ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಪ್ರಕರಣದಲ್ಲಿ ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಮತ್ತೊಬ್ಬ ನಟಿಯನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ಕಳೆದ ವಾರ ರಾಗಿಣಿ ದ್ವಿವೇದಿ ಬಂಧನಕ್ಕೊಳಗಾದ ಬಳಿಕ, ಇಂದು ಸಂಜನಾ ಗಲ್ರಾನಿಯನ್ನು ಸಿಸಿಬಿ ತಂಡ ವಶಕ್ಕೆ ತೆಗೆದುಕೊಂಡು, ತನ್ನ ಚಾಮರಾಜಪೇಟೆ ಕಚೇರಿಗೆ ಕರೆ ತಂದಿದೆ.
ಅಸಹ್ಯಕರ Dirty Dance
ಈ ಮಧ್ಯೆ, ಸಂಜನಾ ಗಲ್ರಾನಿ ಸಿಸಿಬಿ ಬಲೆಗೆ ಬೀಳುತ್ತಿದ್ದಂತೆ ನಟಿ ಸಂಜನಾ ಕುರಿತು ಅನೇಕ ಮಹತ್ವದ ಮಾಹಿತಿಗಳು ಬಯಲಾಗುತ್ತಿವೆ. ಅದರಲ್ಲೂ ಸಂಜನಾ ಅಸಹ್ಯಕರವಾಗಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋವೊಂದು ಇದ್ದಕ್ಕಿದ್ದಂತೆ ವೈರಲ್ ಆಗಿದೆ. ಹೌದು, ನೈಜೀರಿಯಾ ಪ್ರಜೆಗಳ ಜೊತೆ ನಟಿ ಸಂಜನಾ ಗಲ್ರಾನಿ ಡರ್ಟಿ ಡ್ಯಾನ್ಸ್ ನಲ್ಲಿ ಪಾಲ್ಗೊಂಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.