‘ಕನಗುವ’ ಸಿನಿಮಾ ಕಲೆಕ್ಷನ್, ನಿರ್ಮಾಪಕರ ನಿರೀಕ್ಷೆ ಎಷ್ಟು?

|

Updated on: Oct 15, 2024 | 4:27 PM

ಸೂರ್ಯ ನಟನೆಯ ‘ಕನಗುವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ನಿರ್ಮಾಪಕ ಜ್ಞಾನವೇಲು ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದು, ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆದರೆ ನೆಟ್ಟಿಗರು ಇದು ಯಾಕೋ ಅತಿಯಾಯ್ತು ಎಂದಿದ್ದಾರೆ.

‘ಕನಗುವ’ ಸಿನಿಮಾ ಕಲೆಕ್ಷನ್, ನಿರ್ಮಾಪಕರ ನಿರೀಕ್ಷೆ ಎಷ್ಟು?
Follow us on

ಒಂದು ಸಮಯದಲ್ಲಿ ಸಿನಿಮಾ ಒಂದು 100 ಕೋಟಿ ಗಳಿಸುವುದೇ ಬಹಳ ದೊಡ್ಡ ವಿಷಯವಾಗಿತ್ತು. ಸಿನಿಮಾ ಒಂದು 100 ಕೋಟಿ ಗಳಿಸಿದೆಯೆಂದರೆ ಅದು ದಾಖಲೆ ಆಗಿಬಿಡುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಪರಿಸ್ಥಿತಿ ಬೇರೆಯದೇ ಆಗಿದೆ. ಈಗ ಸಿನಿಮಾಗಳು ಕೇವಲ ಒಂದೆರಡು ದಿನಗಳಲ್ಲಿ ನೂರು ಕೋಟಿ ಗಳಿಸುತ್ತಿವೆ. ಪ್ರತಿ ಸ್ಟಾರ್ ನಟನ ಸಿನಿಮಾಗಳು ಸಹ 500 ಕೋಟಿ ರೂಪಾಯಿ ಹಣವನ್ನು ಸುಲಭವಾಗಿ ಗಳಿಸುತ್ತಿವೆ. ಸಾವಿರ ಕೋಟಿ ಸಹ ಸುಲಭವೇ ಆಗಿದೆ. ಆದರೆ ತಮಿಳಿನ ಬಿಗ್​ಬಜೆಟ್ ನಿರ್ಮಾಪಕರೊಬ್ಬರು ತಮ್ಮ ಸಿನಿಮಾ ಎಷ್ಟು ಗಳಿಕೆ ಮಾಡಬಹುದೆಂದು ಊಹೆ ಮಾಡಿದ್ದಾರೆ.

ತಮಿಳಿನ ಸ್ಟಾರ್ ನಟ ಸೂರ್ಯ, ‘ಕನಗುವ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಸೂರ್ಯ ನಟನೆಯ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾದ ನಿರ್ಮಾಪಕ ಕೆಇ ಜ್ಞಾನವೇಲು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಸಿನಿಮಾ ಇಷ್ಟು ಹಣ ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡಬಹುದೆಂದು ನಿರೀಕ್ಷೆಯೊಂದನ್ನು ಮುಂದಿಟ್ಟಿದ್ದಾರೆ. ಜ್ಞಾನವೇಲು ಮಾತುಕೇಳಿ ನೆಟ್ಟಿಗರು ಅತಿಯಾದ ನಿರೀಕ್ಷೆಯಾಯ್ತು ಎಂದು ಮೂದಲಿಸಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿ ಜೊತೆ ಕುಳಿತು ‘ವೆಟ್ಟೈಯನ್​’ ಸಿನಿಮಾ ನೋಡಿದ ಧನುಷ್; ವಿಡಿಯೋ ವೈರಲ್

ಕೆಇ ಜ್ಞಾನವೇಲು ಪ್ರಕಾರ ‘ಕನಗುವ’ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಸಿನಿಮಾ ತಂಡ ಸಿನಿಮಾದ ಬಗ್ಗೆ ಬಹಳ ಕಾನ್ಸಿಫಿಡೆಂಟ್ ಆಗಿ ಇದೆಯಂತೆ. ನಿರ್ಮಾಪಕರ ಪ್ರಕಾರ ‘ಕನಗುವ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸುಮಾರು 2000 ಕೋಟಿ ಗಳಿಕೆ ಮಾಡಲಿದೆಯಂತೆ. 2000 ಕೋಟಿ ಹಣವನ್ನು ನಮ್ಮ ಸಿನಿಮಾ ಸುಲಭವಾಗಿ ಗಳಿಸಲಿದೆ ಎಂದಿದ್ದಾರೆ ಜ್ಞಾನವೇಲು.

ಇದರ ಜೊತೆಗೆ ಸಿನಿಮಾದ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಸಹ ಹೊರಗೆ ಹಾಕಿದ್ದಾರೆ. ‘ಕನಗುವ’ ಸಿನಿಮಾದ ಒಟ್ಟು ರನ್​ಟೈಮ್ 2:26 ನಿಮಿಷ ಮಾತ್ರವೇ ಇದೆ. ಅದರಲ್ಲಿ ಸೂರ್ಯ ಕನಗುವ ಆಗಿ ಎರಡು ಗಂಟೆ ಕಾಣಿಸಿಕೊಳ್ಳಲಿದ್ದಾರೆ ಅಂದರೆ ಕನಗುವ ಕತೆ 2 ಗಂಟೆ ಇರಲಿದೆ, ಇನ್ನುಳಿದ 26 ನಿಮಿಷ ವರ್ತಮಾನ ಕಾಲದ ಕತೆ ಇರಲಿದೆ ಎಂದಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ.

ಅಂದಹಾಗೆ ‘ಕನಗುವ’ ಸಿನಿಮಾ ಪ್ರಾಚೀನ ಕಾಲದ ಕತೆಯನ್ನು ಒಳಗೊಂಡಿದೆ. ಮುನುಷ್ಯ ಆಯುಧ, ಕುದುರೆ ಸವಾರಿ ಇನ್ನಿತರೆಗಳನ್ನು ಕಂಡು ಹಿಡಿದ ಜಮಾನಾದಲ್ಲಿ ನಡೆವ ಕತೆಯನ್ನು ಇದು ಒಳಗೊಂಡಿದೆ. ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದು, ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಸಿನಿಮಾದ ಅತಿಥಿ ಪಾತ್ರದಲ್ಲಿ ಕಾರ್ತಿ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ