ಅಮೆರಿಕನಲ್ಲಿ ‘ಪೆದ್ದಿ’ ಟಿಕೆಟ್ ದರ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು: ಅಭಿಮಾನಿಗಳ ಬೇಸರ

Peddi Movie ticket price: ಉತ್ತರ ಅಮೆರಿಕನಲ್ಲಿ ತೆಲುಗು ಸಿನಿಮಾಗಳು ಭರ್ಜರಿ ಗಳಿಕೆ ಮಾಡುತ್ತವೆ. ಇದೇ ಕಾರಣಕ್ಕೆ ‘ಪೆದ್ದಿ’ ಸಿನಿಮಾವನ್ನು ಅಮೆರಿಕದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ‘ಪೆದ್ದಿ’ ಸಿನಿಮಾಕ್ಕೆ ನಿಗದಿಪಡಿಸಿರುವ ಟಿಕೆಟ್ ದರಗಳು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

ಅಮೆರಿಕನಲ್ಲಿ ‘ಪೆದ್ದಿ’ ಟಿಕೆಟ್ ದರ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು: ಅಭಿಮಾನಿಗಳ ಬೇಸರ
Peddi Movie

Updated on: May 29, 2026 | 1:35 PM

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಭಾರತದ ಸಿನಿಮಾಗಳಿಗೆ ವಿಶೇಷವಾಗಿ ತೆಲುಗು ಸಿನಿಮಾಗಳಿಗೆ ಭಾರತದಲ್ಲಿ ಇರುವಷ್ಟೆ ಬೇಡಿಕೆ ಅಮೆರಿಕದಲ್ಲೂ ಇದೆ. ಅದರಲ್ಲೂ ಉತ್ತರ ಅಮೆರಿಕನಲ್ಲಿ ತೆಲುಗು ಸಿನಿಮಾಗಳು ಭರ್ಜರಿ ಗಳಿಕೆ ಮಾಡುತ್ತವೆ. ಇದೇ ಕಾರಣಕ್ಕೆ ‘ಪೆದ್ದಿ’ ಸಿನಿಮಾವನ್ನು ಅಮೆರಿಕದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ‘ಪೆದ್ದಿ’ ಸಿನಿಮಾಕ್ಕೆ ನಿಗದಿಪಡಿಸಿರುವ ಟಿಕೆಟ್ ದರಗಳು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಈಗಾಗಲೇ ಅಮೆರಿಕದಲ್ಲಿ ಆರಂಭವಾಗಿದೆ. ಆದರೆ ಸಿನಿಮಾದ ಟಿಕೆಟ್ ದರಗಳು ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಬಹು ನಿರೀಕ್ಷಿತ ಹಾಲಿವುಡ್ ಸಿನಿಮಾದ ಟಿಕೆಟ್ ದರಕ್ಕಿಂತಲೂ ಹೆಚ್ಚಿನ ದರವನ್ನು ‘ಪೆದ್ದಿ’ ಸಿನಿಮಾಕ್ಕೆ ಅಮೆರಿಕದಲ್ಲಿ ನಿಗದಿ ಪಡಿಸಲಾಗಿದೆ. ‘ಪೆದ್ದಿ’ ಸಿನಿಮಾದ ಪ್ರೀಮಿಯರ್ ಶೋಗೆ 20 ರಿಂದ 25 ಡಾಲರ್ ನಿಗದಿ ಪಡಿಸಲಾಗಿದೆ. (ರೂಪಾಯಿ ಲೆಕ್ಕದಲ್ಲಿ 2000 ಇಂದ 2350ರವರೆಗೆ). ‘ಪೆದ್ದಿ’ ಸಿನಿಮಾದ ಮೊದಲ ವಾರದ ಟಿಕೆಟ್ ದರ 18 ರಿಂದ 20 ಡಾಲರ್ ಇದೆ. ಇದು ಬಲು ದುಬಾರಿ ಮೊತ್ತ.

‘ಪೆದ್ದಿ’ ಸಿನಿಮಾದ ಸ್ಪೆಷಲ್ ಥಿಯೇಟರ್ (ಡಿ-ಬಾಕ್ಸ್) ಬೆಲೆ 42 ಡಾಲರ್ ಇವೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 5000 ರೂಪಾಯಿಗಳು. ಹಾಲಿವುಡ್​​ನ ಈ ವರ್ಷದ ಬಲು ನಿರೀಕ್ಷಿತ ಸಿನಿಮಾ, ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ಒಡೆಸ್ಸಿ’ ಸಿನಿಮಾದ ಟಿಕೆಟ್ ದರವೇ 30 ಡಾಲರ್ ಇದೆ. ಅದೂ ಐಮ್ಯಾಕ್ಸ್​​ನಲ್ಲಿ. ಬಲು ನಿರೀಕ್ಷಿತ ಹಾಲಿವುಡ್ ಸಿನಿಮಾವನ್ನೂ ಸಹ ಮೀರಿಸಿದೆ ‘ಪೆದ್ದಿ’ ಟಿಕೆಟ್ ದರದಲ್ಲಿ.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳ ಬಗ್ಗೆ ಅಮೆರಿಕದ ಭಾರತೀಯ ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹಂಚಿಕೊಳ್ಳುತ್ತಿದ್ದಾರೆ. ‘ಧುರಂಧರ್ 1’ ಮತ್ತು ‘ಧುರಂಧರ್ 2’ ಎರಡೂ ಸಿನಿಮಾಗಳ ಒಟ್ಟು ಟಿಕೆಟ್ ದರಕ್ಕಿಂತಲೂ ‘ಪೆದ್ದಿ’ ಸಿನಿಮಾದ ಟಿಕೆಟ್ ದರ ಹೆಚ್ಚಿದೆ ಎಂದು ಕೆಲವರು ಪೋಸ್ಟ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ ‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇನ್ನೂ ಪ್ರಾರಂಭ ಆಗಿಲ್ಲ. ಆದರೆ ಇಲ್ಲಿಯೂ ಸಹ ಟಿಕೆಟ್​​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದು ಖಾತ್ರಿ ಎಂಬಂತಾಗಿದೆ.

ಬೆಂಗಳೂರು, ಮುಂಬೈ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಚಿತ್ರತಂಡ ಆಯೋಜಿಸುತ್ತಿದ್ದು, ಈ ಪ್ರೀಮಿಯರ್ ಶೋಗಳಿಗೆ ಸಾಮಾನ್ಯ ಶೋನ ಎರಡು ಪಟ್ಟು ಹೆಚ್ಚು ಟಿಕೆಟ್ ಬೆಲೆ ನಿಗದಿ ಪಡಿಸಲಿದೆಯಂತೆ ಚಿತ್ರತಂಡ. ಬೆಂಗಳೂರಿನಲ್ಲಿ ಸಹಜವಾಗಿಯೇ ಪರಭಾಷೆ ಸಿನಿಮಾಗಳ ಟಿಕೆಟ್ ದರಗಳು ಬಲು ದುಬಾರಿ ಆಗಿರುತ್ತವೆ. ‘ಪೆದ್ದಿ’ ಸಿನಿಮಾಕ್ಕೆ ಟಿಕೆಟ್ ದರ ಎಷ್ಟಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Fri, 29 May 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us