ಫ್ಲಿಕ್ಸ್ನಲ್ಲಿ ಪ್ರಾರಂಭವಾಗಿದೆ.

ಬಾಲಿವುಡ್ ನಟ ರಿತೇಶ್ ದೇಶ್ಮುಖ್ ನಟಿಸಿ, ನಿರ್ದೇಶನ ಮತ್ತು ನಿರ್ಮಾಣವೂ ಮಾಡಿರುವ ಮರಾಠಿ ಸಿನಿಮಾ ‘ರಾಜಾ ಶಿವಾಜಿ’ ಮರಾಠಿ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದಿದೆ. ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾವನ್ನು ಮರಾಠಿಯಲ್ಲಿ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.