ಗೌರಿ ಪುತ್ರಿಗೆ ಇಪ್ಪತ್ತು! ಸೆಲೆಬ್ರೇಶನ್ ಹೇಗಿತ್ತು?

| Updated By:

Updated on: May 24, 2020 | 12:59 PM

ಲಾಕ್​ಡೌನ್ ಸಮಯದಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮೇ 22 ರಂದು 20 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹಿತೈಷಿಗಳು, ಸ್ನೇಹಿತರು ಮತ್ತು ಕುಟುಂಬದಿಂದ ಸುಹಾನಾಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸುಹಾನಾ ಖಾನ್ ಸ್ನೇಹಿತೆ ಅನನ್ಯಾ ಪಾಂಡೆ ಗೆಳತಿಯ ಹುಟ್ಟುಹಬ್ಬಕ್ಕೆ ಒಂದು ಮುದ್ದಾದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿ ಪತ್ನಿ ಔರ್ ವೋಹ್ ಸಿನಿಮಾದ ನಟಿ  ಇನ್‌ಸ್ಟಾಗ್ರಾಮ್​ನಲ್ಲಿ ಇವರಿಬ್ಬರ ಕೆಲವು ಬಾಲ್ಯದ ಚಿತ್ರಗಳು ಹಾಗೂ ತಮ್ಮ […]

ಗೌರಿ ಪುತ್ರಿಗೆ ಇಪ್ಪತ್ತು! ಸೆಲೆಬ್ರೇಶನ್ ಹೇಗಿತ್ತು?
Follow us on

ಲಾಕ್​ಡೌನ್ ಸಮಯದಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮೇ 22 ರಂದು 20 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹಿತೈಷಿಗಳು, ಸ್ನೇಹಿತರು ಮತ್ತು ಕುಟುಂಬದಿಂದ ಸುಹಾನಾಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸುಹಾನಾ ಖಾನ್ ಸ್ನೇಹಿತೆ ಅನನ್ಯಾ ಪಾಂಡೆ ಗೆಳತಿಯ ಹುಟ್ಟುಹಬ್ಬಕ್ಕೆ ಒಂದು ಮುದ್ದಾದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪತಿ ಪತ್ನಿ ಔರ್ ವೋಹ್ ಸಿನಿಮಾದ ನಟಿ  ಇನ್‌ಸ್ಟಾಗ್ರಾಮ್​ನಲ್ಲಿ ಇವರಿಬ್ಬರ ಕೆಲವು ಬಾಲ್ಯದ ಚಿತ್ರಗಳು ಹಾಗೂ ತಮ್ಮ ಇತ್ತೀಚಿನ ಚಿತ್ರಗಳನ್ನೂ ಸಹ ಹಂಚಿಕೊಂಡಿದ್ದಾರೆ. ಲಾಕ್​ಡೌನ್​ನಿಂದಾಗಿ ಸುಹಾನಾ ಮನೆಯಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರ ಸ್ನೇಹಿತರು ಪೋಸ್ಟ್​ಗಳನ್ನು ಹಾಕುವ ಮೂಲಕ ಸಹಾನಾಗೆ ಮತ್ತಷ್ಟು ಖುಷಿಯನ್ನು ಹೆಚ್ಚಿಸಿದ್ದಾರೆ.

ಸುಹಾನಾ ಖಾನ್ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಸುಂದರವಾದ ಮ್ಯಾಕ್ಸಿ ಡ್ರೆಸ್ ಧರಿಸಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೆ ಇತ್ತೀಚೆಗೆ ಸುಹಾನಾ ಇನ್‌ಸ್ಟಾಗ್ರಾಮ್ ಅನ್ನು ಸಾರ್ವಜನಿಕ ಖಾತೆಯನ್ನಾಗಿ ಮಾಡಿದ ನಂತರ, ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲೇ ಸುಹಾನಾ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ಕ್ಲಬ್‌ಗಳನ್ನು ಹೊಂದಿದ್ದಾರೆ.

Published On - 12:24 pm, Sun, 24 May 20