‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ

‘ಅಪ್ಪು’ 100ನೇ ದಿನದ ಸಂಭ್ರಮಾಚರಣೆ ವೇಳೆ ಪುನೀತ್ ರಾಜ್​​ಕುಮಾರ್ ಅವರು ರಜನಿಕಾಂತ್ ಅವರ ಆಶೀರ್ವಾದ ಪಡೆದಿದ್ದರು. ವೇದಿಕೆ ಮೇಲೆ ರಾಘವೇಂದ್ರ ರಾಜ್​ಕುಮಾರ್, ಶಿವರಾಜ್​ಕುಮಾರ್ ಹಾಗೂ ಪುನೀತ್ ಡ್ಯಾನ್ಸ್ ಮಾಡಿದ್ದರು. ‘ಎಲ್ಲರಿಗೂ ನಮಸ್ಕಾರ. ಕಾರ್ಯಕ್ರಮವನ್ನು ಇಷ್ಟು ಅದ್ದೂರಿಯಾಗಿ ಆಚರಿಸಿದ್ದಕ್ಕೆ ಧನ್ಯವಾದ’ ಎಂದಿದ್ದರು ರಾಜ್​ಕುಮಾರ್.

‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ

Updated on: Mar 13, 2025 | 7:02 AM

ಪುನೀತ್ ರಾಜ್​ಕುಮಾರ್ ನಮ್ಮ ಜೊತೆ ಇಲ್ಲ. ಆದರೆ, ಅವರು ಮಾಡಿದ ಸಿನಿಮಾಗಳು, ಅವರ ನಗು ಎಂದಿಗೂ ಮಾಸುವುದಿಲ್ಲ. ಈಗ ಅವರ ಜನ್ಮದಿನ (ಮಾರ್ಚ್ 17) ಸಮೀಪಿಸಿದೆ. ಈ ಕಾರಣಕ್ಕೆ ಶುಕ್ರವಾರ (ಮಾರ್ಚ್ 14) ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಪುನೀತ್ (Puneeth Rajkumar) ಹೀರೋ ಆಗಿ ನಟಿಸಿದ ಈ ಚಿತ್ರ ಶತದಿನೋತ್ಸವವನ್ನು ಆಚರಿಸಿಕೊಂಡಿತ್ತು. ಪುನೀತ್ ಅವರು ಜನರಿಗೆ ಮತ್ತಷ್ಟು ಹತ್ತಿರ ಆಗಿದ್ದು ಇದೇ ಸಿನಿಮಾದಿಂದ. ಈ ಚಿತ್ರದ 100ನೇ ದಿನದ ಸಂಭ್ರಾಚರಣೆಯ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋನ ಅಶ್ವಿನಿ ಪುನೀತ್ ರಾಜ್​ಕುಮಾರ್ ಹಂಚಿಕೊಂಡಿದ್ದಾರೆ.

2002ರ ಏಪ್ರಿಲ್ 26ರಂದು ‘ಅಪ್ಪು’ ಸಿನಿಮಾ ರಿಲೀಸ್ ಆಯಿತು. ಪುರಿ ಜಗನ್ನಾಥ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್​ಕುಮಾರ್ ಅವರೇ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಆಗಿನ ಕಾಲದಲ್ಲಿ 200 ದಿನ ಪ್ರದರ್ಶನ ಕಂಡಿತ್ತು. ಈ ಚಿತ್ರ ತೆಲುಗು, ತಮಿಳು, ಬೆಂಗಾಲಿ ಭಾಷೆಗೆ ರಿಮೇಕ್ ಆಯಿತು. ಈ ಚಿತ್ರದ ನೂರು ದಿನದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಇದನ್ನೂ ಓದಿ
ಸುಮಲತಾ-ದರ್ಶನ್ ಮಧ್ಯೆ ಬಿರುಕು? ಈ ಬೆಳವಣಿಗೆ ನೋಡಿದ್ರೆ ನೀವೂ ಒಪ್ತೀರಿ
ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ನಟ
ಚಂದನ್ ಶೆಟ್ಟಿ ಜೊತೆ ಮತ್ತೆ ಬಾಳುತ್ತೀರಾ? ನೇರವಾಗಿ ಉತ್ತರ ನೀಡಿದ ನಿವೇದಿತಾ
ಮತ್ತೆ ಚಂದನ್ ಶೆಟ್ಟಿ ತಬ್ಬಿಕೊಂಡು ಕಣ್ಣೀರು ಹಾಕಿದ ನಿವೇದಿತಾ ಗೌಡ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಶತದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪುನೀತ್ ಶಕ್ತಿ ಎಂಥದ್ದು ಎಂದು ರಜನಿಕಾಂತ್ ಆಗಲೇ ಗುರುತಿಸಿದ್ದರು. ‘ಅಪ್ಪು ಚಿತ್ರದ ಶತಮಾನೋತ್ಸವ ಕಾರ್ಯಕ್ರಮ. ಇದು ಸಿಹಂದ ಮರಿ. ಈಗತಾನೇ ಗೆದ್ದಿದೆ, ಘರ್ಜಿಸೋಕೆ ಆರಂಭಿಸಿದೆ. ಈ ಸಿಂಹದ ಮರಿ ಇನ್ನು ಏನೇನೋ ಮಾಡುತ್ತೆ ಎಂದು ನನಗೆ ಅನಿಸುತ್ತಾ ಇದೆ’ ಎಂದು ರಜನಿಕಾಂತ್ ಹೇಳಿದ್ದರು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ

ಪುನೀತ್ ರಾಜ್​ಕುಮಾರ್ ಅವರು ರಜನಿಕಾಂತ್ ಅವರ ಆಶೀರ್ವಾದ ಪಡೆದರು. ವೇದಿಕೆ ಮೇಲೆ ರಾಘವೇಂದ್ರ ರಾಜ್​ಕುಮಾರ್, ಶಿವಕುಮಾರ್ ಹಾಗೂ ಪುನೀತ್ ಡ್ಯಾನ್ಸ್ ಮಾಡಿದ್ದರು. ‘ಎಲ್ಲರಿಗೂ ನಮಸ್ಕಾರ. ಕಾರ್ಯಕ್ರಮವನ್ನು ಇಷ್ಟು ಅದ್ದೂರಿಯಾಗಿ ಆಚರಿಸಿದ್ದಕ್ಕೆ ಧನ್ಯವಾದ’ ಎಂದಿದ್ದರು ರಾಜ್​ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Thu, 13 March 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us