ರಾಕ್ಲೈನ್ ವೆಂಕಟೇಶ್ ನಿರ್ಮಾಪಕರಾಗಿ, ನಟನಾಗಿ ಹೆಸರು ಮಾಡಿದ್ದು ಗೊತ್ತಿದೆ. ಆದ್ರೀಗ ಅವರ ಮೊಮ್ಮಗಳು ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ರಾಕ್ಲೈನ್ ಪುತ್ರ ಯತೀಶ್ ಅವರ ಪುತ್ರಿ ಶರಯೂ ಗಾಯಕಿಯಾಗಿ ಗುರುತಿಸಿಕೊಳ್ತಿದ್ದಾರೆ.
ಕೃಷ್ಣ ಜನಾರ್ಧನ ಹಾಡಿನ ರೀಮಿಕ್ಸ್ ಹಾಡಿಗೆ ಶರಯೂ ದನಿ ನೀಡಿದ್ದಾಳೆ. ಶ್ರೀ ಕೃಷ್ಣನ ಅವತಾರವನ್ನು ಪರಿಚಯಿಸುವ ಕೃಷ್ಣ ಜನಾರ್ಧನ ಹಾಡು ಸುಮಧುರವಾಗಿ ಮೂಡಿಬಂದಿದೆ. ಅನುಪಮ ಈ ಹಾಡನ್ನ ರಚಿಸಿ ಸಂಯೋಜಿಸಿದ್ದಾರೆ. ಶರಯೂ ಮಲ್ಲೇಶ್ವರಂನ ಬ್ರಿಗೇಡ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಶರಯೂ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ.
Published On - 8:36 am, Sun, 16 August 20