
ಮಲೈಕಾ ಅರೋರಾ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಚಿತ್ರದೊಂದಿಗೆ ಸಿನಿಮಾ ಮ್ಯಾಗ್ ಜಿನ್ನಲ್ಲಿ ಪ್ರಕಟವಾಗಿದ್ದ ಹೇಳಿಕೆಯನ್ನು ಬಾಲಿವುಡ್ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದಾರೆ.
ಸಿನಿಮಾ ಮ್ಯಾಗ್ ಜಿನ್ನೊಂದು ಬಾಲಿವುಡ್ನ ಈ ಇಬ್ಬರು ನಟಿಯರ ಚಿತ್ರ ಹಾಕಿ ಇವರಿಬ್ಬರು ಬಾಲಿವುಡ್ನ ಅತ್ಯಂತ ಹಾಟ್ ಅಮ್ಮಂದಿರು ಎಂದು ಬರೆದುಕೊಂಡಿದ್ದರು. ಇದನ್ನು ಟೀಕಿಸಿರುವ ವಿವೇಕ್ “ನನಗೆ ಅನಿಸುವಂತೆ ಈ ಮೂರ್ಖತನ ನಿಲ್ಲಬೇಕು. ಅತ್ಯಂತ ಹಾಟೆಸ್ಟ್ ತಾಯಿ ಎಂದರೇನು?” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದು ಸ್ತ್ರೀವಾದಕ್ಕೆ ಹಾನಿ ಮಾಡುತ್ತದೆ. ನೀವು ದೇಹದ ಆಕಾರವನ್ನು ಆಧರಿಸಿ ತಾಯಂದಿರ ನಡುವೆ ವರ್ಗವನ್ನು ರಚಿಸುವುದು ನಾಚಿಕೆಗೇಡು” ಎಂದು ಅವರು ಬರೆದುಕೊಂಡಿದ್ದಾರೆ.