
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ನಿಶ್ಚಿತಾರ್ಥ 2020ರ ಫೆಬ್ರವರಿ 10ರಂದು ನೆರವೇರಲಿದೆ.
ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ, ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಎಂಗೇಜ್ಮೆಂಟ್ ನಡೆಯಲಿದೆ. ನಿಶ್ಚಿತಾರ್ಥ ಹಾಗೂ ಮದುವೆ ಕುರಿತು ಉಭಯ ಕುಟುಂಬಗಳ ಸದಸ್ಯರು ಜೆ.ಪಿ.ನಗರದಲ್ಲಿರುವ ನಿಖಿಲ್ ನಿವಾಸದಲ್ಲಿ ಇಂದು ಭಾಗಿಯಾಗಿ, ಮಾತುಕತೆ ನಡೆಸಿದರು. ಬರುವ ಏಪ್ರಿಲ್ ತಿಂಗಳಿನಲ್ಲಿ ವಿವಾಹ ನಡೆಯುವ ಸಾಧ್ಯತೆಯಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇದೇ ವೇಳೆ ಹೇಳಿದ್ದಾರೆ.
Published On - 4:52 pm, Thu, 30 January 20