
ಸ್ಯಾಂಡ್‌ವುಡ್‌ನ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ಹೊಸ ಆಲ್ಬಂ ಸಾಂಗ್ ‘ಮೈಮಾಟ’ ಚರ್ಚೆಗೆ ಕಾರಣ ಆಗಿದೆ. ಈ ಹಾಡಿನ ಸಾಲುಗಳು ನಿವೇದಿತಾಗೆ ಕೌಂಟರ್ ಎಂದು ಹೇಳಲಾಗುತ್ತಾ ಇದೆ. ಈ ಚರ್ಚೆ ಬೆನ್ನಲ್ಲೇ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಗೆ ಕೌಂಟರ್ ಕೊಟ್ಟರೇ ಎನ್ನುವ ಪ್ರಶ್ನೆ ಮೂಡಿದೆ.
ಚಂದನ್ ಶೆಟ್ಟಿ ಅವರ ಹೊಸ ಹಾಡೊಂದರಲ್ಲಿ ಬರುವ ‘ಏನೇ ನಿನ್ನ ಮೈಮಾಟದಾಟ, ಇನ್ನೇಳು ಜನುಮಕೆ ಕಲಿಸಿದಿಯ ಪಾಠ’ ಎಂಬ ಸಾಲುಗಳು ಸಖತ್ ಸೌಂಡ್ ಮಾಡುತ್ತಿವೆ. ಈ ಹಾಡಿನ ಸಾಲುಗಳನ್ನು ಕೇಳಿದ ನೆಟ್ಟಿಗರು, ಇದು ನೇರವಾಗಿ ನಿವೇದಿತಾ ಗೌಡ ಅವರನ್ನು ಉದ್ದೇಶಿಸಿ ಬರೆದದ್ದೇ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು, ಹಾಡಿನ ಕೆಳಗೆ ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ, ಹಾಡಿನ ಆರಂಭದಲ್ಲೇ ಸ್ಪಷ್ಟೀಕರಣ ಹಾಕಿರೋ ಚಂದನ್ ಶೆಟ್ಟಿ, ಈ ಹಾಡಿನ ಸಾಹಿತ್ಯ ಸಂಪೂರ್ಣ ಕಾಲ್ಪನಿಕ ಎಂದು ಬರೆದಿದ್ದಾರೆ.
ಚಂದನ್ ಶೆಟ್ಟಿ ಹಾಡು ವೈರಲ್ ಆಗುತ್ತಿದ್ದಂತೆಯೇ, ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಾಲುಗಳು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿವೆ. ತಮ್ಮ ಪೋಸ್ಟ್‌ನಲ್ಲಿ ಅವರು, ‘ನಾನು ಎಲ್ಲೋ ಓದಿದ್ದೆ—ಮಹತ್ವಾಕಾಂಕ್ಷೆ ಇರುವ ಹುಡುಗಿ ಅದ್ಭುತ ಸ್ನೇಹಿತರನ್ನು ಹೊಂದಿರುತ್ತಾರೆ ಮತ್ತು ದುರಾದೃಷ್ಟದ ಪ್ರೇಮ ಜೀವನವನ್ನು ಹೊಂದಿರುವುದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತರಹ. ಆದರೆ ನನ್ನದು ಒಂದು ಹಾರರ್ ಕಥೆ ಆಗಿತ್ತು. ಹಳೆಯ ನೆನಪುಗಳು ಹಾಗೂ ಭೂತಕಾಲ ನನ್ನನ್ನು ಬಿಟ್ಟು ಕದಲುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.
ನಿವೇದಿತಾ ಅವರ ಈ ಮಾತುಗಳು ಹೊರಬಿದ್ದ ತಕ್ಷಣ, ಇದು ಚಂದನ್ ಶೆಟ್ಟಿ ಅವರ ಹೊಸ ಹಾಡಿಗೆ ಹಾಗೂ ತಮ್ಮ ಭೂತಕಾಲದ ಜೀವನಕ್ಕೆ ನೀಡಿರುವ ನೇರ ತಿರುಗೇಟು (ಕೌಂಟರ್) ಎಂದು ನೆಟ್ಟಿಗರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.
ಇದನ್ನೂ ಓದಿ: ಚಂದನ್ ಶೆಟ್ಟಿಯ ಇಂರ್ಟ್ಯಾಷನಲ್ ಕೊಲಾಬರೇಷನ್: ವಿಡಿಯೋ ನೋಡಿ
2024ರಲ್ಲಿ ಈ ಜೋಡಿ ಕಾನೂನುಬದ್ಧವಾಗಿ ಡಿವೋರ್ಸ್ ಪಡೆದು ಬೇರ್ಪಟ್ಟಾಗ, ಇಬ್ಬರೂ ಮಾಧ್ಯಮಗಳ ಮುಂದೆ ಸೌಹಾರ್ದಯುತವಾಗಿ ಮಾತನಾಡಿದ್ದರು. ನಾವು ವೈಯಕ್ತಿಕ ಕಾರಣಗಳಿಂದ ಬೇರೆಯಾಗುತ್ತಿದ್ದರೂ, ಪರಸ್ಪರ ಗೌರವವನ್ನು ಸದಾ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ಇದೀಗ ಹೊಸ ಹಾಡು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಮೂಲಕ ಇಬ್ಬರ ನಡುವೆ ಕಿತ್ತಾಟ ಶುರುವಾಯಿತೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.