ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿಯನ್ನ CCB ಕಚೇರಿಗೆ ಅಧಿಕಾರಿಗಳು ಕರೆದೊಯ್ದರು. CCB ಅಧಿಕಾರಿಗಳು ನಟಿಯ ಇಂದಿರಾನಗರದ ಫ್ಲ್ಯಾಟ್ನಿಂದ ತಮ್ಮ ಕಚೇರಿಗೆ ಕರೆದೊಯ್ದರು.
ಬೆಳಗ್ಗೆ ನಟಿ ಸಂಜನಾ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ ಅಧಿಕಾರಿಗಳು ಮನೆಯಲ್ಲೇ ಸಂಜನಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೊತೆಗೆ, ಸಂಜನಾ ಮನೆಯಲ್ಲಿ ಕೆಲ ವಸ್ತುಗಳನ್ನು ಸಹ ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
CCB ಟೆಕ್ನಿಕಲ್ ಸೆಲ್ ಸುಪರ್ದಿಗೆ…
ಸಂಜನಾ ಮನೆಯಲ್ಲಿ ದೊರೆತಿರುವ ವಸ್ತುಗಳನ್ನು ವಶ ಪಡಿಸಿಕೊಂಡು ಸಿಸಿಬಿ ಕಚೇರಿ ಗೆ ತಂದಿದ್ದಾರೆ. ಎರಡು ಬ್ಯಾಗ್ಗಳಲ್ಲಿ ಹಲವು ದಾಖಲೆಗಳನ್ನ ತಂದಿದ್ದಾರೆ. ಮೊಬೈಲ್ ಮತ್ತು ಇನ್ನಿತರ ವಸ್ತುಗಳನ್ನು ಸೀಜ್ ಮಾಡಿ ತಂದಿರೋ ಸಿಸಿಬಿ ಪೊಲೀಸರು ಅದನ್ನೆಲ್ಲ ಟೆಕ್ನಿಕಲ್ ಸೆಲ್ ಸುಪರ್ದಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಸಂಜನಾಗೆ ಅಪಾರ್ಟ್ಮೆಂಟ್ ಮತ್ತು BMW ಕಾರ್ ಕೊಡಿಸಿದ್ಯಾರು? ಯಾರದು ವೈದ್ಯ?
Published On - 11:16 am, Tue, 8 September 20