ಒಟ್ಟಿಗೆ ಎರಡು ಸಿನಿಮಾಗಳಲ್ಲಿ ‘ಪಿಶಾಚಿ’ ಆಗಲಿದ್ದಾರೆ ರಶ್ಮಿಕಾ ಮಂದಣ್ಣ

Rashmika Mandanna movie: ರಶ್ಮಿಕಾ ಮಂದಣ್ಣ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಟ್ಟೊಟ್ಟಿಗೆ ಮೂರು 1000 ಕೋಟಿ ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟಿ ಎನಿಸಿಕೊಂಡಿದ್ದಾರೆ ಅವರು. ಪ್ರಸ್ತುತ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು. ಹಲವು ಒಳ್ಳೆಯ ಪ್ರೇಮಕತೆಗಳು, ರೊಮ್ಯಾಂಟಿಕ್, ಗ್ಲಾಮರಸ್ ಸಿನಿಮಾಗಳು ಅವರಿಗೆ ಆಫರ್ ಆಗುತ್ತಿವೆ. ಆದರೆ ರಶ್ಮಿಕಾ ಇವುಗಳ ನಡುವೆ ಒಟ್ಟಿಗೆ ಎರಡು ಸಿನಿಮಾನಲ್ಲಿ ದೆವ್ವ-ಭೂತದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಒಟ್ಟಿಗೆ ಎರಡು ಸಿನಿಮಾಗಳಲ್ಲಿ ‘ಪಿಶಾಚಿ’ ಆಗಲಿದ್ದಾರೆ ರಶ್ಮಿಕಾ ಮಂದಣ್ಣ
Rashmika Mandanna

Updated on: May 29, 2026 | 5:46 PM

ರಶ್ಮಿಕಾ ಮಂದಣ್ಣ (Rashmika Mandanna) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಟ್ಟೊಟ್ಟಿಗೆ ಮೂರು 1000 ಕೋಟಿ ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟಿ ಎನಿಸಿಕೊಂಡಿದ್ದಾರೆ ಅವರು. ಪ್ರಸ್ತುತ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು. ಹಲವು ಒಳ್ಳೆಯ ಪ್ರೇಮಕತೆಗಳು, ರೊಮ್ಯಾಂಟಿಕ್, ಗ್ಲಾಮರಸ್ ಸಿನಿಮಾಗಳು ಅವರಿಗೆ ಆಫರ್ ಆಗುತ್ತಿವೆ. ಆದರೆ ರಶ್ಮಿಕಾ ಇವುಗಳ ನಡುವೆ ಒಟ್ಟಿಗೆ ಎರಡು ಸಿನಿಮಾನಲ್ಲಿ ದೆವ್ವ-ಭೂತದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾಗೆ ಹಾರರ್ ಸಿನಿಮಾ ಹೊಸದಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಥಾಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರು ಭೂತದ (ವ್ಯಾಂಪೈರ್) ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಆ ಸಿನಿಮಾನಲ್ಲಿ ಸಖತ್ ಹಾಟ್ ಆಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ಅವರು ಒಟ್ಟಿಗೆ ಎರಡು ಹಾರರ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ರಶ್ಮಿಕಾ ಇದೀಗ ತಮಿಳಿನ ‘ಕಾಂಚನಾ 4’ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾನಲ್ಲಿ ರಶ್ಮಿಕಾ ಮತ್ತೊಮ್ಮೆ ಭೂತದ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ ಸಿನಿಮಾನಲ್ಲಿ ಅವರದ್ದು ಒಂದು ರೀತಿ ಅತಿಥಿ ಪಾತ್ರವಂತೆ. ಅವರು ಕೇವಲ ಫ್ಲ್ಯಾಷ್​​ಬ್ಯಾಕ್​ ನಲ್ಲಿ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ರಾಘವ್ ಲಾರೆನ್ಸ್ ನಿರ್ದೇಶನ ಮಾಡುತ್ತಿದ್ದು, ಖುದ್ದು ನಾಯಕನಾಗಿ ನಟಿಸಲಿದ್ದಾರೆ.

ಇದನ್ನೂ ಓದಿ:ಕೃತಿ ಸನೋನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಶ್ಮಿಕಾ ಮಂದಣ್ಣ

‘ಕಾಂಚನಾ 4’ ಮಾತ್ರವೇ ಅಲ್ಲದೆ, ‘ಥಾಮ’ ಸಿನಿಮಾದ ಸೀಕ್ವೆಲ್​​ನಲ್ಲಿಯೂ ನಟಿಸಲಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಥಾಮ’ ಸಿನಿಮಾದ ಸೀಕ್ವೆಲ್ ಕೆಲವೇ ತಿಂಗಳಲ್ಲಿ ಘೋಷಣೆ ಆಗಲಿದ್ದು, ಸೀಕ್ವೆಲ್​​ನಲ್ಲಿ ರಶ್ಮಿಕಾ ಮತ್ತೊಮ್ಮೆ ಭೂತವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ‘ಮೈಸಾ’ ಹೆಸರಿನ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ರಶ್ಮಿಕಾ ಈ ಸಿನಿಮಾನಲ್ಲಿ ಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಲವು ನಟಿಯರು ಮದುವೆ ಆದ ಬಳಿಕ ತಮ್ಮನ್ನು ಕೆಲ ರೀತಿಯ ಪಾತ್ರಗಳಿಗೆ ಸೀಮಿತಗೊಳಿಸಿಕೊಳ್ಳುತ್ತಾರೆ. ಕೇವಲ ಮಹಿಳಾ ಪ್ರಧಾನ ಸಿನಿಮಾಗಳು, ಗ್ಲಾಮರ್ ರಹಿತ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಾರೆ. ಆದರೆ ರಶ್ಮಿಕಾ, ತಮ್ಮ ಮೇಲೆ ಆ ರೀತಿಯ ಯಾವುದೇ ಮಿತಿಗಳನ್ನು ಹೇರಿಕೊಂಡಿಲ್ಲ. ಮದುವೆಯ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾರ ಸಿನಿಮಾ ‘ಕಾಕ್​​ಟೇಲ್ 2’ ನಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಪತಿ ವಿಜಯ್ ಜೊತೆಗೆ ‘ರಣಬಲಿ’ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ‘ಮೈಸಾ’ ಅವರ ಕೈಯಲ್ಲಿದೆ. ಅಜಿತ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾಕ್ಕೂ ರಶ್ಮಿಕಾ ನಾಯಕಿ. ಹಿಂದಿಯಲ್ಲಿ ಮತ್ತೊಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us