
ರಾಜಮೌಳಿ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅವರು ಏಳ್ಗೆ ಕಾಣುತ್ತಿದ್ದಾರೆ. ಗ್ರಾಫಿಕ್ಸ್, ಮೇಕಿಂಗ್ ಸೇರಿದಂತೆ ಪ್ರತಿ ವಿಷಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಿಕೊಂಡು ಅವರು ಫೀಲ್ಡ್ಗೆ ಇಳಿಯುತ್ತಾರೆ. ಪ್ರತಿ ಪ್ರಾಜೆಕ್ಟ್ಗೆ ಅವರು 4-5 ವರ್ಷ ತೆಗೆದುಕೊಳ್ಳುತ್ತಾರೆ. ಈಗ ಅವರು ‘ವಾರಣಾಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಿಹೈಂಡ್ ದಿ ಸೀನ್ಸ್ (ಬಿಟಿಎಸ್) ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಕಂಡಿದೆ. ಈ ವೇಳೆ ಅವರಿಗೆ ಅವಮಾನ ಆಗಿದೆ.
ರಾಜಮೌಳಿ ಸೃಷ್ಟಿ ಮಾಡುವ ಪಾತ್ರ, ವಿಷಯ ಅದ್ಭುತವಾಗಿರುತ್ತವೆ. ‘ಆರ್ಆರ್ಆರ್’ ಸಿನಿಮಾ ಆಗಿರಲಿ ಅಥವಾ ‘ಬಾಹುಬಲಿ’ ಚಿತ್ರವೇ ಆಗಿರಲಿ, ಉತ್ತಮ ರೀತಿಯಲ್ಲಿ ಇದನ್ನು ಕಟ್ಟಿಕೊಟ್ಟಿದ್ದರು. ಈಗ ‘ವಾರಣಾಸಿ’ ಚಿತ್ರವನ್ನು ಕೂಡ ಅದೇ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಅವರಿದ್ದಾರೆ. ಈ ಚಿತ್ರದ ಬಿಟಿಎಸ್ ‘ಸಿಸಿಎಕ್ಸ್ಪಿ ಮೆಕ್ಸಿಕೋ 2026’ ಅಲ್ಲಿ ಪ್ರದರ್ಶನ ಕಂಡಿದೆ. ಆ ಬಳಿಕ ವಿಡಿಯೋ ಸಂದೇಶದ ಮೂಲಕ ಜನರಿಗೆ ಸಿನಿಮಾ ಬಗ್ಗೆ ಹೇಳಿದರು.
ಇದನ್ನೂ ಓದಿ: ಜೂ ಎನ್ಟಿಆರ್ ಋಣ ತೀರಿಸಲಿರುವ ರಾಜಮೌಳಿ, ‘ವಾರಣಾಸಿ’ಯಲ್ಲಿ ಸರ್ಪ್ರೈಸ್
ಈ ವಿಡಿಯೋ ನೋಡಿದ ಅನೇಕರು ಒಂದು ವಿಷಯ ಗಮನಿಸಿದ್ದಾರೆ. ರಾಜಮೌಳಿ ಅವರು ಮಾತನಾಡುವಾಗ ಎಲ್ಲರೂ ಎದ್ದೆದ್ದು ಹೋಗುತ್ತಿದ್ದರು. ಇದು ರಾಜಮೌಳಿಗೆ ಆದ ಅವಮಾನ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ರಾಜಮೌಳಿ ದೇಹದ ಬಣ್ಣದ ಬಗ್ಗೆ ಅಸಮಾಧಾನ ಇರಬೇಕು. ಅದಕ್ಕಾಗಿ ಎದ್ದು ಹೋಗಿದ್ದಾರೆ. ಅವರು ವರ್ಣಬೇಧ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಮೌಳಿ ಅವರು ‘ವಾರಾಣಸಿ’ ಸಿನಿಮಾಗೆ ಈಗಲೇ ಪ್ರಚಾರ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಈ ಸಿನಿಮಾಗೆ ಪ್ರಚಾರ ನೀಡುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.