
ಪ್ರಕಾಶ್ ರಾಜ್ (Prakash Raj) ಅವರು ತಮ್ಮ ಸಿದ್ಧಾಂತಗಳ ಮೂಲಕ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ಟೊಯಾಟೋ ಹೈಲಕ್ಸ ಪಿಕಪ್ ಕಾರು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಸಿದ್ದಾರೆ. ವಿಶೇಷ ಎಂದರೆ ಈ ವಾಹನದಲ್ಲಿ ಕ್ಯಾಪಿಂಗ್ ಮಾಡೋ ವ್ಯವಸ್ಥೆ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.
ಪ್ರಕಾಶ್ ಅವರು ದಕ್ಷಿಣದ ಖ್ಯಾತ ಹೀರೋ. ಅವರಿಗೆ ವಾಹನಗಳ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಸಾಕಷ್ಟು ದುಬಾರಿ ಕಾರುಗಳು ಇವೆ. ಈಗ ಅವರ ಹೈಲಕ್ಸ್ ಟ್ರಕ್ನ ವಿಡಿಯೋನ ವ್ರಾಪ್ಜಿಲ್ಲಾ (Wrapzilla) ಹೆಸರಿನ ಇನ್ಸ್ಟಾ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ಈ ಸಂಸ್ಥೆ ಈ ಮೊದಲು ಪ್ರಕಾಶ್ ರಾಜ್ ಅವರ ಹಲವು ಕಾರುಗಳನ್ನು ಅಲ್ಟ್ರೇಷನ್ ಮಾಡಿತ್ತು ಎನ್ನಲಾಗಿದೆ. ಈಗ ಅವರು ಪಿಕಪ್ ಟ್ರಕ್ಗೆ ಹಲವು ಬದಲಾವಣೆ ಮಾಡಿಸಿದ್ದಾರೆ.
ಪ್ರಕಾಶ್ ರಾಜ್ ಅವರೇ ಮುಂದೆ ನಿಂತು ಬದಲಾವಣೆಗಳನ್ನು ಮಾಡಿಸಿದ್ದಾರೆ. ಈ ಟ್ರಕ್ ಹಿಂಭಾಗದಲ್ಲಿ ಅವರು ಟೆಂಟ್ ಹಾಕಿಸೋ ವ್ಯವಸ್ಥೆ ಮಾಡಿಸಿದ್ದಾರೆ. ಈ ಕಾರನ್ನು ಎಲ್ಲಾದರೂ ಆಫ್ರೋಡ್ ತೆಗೆದುಕೊಂಡು ಹೋದರೆ ಅಲ್ಲಿಯೇ ಕ್ಯಾಂಪ್ ಹಾಕಿ ಹಾಯಾಗಿ ಮಲಗಬಹುದು.
ಪ್ರಕಾಶ ರಾಜ್ ಅವರ ಕಾರನ್ನು ಅನೇಕರು ಇಷ್ಟಪಟ್ಟಿದ್ದಾರೆ. ಹಣವನ್ನು ಅವರು ತಮ್ಮ ಕನಸುಗಳನ್ನು ಸಹಕಾರ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿರುವ ಬಗ್ಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಕಾಶ್ ರಾಜ್ ಅನೇಕರ ಕನಸುಗಳನ್ನು ಜೀವಿಸುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಹೈಲಕ್ಸ್ ಇದು ಕಾರಿನ ಕ್ಯಾಟೆಗರಿಗೆ ಬರೋದಿಲ್ಲ. ಇದು ಪಿಕಪ್ ಟ್ರಕ್. ಇದರಲ್ಲಿ ಐದು ಜನ ಕುಳಿತುಕೊಳ್ಳಬಹುದು. ಹಿಂಭಾಗದಲ್ಲಿ ಬೈಕ್ ಅಥವಾ ಇತರ ವಸ್ತುಗಳನ್ನು ಇಟ್ಟುಕೊಂಡು ಹೋಗಲು ಅವಕಾಶ ಇರುತ್ತದೆ. ಈ ಕಾರಿನ ಆನ್ ರೋಡ್ ಬೆಲೆ 50 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇದೆ. ಮಾಡಿಫಿಕೇಷನ್ ಮಾಡಿಸಿದರೆ ಮತ್ತಷ್ಟು ಹಣ ಖರ್ಚಾಗಲಿದೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ: ಪ್ರಕಾಶ್ ರಾಜ್ ಅಸಮಾಧಾನ
ಹೈಲಕ್ಸ್ ಕಾರಿನಲ್ಲಿ ಮ್ಯಾನ್ಯುವಲ್ ಆಯ್ಕೆಯನ್ನು ಭಾರತದಲ್ಲಿ ನಿಲ್ಲಿಸಲಾಗಿದ್ದು, ಆಟೋಮ್ಯಾಟಿಕ್ ಆಯ್ಕೆ ಮಾತ್ರ ಲಭ್ಯವಿದೆ. 2.8 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಇಂಜಿನ್ನ ಇದು ಹೊಂದಿದ್ದು, 202 ಎಚ್ಪಿ ಹಾರ್ಸ್ ಪವರ್ನ ಇನು ಜನರೇಟ್ ಮಾಡಲಿದೆ. ಇದಕ್ಕೆ 500 ಎನ್ಎಂ ಟಾರ್ಕ್ ಇದೆ. ಟಾಟಾ ಪಂಚ್ ಕಾರಿನಲ್ಲಿ ಇರೋದು ಕೇವಲ 115 ಎನ್ಎಂ ಟಾರ್ಕ್. ಇದಕ್ಕಿಂತ 5 ಪಟ್ಟು ಹೆಚ್ಚು ಟಾರ್ಕ್ ಈ ಪಿಕಪ್ ಟ್ರಕ್ಗೆ ಇದೆ. ಇದರಿಂದ ಭಾರತದ ವಸ್ತುಗಳನ್ನು ಎಳೆಯಲು ಸಹಕಾರಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.