‘ರಾಘವೇಂದ್ರ ಸ್ಟೋರ್ಸ್​’ ಚಿತ್ರದ ಟ್ರೇಲರ್​ ಬಿಡುಗಡೆ; ಮದುವೆ ಪ್ರಸಂಗದಿಂದ ನಕ್ಕು ನಗಿಸ್ತಾರೆ ಜಗ್ಗೇಶ್​

Raghavendra Stores Trailer: ಇತ್ತೀಚೆಗೆ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ‘ಸಿಂಗಲ್​ ಸುಂದರ..’ ಹಾಡು ಬಿಡುಗಡೆ ಆಗಿತ್ತು. ಈಗ ಟ್ರೇಲರ್​ ಕೂಡ ಗಮನ ಸೆಳೆಯುತ್ತಿದೆ.

‘ರಾಘವೇಂದ್ರ ಸ್ಟೋರ್ಸ್​’ ಚಿತ್ರದ ಟ್ರೇಲರ್​ ಬಿಡುಗಡೆ; ಮದುವೆ ಪ್ರಸಂಗದಿಂದ ನಕ್ಕು ನಗಿಸ್ತಾರೆ ಜಗ್ಗೇಶ್​
ರಾಘವೇಂದ್ರ ಸ್ಟೋರ್ಸ್

Updated on: Apr 17, 2023 | 7:01 PM

ನಟ ಜಗ್ಗೇಶ್​ (Jaggesh) ಅವರು ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಎರಡೂ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದಾರೆ. ಅವರು ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಜಗ್ಗೇಶ್​ ಸಿನಿಮಾ ಎಂದರೆ ಇದರಲ್ಲಿ ಕಾಮಿಡಿ ಇರಲೇಬೇಕು. ‘ರಾಘವೇಂದ್ರ ಸ್ಟೋರ್ಸ್​’ ಕೂಡ ಭರಪೂರ ಕಾಮಿಡಿ ಕಚಗುಳಿ ಇಡುವಂತಹ ಚಿತ್ರ ಎಂಬುದಕ್ಕೆ ಈ ಟ್ರೇಲರ್​ ಸಾಕ್ಷಿ ಒದಗಿಸುತ್ತಿದೆ. ಸಂತೋಷ್​ ಆನಂದ್​ ರಾಮ್​ (Santhosh Ananddram) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾಳೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಏಪ್ರಿಲ್​ 28ರಂದು ‘ರಾಘವೇಂದ್ರ ಸ್ಟೋರ್ಸ್​’ ಚಿತ್ರ (Raghavendra Stores Movie) ಬಿಡುಗಡೆ ಆಗಲಿದೆ. ರಿಷಬ್​ ಶೆಟ್ಟಿ ಅವರ ಈ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ.

ವಯಸ್ಸು 40 ದಾಟಿದರೂ ಮದುವೆ ಆಗದ ವ್ಯಕ್ತಿಯ ಪಾತ್ರದಲ್ಲಿ ಜಗ್ಗೇಶ್​ ನಟಿಸಿದ್ದಾರೆ. ಈ ಪಾತ್ರದ ಹೆಸರು ಹಯವದನ. ಹೇಗಾದರೂ ಮದುವೆ ಆಗಲೇಬೇಕು ಎಂದು ಆತ ಹಠಕ್ಕೆ ಬೀಳುತ್ತಾನೆ. ‘ನಾನು ಹಾಳಾಗಿಹೋಗಿ ರೋಡಿಗೆ ಬಂದ್ರೂ ಪರವಾಗಿಲ್ಲ. ಮದುವೆ ಆಗಲೇಬೇಕು’ ಎಂದು ಡೈಲಾಗ್​ ಹೊಡೆಯುವ ಹಯವದನ ಈ ಸಿನಿಮಾದಲ್ಲಿ ಏನೆಲ್ಲ ಮಾಡ್ತಾನೆ ಎಂದು ತಿಳಿಯುವ ಕೌತುಕ ಮೂಡಿದೆ. ಇತ್ತೀಚೆಗೆ ಈ ಸಿನಿಮಾದ ‘ಸಿಂಗಲ್​ ಸುಂದರ..’ ಹಾಡು ಬಿಡುಗಡೆ ಆಗಿತ್ತು. ಈಗ ಟ್ರೇಲರ್​ ಕೂಡ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
‘ಕೆಜಿಎಫ್​ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?
RCB-Hombale: ಬೆಂಗಳೂರಿನ ಖದರ್ ವಿಶ್ವಕ್ಕೆ ಪಸರಿಸಲು ಹೊಂಬಾಳೆ ಜೊತೆ ಕೈಜೋಡಿಸಿದ ಆರ್​ಸಿಬಿ
Kantara 2: ಯುಗಾದಿ ದಿನವೇ ಸಿಹಿ ಸುದ್ದಿ ನೀಡಿದ ರಿಷಬ್​ ಶೆಟ್ಟಿ; ಇಲ್ಲಿದೆ ‘ಕಾಂತಾರ 2’ ಅಪ್​ಡೇಟ್​
Hombale Films: ಮುಂದಿನ 5 ವರ್ಷಗಳಲ್ಲಿ ಚಿತ್ರರಂಗಕ್ಕೆ 3 ಸಾವಿರ ಕೋಟಿ ರೂ. ಹೂಡಿಕೆ; ವಿಜಯ್ ಕಿರಗಂದೂರು ಮಹತ್ವದ ಘೋಷಣೆ

ಇದು ಮದುವೆಗೆ ಸಂಬಂಧಿಸಿರುವ ಕಥೆಯುಳ್ಳ ಚಿತ್ರ ಆದ್ದರಿಂದ ವಿಶೇಷ ರೀತಿಯಲ್ಲಿ ಟೈಟಲ್​ ಕಾರ್ಡ್​ ತೋರಿಸಲಾಗಿದೆ. ಸಂತೋಷ್​ ಆನಂದ್​ ರಾಮ್​ ಅವರನ್ನು ‘ನಿರ್ದೇಶಕ’ ಎಂಬುದರ ಬದಲು ‘ವೆಡ್ಡಿಂಗ್​ ಪ್ಲಾನರ್​’ ಎಂದು ಬರೆಯಲಾಗಿದೆ. ನಿರ್ಮಾಣ ಎಂಬುದರ ಬದಲು ‘ಊಟ, ಉಪಚಾರ – ಹೊಂಬಾಳೆ ಫಿಲ್ಮ್ಸ್​’ ಎಂದು ಬರೆಯಲಾಗಿದೆ. ಶ್ರೀಶಾ ಕುದುವಳ್ಳಿ ಅವರ ಛಾಯಾಗ್ರಹಣವನ್ನು ‘ವಿಡಿಯೋಗ್ರಫಿ’ ಹಾಗೂ ಅಜನೀಶ್​ ಬಿ. ಲೋಕನಾಥ್​ ಅವರ ಸಂಗೀತ ನಿರ್ದೇಶನವನ್ನು ‘ವಾದ್ಯ ಗೋಷ್ಠಿ’ ಎಂದು ಕರೆಯಲಾಗಿದೆ.

ಇದನ್ನೂ ಓದಿ: Jaggesh: ಕುಟುಂಬ ಸಮೇತರಾಗಿ ಪ್ರಧಾನಿ ಮೋದಿ ಭೇಟಿ ಮಾಡಿದ ಜಗ್ಗೇಶ್​; ಇಲ್ಲಿದೆ ಫೋಟೋ ಗ್ಯಾಲರಿ

‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದಲ್ಲಿ ಜಗ್ಗೇಶ್​ ಜೊತೆ ಶ್ವೇತಾ ಶ್ರೀವಾತ್ಸವ್​, ಅಚ್ಯುತ್​ ಕುಮಾರ್​, ದತ್ತಣ್ಣ, ರವಿಶಂಕರ್​ ಗೌಡ ಮುಂತಾದವರು ನಟಿಸಿದ್ದಾರೆ. ಸಂತೋಷ್​ ಆನಂದ್​ ರಾಮ್​ ಅವರು ಕಾಮಿಡಿ ಪ್ರಯತ್ನಿಸುತ್ತಿರುವುದು ಇದೇ ಮೊದಲು. ಈ ಹಿಂದೆ ‘ಮಿಸ್ಟರ್​ ಆ್ಯಂಡ್​ ಮಿಸಸ್​ ರಾಮಾಚಾರಿ’, ‘ರಾಜಕುಮಾರ’, ‘ಯುವರತ್ನ’ ಸಿನಿಮಾ ನಿರ್ದೇಶಿಸಿದ್ದ ಅವರು ಈಗ ‘ರಾಘವೇಂದ್ರ ಸ್ಟೋರ್ಸ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 7:01 pm, Mon, 17 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us