
‘ರೂಮ್ಮೇಟ್ಸ್’ ಕನ್ನಡದ ವೆಬ್ ಸರಣಿ. ಹೆಸರೇ ಸೂಚಿಸುತ್ತಿರುವಂತೆ ಒಂದೇ ರೂಮಿನಲ್ಲಿ ಬದುಕುತ್ತಿರುವ ಕೆಲ ಗೆಳೆಯರ ಆತ್ಮೀಯತೆಯ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ರೂಮ್ಮೇಟ್ಸ್ಗಳ ನಡುವಿನ ತಮಾಷೆ, ಓನರ್ ಕಾಟ, ಗೆಳೆತಿಯರು, ಗೆಳೆಯರ ಸಹವಾಸ ಇನ್ನೂ ಹಲವು ವಿಷಯಗಳನ್ನು ಒಳಗೊಂಡ ಈ ವೆಬ್ ಸರಣಿ ಜೀ5 ನಲ್ಲಿ ಬಿಡುಗಡೆ ಆಗಿದೆ.

ತಮಿಳಿನ ಸ್ಟಾರ್ ನಟ ಧನುಶ್ ನಟಿಸಿರುವ ‘ಕಾರಾ’ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ದರೋಡೆಕೋರನೊಬ್ಬನ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು, ಧನುಶ್ ಬ್ಯಾಂಕು ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದಾ. ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ತೆಲುಗಿನ ಜನಪ್ರಿಯ ಹಾಸ್ಯ ನಟ ಸತ್ಯ, ವೆನ್ನೆಲ ಕಿಶೋರ್ ಸೇರಿದಂತೆ ಇನ್ನೂ ಹಲವು ಪ್ರಮುಖ ನಟ-ನಟಿಯರು ಸೇರಿ ನಟಿಸಿರುವ ಹಾಸ್ಯಮಯ ಸಿನಿಮಾ ‘ಜೆಟ್ ಲೀ’ ಕೇವಲ ಒಂದು ವಿಮಾನದಲ್ಲಿ ನಡೆಯುವ ಕತೆಯನ್ನು ಒಳಗೊಂಡ ಈ ಸಿನಿಮಾ ಇದೀಗ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ.

‘ಸ್ಪೈಡರ್ ಮ್ಯಾನ್’ ವಿಶ್ವದ ಜನಪ್ರಿಯ ಸೂಪರ್ ಹೀರೋ. ಆದರೆ ಆ ಸ್ಪೈಡರ್ ಮ್ಯಾನ್ ಕತೆಯನ್ನು ಭಿನ್ನ ರೀತಿಯಲ್ಲಿ ನೋಡುವ ಪ್ರಯತ್ನವೇ ‘ಸ್ಪೈಡರ್ ನಾಯ್ರ್’. ಹಿರಿಯ ನಟ ನಿಕೊಲಸ್ ಕೇಜ್ ನಟಿಸಿರುವ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

ತಮಿಳಿನ ಸ್ಪೈ ಆಕ್ಷನ್ ಸಿನಿಮಾ ‘ಲೀಡರ್’ ಇದೀಗ ಒಟಿಟಿಗೆ ಬಂದಿದೆ. ಲಿಜೆಂಡ್ ಸರವಣ ನಟಿಸಿರುವ ಈ ಸಿನಿಮಾನಲ್ಲಿ ಪಾಯಲ್ ರಜಪೂತ್, ಆಂಡ್ರೆಯಾ ಜೆರ್ಮಿಯಾ ಅಂಥಹಾ ಖ್ಯಾತ ನಟಿಯರು ನಟಿಸಿದ್ದಾರೆ. ಈ ಆಕ್ಷನ್ ಭರಿತ ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದಾಗಿದೆ.

ಆಸ್ಕರ್ ವಿಜೇತ ಹೈಜರ್ಲಿಂಗ್ ನಿರ್ದೇಶನ ಮಾಡಿರುವ ಡಾಕ್ಯುಮೆಂಟರಿ ‘ರಾಫಾ’ ಈ ವಾರ ಒಟಿಟಿಗೆ ಬಂದಿದೆ. ಖ್ಯಾತ ಟೆನ್ನಿಲ್ ಆಟಗಾರ ರಫೆಲ್ ನಡಾಲ್ ಜೀವನ ಕುರಿತಾದ ಈ ಡಾಕ್ಯುಮೆಂಟರಿಯನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಒಟ್ಟಿಗೆ ನಟಿಸಿರುವ ಸೂಪರ್ ಹಿಟ್ ಸಿನಿಮಾ ‘ಜಾಲಿ ಎಲ್ಎಲ್ಬಿ 3’ ಚಿತ್ರಮಂದಿರದಲ್ಲಿ ಹಿಟ್ ಆಗಿತ್ತು. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಹಳ ಸಮಯದ ಬಳಿಕ ಇದೀಗ ಒಟಿಟಿಗೆ ಬಂದಿದೆ ಈ ಸಿನಿಮಾ. ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.