ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಪುತ್ರಿ ಆಯ್ರಾಗೆ ಇಂದು ಎರಡನೇ ವರ್ಷದ ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ರಾಧಿಕಾ ಪಂಡಿತ್ ಮಗಳಿಗೆ ಜನ್ಮದಿನದ ಶುಭಾಶಯ ಕೋರುವುದರ ಜೊತೆಗೆ ಕಿವಿಮಾತೊಂದನ್ನು ಹೇಳಿದ್ದಾರೆ.
ಕಳೆದ ವರ್ಷ ಆಯ್ರಾ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದ ದಂಪತಿ, ಕೊರೋನಾ ಇರುವ ಕಾರಣ ಈ ಬಾರಿ ಮನೆಯಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಜನ್ಮದಿನಕ್ಕೆ ವಿಶೇಷ ವಿಶ್ ಕೂಡ ಮಾಡಿದ್ದಾರೆ ರಾಧಿಕಾ ಪಂಡಿತ್.
2018 ರ ಡಿಸೆಂಬರ್ 2ರಂದು ಆಯ್ರಾ ಜನಿಸಿದ್ದಳು. ಮಗಳು ಹುಟ್ಟಿದ ನಂತರದಲ್ಲಿ ಯಶ್ ದಂಪತಿ ಹೆಚ್ಚು ಸಂಭ್ರಮಿಸಿದ್ದರು. ಅಭಿಮಾನಿಗಳು ಕೂಡ ಯಶ್ಗೆ ಮಗಳು ಹುಟ್ಟಿದ್ದ ವಿಚಾರ ಕೇಳಿ ಖುಷಿಯಾಗಿದ್ದರು. ಯಶ್ ಮಗಳಿಗೆ ಏನು ಹೆಸರಿಡುತ್ತಾರೆ ಎನ್ನುವ ವಿಚಾರ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸ್ಟಾರ್ ದಂಪತಿಗೆ ಮಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ರಾಧಿಕಾ ವಿಶೇಷವಾಗಿ ಹಾರೈಸಿದ್ದಾರೆ.
ನೀನು ನಮ್ಮ ಜೀವನದಲ್ಲಿ ಸಂತೋಷ ನೀಡಿದ್ದೀಯಾ ನಮ್ಮ ಪುಟಾಣಿ ಏಂಜಲ್ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬೇಗ ಬೆಳೆಯ ಬೇಡ, ಸಣ್ಣವಳಾಗಿಯೇ ಇರು ಎನ್ನುವ ಕಿವಿಮಾತು ಕೂಡ ಹೇಳಿದ್ದಾರೆ.
ಇನ್ನು ಯಶ್ ಕೂಡ ಆಯ್ರಾ ಜನ್ಮದಿಕ್ಕೆ ಶುಭಾಶಯ ಕೋರಿ ವಿಡಿಯೋ ಒಂದನ್ನು ಹಾಕಿದ್ದಾರೆ.
Published On - 11:09 am, Wed, 2 December 20