ವಿಷ್ಣುಪ್ರಿಯ ಸಿನಿಮಾ ಪ್ರಚಾರದ ವೇಳೆ ಶ್ರೆಯಸ್ ಮಂಜು ಕಾರು ಅಪಘಾತ

Updated on: Feb 20, 2025 | 12:46 PM

Shreyas Manju: ನಿರ್ಮಾಪಕ ಕೆ ಮಂಜು ಅವರ ಪುತ್ರ ನಟ ಶ್ರೆಯಸ್ ಮಂಜು ಅವರ ಕಾರು ಅಪಘಾತಕ್ಕೆ ಈಡಾಗಿದೆ. ತಮ್ಮ ನಟನೆಯ ಹೊಸ ಸಿನಿಮಾ‘ವಿಷ್ಣುಪ್ರಿಯ’ದ ಪ್ರಚಾರಕ್ಕಾಗಿ ದಾವಣಗೆರೆಗೆ ತೆರಳುವ ವೇಳೆಯಲ್ಲಿ ಶಿರಾ ಬಳಿ ಅಪಘಾತಕ್ಕೆ ಈಡಾಗಿದೆ. ಈ ಅಪಘಾತದಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ತಮ್ಮ ಹೊಸ ಸಿನಿಮಾ ‘ವಿಷ್ಣುಪ್ರಿಯ’ದ ಪ್ರಚಾರಕ್ಕಾಗಿ ದಾವಣಗೆರೆಗೆ ತೆರಳುತ್ತಿರುವ ವೇಳೆ ಶಿರಾ ಬಳಿ ಅವರ ಬಿಎಂಡಬ್ಲು ಕಾರು ಅಪಘಾತಕ್ಕೆ ಈಡಾಗಿದೆ. ಶ್ರೆಯಸ್ ಅವರ ಐಶಾರಾಮಿ ಕಾರಿನ ಒಂದು ಭಾಗಕ್ಕೆ ತೀವ್ರ ಏಟಾಗಿದ್ದು ಮಿರರ್ ಮುರಿದು, ಸಾಕಷ್ಟು ಡೆಂಟ್ ಆಗಿದೆ. ಅಪಘಾತ ಆದ ಕೂಡಲೇ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರಿನ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಶ್ರೆಯಸ್ ಮಂಜು, ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ದೂರು ಸಹ ದಾಖಲಿದ್ದಾರೆ. ಈ ಅಪಘಾತದಲ್ಲಿ ಶ್ರೆಯಸ್ ಮಂಜುಗೆ ಯಾವುದೇ ಗಾಯಗಳಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More