
ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ದೇಶಭ್ರಷ್ಟ ವಿಜಯ್ ಮಲ್ಯ ಕಥೆ ಇದೀಗ ವೆಬ್ ಸಿರೀಸ್ ಆಗಿ ಹೊರಬರುತ್ತಿದೆ.
ಬಾಲ್ಯದ ದಿನಗಳಿಂದ ಹಿಡಿದು ಪರಾರಿಯಾಗುವವರೆಗೂ ವೆಬ್ ಸಿರೀಸ್
ಆಲ್ಮೈಟಿ ಮೋಷನ್ ಪಿಚರ್ಸ್ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್ ಕೌರ್ PZ ಪಿಚರ್ಸ್ ಸಂಸ್ಥೆ ಜೊತೆ ಕೈಗೂಡಿಸಿ ಖ್ಯಾತ ಬರಹಗಾರ ಗಿರಿ ಪ್ರಕಾಶ್ರ ದಿ ವಿಜಯ್ ಮಲ್ಯ ಸ್ಟೋರಿ ಪುಸ್ತಕದ ಚಿತ್ರೀಕರಣ ಹಕ್ಕು ಖರೀದಿಸಿದ್ದಾರೆ. ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು ಆತ ಇಂಗ್ಲೆಂಡ್ಗೆ ಪರಾರಿಯಾಗುವವರೆಗೂ ಆತನ ಕಥೆಯನ್ನ ವೆಬ್ ಸಿರೀಸ್ ಆಗಿ ನಿರ್ಮಿಸಲು ಮುಂದಾಗಿದ್ದಾರೆ.
ಸದ್ಯ ಚಿತ್ರಕಥೆ ಕೊನೆಯ ಹಂತ ತಲುಪಿದ್ದು ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್ನ ಖ್ಯಾತ ನಟರೊಬ್ಬರು ಮಲ್ಯನ ಪಾತ್ರ ಮಾಡಲು ಸಹ ಒಪ್ಪಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
Published On - 12:34 pm, Sat, 15 August 20