Yash Fans: ನಂಜನಗೂಡಿನಲ್ಲಿ ಕಾರು ಹತ್ತುವುದಕ್ಕೂ ಮುನ್ನ ಬಾಗಿಲಲ್ಲಿ ನಿಂತು ಸ್ಟೈಲಿಶ್ ಆಗಿ ಕೈ ಬೀಸಿದ ಯಶ್

Updated on: Jun 21, 2023 | 3:35 PM

Nanjangud Temple: ಯಶ್ ಅವರು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆಯೇ ಅವರ ಕಾರಿನತ್ತ ಫ್ಯಾನ್ಸ್​ ನುಗ್ಗಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಖ್ಯಾತ ನಟ ಯಶ್ (Yash) ಅವರು ಇಂದು (ಜೂನ್ 21) ಮೈಸೂರಿನ ನಂಜನಗೂಡು ದೇವಸ್ಥಾನಕ್ಕೆ (Nanjangud temple) ಭೇಟಿ ನೀಡಿದ್ದಾರೆ. ಯಶ್ ಅವರು ದೇವಸ್ಥಾನಕ್ಕೆ ಬಂದಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಅವರನ್ನು ನೋಡಲು ಆ ಭಾಗದಲ್ಲಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು (Yash Fans) ಬಂದಿದ್ದರು. ಯಶ್ ಅವರು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆಯೇ ಅವರ ಕಾರಿನತ್ತ ಫ್ಯಾನ್ಸ್​ ನುಗ್ಗಿದರು. ಯಶ್ ಹೇಗೋ ಕಷ್ಟಪಟ್ಟು ಕಾರು ಏರಿದರು. ಕಾರು ಏರುವುದಕ್ಕೂ ಮೊದಲು ಬಾಗಿಲ ಬಳಿ ನಿಂತು ಸ್ಟೈಲಿಶ್ ಆಗಿ ಫ್ಯಾನ್ಸ್​ ಕಡೆಗೆ ಕೈ ಬೀಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More