‘ಅವರನ್ನು ಸಿಎಂ ವಿಜಯ್ ಅಂತಲೇ ಕರೆಯಬೇಕು’; ಮಾಧವನ್ ನೇರ ಮಾತು

ತಮಿಳುನಾಡು ರಾಜಕೀಯಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್ ಕುರಿತು ನಟ ಆರ್. ಮಾಧವನ್ ಪ್ರತಿಕ್ರಿಯಿಸಿದ್ದಾರೆ. ಅವರನ್ನು 'ಸಿಎಂ ವಿಜಯ್' ಎಂದೇ ಕರೆಯಬೇಕು ಎಂದಿದ್ದಾರೆ. ರಾಜಕೀಯವು ಎರಡು ಅಂಚಿನ ಕತ್ತಿ ಎಂದಿರುವ ಮಾಧವನ್, ತಮಗೆ ರಾಜಕೀಯಕ್ಕೆ ಬರುವ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಅವರನ್ನು ಸಿಎಂ ವಿಜಯ್ ಅಂತಲೇ ಕರೆಯಬೇಕು’; ಮಾಧವನ್ ನೇರ ಮಾತು
ಮಾಧವ್-ವಿಜಯ್

Updated on: Aug 05, 2026 | 8:53 AM

ಮುಖ್ಯಾಂಶಗಳು

  • ದಳಪತಿ ವಿಜಯ್‌ಗೆ ಮಾಧವನ್ ಸಾಥ್
  • 'ಅವರನ್ನು ಸಿಎಂ ವಿಜಯ್ ಎಂದೇ ಕರೆಯಿರಿ’
  • ರಾಜಕೀಯದ ಬಗ್ಗೆ ಮಾಧವನ್ ನೀಡಿದ ಮಾರ್ಮಿಕ ವಿಶ್ಲೇಷಣೆ

ತಮಿಳುನಾಡಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಚಿತ್ರರಂಗದ ಸಹನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಕುರಿತು ನಟ ಆರ್‌. ಮಾಧವನ್ ಅವರು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ವಿಜಯ್ ಅವರನ್ನು ಉತ್ತಮ ಗೆಳೆಯ ಎಂದು ಕರೆದಿದ್ದು, ವಿಜಯ್ ಅವರನ್ನು ‘ಸಿಎಂ ವಿಜಯ್’ ಎಂದು ಕರೆಯಬೇಕು ಎಂದಿದ್ದಾರೆ.

ಸಂದರ್ಶನದಲ್ಲಿ ತಮಿಳುನಾಡು ರಾಜಕೀಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಧವನ್, ‘ಚಿತ್ರರಂಗದಲ್ಲಿ ನಮ್ಮೊಂದಿಗೇ ಬೆಳೆದು ಬಂದ ನಟ ವಿಜಯ್ ರಾಜಕೀಯ ರಂಗಕ್ಕೆ ಬಂದಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ. ವಿಜಯ್ ನನಗೆ ಆತ್ಮೀಯ ಗೆಳೆಯ. ಇಷ್ಟೊಂದು ವೇಗವಾಗಿ ರಾಜಕೀಯದಲ್ಲಿ ಬದಲಾವಣೆಗಳು ಆಗುತ್ತಿರುವುದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅವರನ್ನು ಸಿಎಂ ವಿಜಯ್ ಎಂದೇ ಕರೆಯಬೇಕು’ ಎಂದು ಅವರು ಹೇಳಿದ್ದಾರೆ.

ರಾಜಕೀಯವು ‘ಎರಡು ಅಂಚಿನ ಕತ್ತಿ’

ರಾಜಕೀಯದ ಸವಾಲುಗಳ ಬಗ್ಗೆ ಮಾತನಾಡಿದ ಮಾಧವನ್, ‘ರಾಜಕೀಯ ಎಂಬುದು ಎರಡು ಅಂಚಿನ ಕತ್ತಿ ಇದ್ದಂತೆ. ನೀವು ಒಳ್ಳೆಯದನ್ನು ಮಾಡಿದರೂ ಟೀಕೆಗಳು ಬರುತ್ತವೆ, ತಪ್ಪು ಮಾಡಿದರೂ ಟೀಕೆಗಳು ಬರುತ್ತವೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ವಿರೋಧಿಸುವ ಒಂದು ವರ್ಗ ಇದ್ದೇ ಇರುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.

ರಾಜಕೀಯಕ್ಕೆ ಬರಲ್ಲ

‘ನಿಮಗೂ ರಾಜಕೀಯಕ್ಕೆ ಬರುವ ಆಸಕ್ತಿ ಇದೆಯೇ?’ ಎಂದು ಸಂದರ್ಶಕರು ಕೇಳಿದಾಗ, ನಟ ಮಾಧವನ್ ನಗುತ್ತಾ ‘ಖಂಡಿತ ಇಲ್ಲ, ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮಾಧವನ್ ಅವರು ದುಬೈನಲ್ಲಿ ಸೆಟಲ್ ಆಗಿದ್ದಾರೆ. ಸಿನಿಮಾ ಕೆಲಸ ಇದ್ದಾಗ ಅವರು ಭಾರತಕ್ಕೆ ಬರುತ್ತಾರೆ.

ಇದನ್ನೂ ಓದಿ: ‘ಭಾರತದ ಎಡಿಸನ್’ ಜಿ.ಡಿ. ನಾಯ್ಡು ಬಯೋಪಿಕ್; ಟ್ರೇಲರ್​ನಲ್ಲಿ ಗಮನ ಸೆಳೆದ ಆರ್. ಮಾಧವನ್

ಸಿನಿಮಾ ಜರ್ನಿ

ಈ ವರ್ಷ ರಿಲೀಸ್ ಆದ ‘ಧುರಂಧರ್ 2’ ಚಿತ್ರದಲ್ಲಿ ಐಬಿ ಮುಖ್ಯಸ್ಥ ಅಜಯ್ ಸನ್ಯಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಿಡಿಎನ್ ಸಿನಿಮಾದಲ್ಲಿ ಜಿಡಿ ನಾಯ್ಡು ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us