ಬೆಂಗಳೂರು: ದ್ವಾರಕೀಶ್ ಕುಟುಂಬ ಹಾಗೂ ಜಯಣ್ಣ ನಡುವೆ ನಡೆದ ಗಲಾಟೆ ವಿಚಾರ ಸಂಬಂಧಿಸಿ ನಿನ್ನೆ ಜಯಣ್ಣ ಜೊತೆ ಕೆ.ಮಂಜು ಕೂಡ ಇದ್ರು ಅನ್ನೋ ಮಾತು ಹೇಳಿ ಬಂದಿತ್ತು. ಈ ವಿಚಾರವಾಗಿ ಇಂದು ನಿರ್ಮಾಪಕ ಕೆ ಮಂಜು ಸ್ಪಷ್ಟನೆ ನೀಡಿದ್ದಾರೆ.
ದ್ವಾರಕೀಶ್ ಅವ್ರ ಬಗ್ಗೆ ನನಗೆ ತುಂಬಾ ಗೌರವ ಇದೆ. ರಾಮ ಶಾಮ ಭಾಮ ಸಿನಿಮಾ ಮಾಡುವಾಗ ನನಗೂ ಹಣ ಸಹಾಯ ಮಾಡಿದ್ದಾರೆ. ಯೋಗಿ ದ್ವಾರಕೀಶ್ ಅವ್ರಿಗೆ ನಾನು ಸಾಲ ಕೊಡಿಸಿದ್ದೇನೆ. ಅವನಿಗೆ ಸಿನಿಮಾ ಅಂದ್ರೆ ಪ್ರಾಣ. ದ್ವಾರಕೀಶ್ ಕುಟುಂಬ ನನಗೂ ಎರಡೂ ಕೋಟಿ ಹಣ ನೀಡಬೇಕು.
ಆಯುಷ್ಮಾನ್ ಭವ ಸಿನಿಮಾವನ್ನ 9ಕೋಟಿಗೆ ನಾನು ವಿತರಣೆಗೆ ಕೇಳಿದ್ದೆ. ಸಿನಿಮಾ ನಿರ್ಮಾಣದ ಸಮಯದಲ್ಲಿ 50ಲಕ್ಷ ಸಾಲ ಕೊಡಿಸಿದ್ದೇನೆ. ತಾತ್ಕಾಲಿಕವಾಗಿ ಸಮಸ್ಯೆ ಆಗಿರಬಹುದು ಆದರೆ ಮುಂದಿನ ದಿನಗಳಲ್ಲಿ ದ್ವಾರಕೀಶ್ ಹಣ ಕೊಡ್ತಾರೆ. ಈ ಸಮಸ್ಯೆಯಲ್ಲಿ ನನ್ನನ್ನು ಎಳೆಯುತ್ತಿದ್ದಾರೆ. ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Published On - 3:21 pm, Mon, 3 February 20