ಮಾಜಿ ಪತ್ನಿ ಜೊತೆ ಕುಳಿತು ‘ವೆಟ್ಟೈಯನ್​’ ಸಿನಿಮಾ ನೋಡಿದ ಧನುಷ್; ವಿಡಿಯೋ ವೈರಲ್

ರಜನಿಕಾಂತ್​ ಮೇಲಿನ ಅಭಿಮಾನದಿಂದ ಧನುಷ್​ ಅವರು ‘ವೆಟ್ಟೈಯನ್​’ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿದ್ದಾರೆ. ಅದೇ ಚಿತ್ರಮಂದಿರದಲ್ಲಿ ಧನುಷ್​ ಮಾಜಿ ಪತ್ನಿ ಐಶ್ವರ್ಯಾ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಈ ಸಿನಿಮಾಗೆ ಮೊದಲ ದಿನ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಮಾಜಿ ಪತ್ನಿ ಜೊತೆ ಕುಳಿತು ‘ವೆಟ್ಟೈಯನ್​’ ಸಿನಿಮಾ ನೋಡಿದ ಧನುಷ್; ವಿಡಿಯೋ ವೈರಲ್
ರಜನಿಕಾಂತ್​, ಐಶ್ವರ್ಯಾ​, ಧನುಷ್​ (ಸಂಗ್ರಹ ಚಿತ್ರ)
Follow us
ಮದನ್​ ಕುಮಾರ್​
|

Updated on: Oct 10, 2024 | 8:15 PM

ಸೂಪರ್​ ಸ್ಟಾರ್​ ರಜನಿಕಾಂತ್​ ಅಭಿನಯದ ‘ವೆಟ್ಟೈಯನ್​’ ಸಿನಿಮಾ ಇಂದು (ಅಕ್ಟೋಬರ್​ 10) ಬಿಡುಗಡೆ ಆಗಿದೆ. ‘ಲೈಕಾ ಪ್ರೊಡಕ್ಷನ್ಸ್​’ ನಿರ್ಮಾಣದ ಈ ಸಿನಿಮಾಗೆ ಟಿಜೆ ಜ್ಞಾನವೇಲ್ ಅವರು ನಿರ್ದೇಶನ ಮಾಡಿದ್ದಾರೆ. ತಮಿಳುನಾಡಿನಲ್ಲಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೇ ರಜನಿಕಾಂತ್​ ಕುಟುಂಬದವರು ಕೂಡ ಮೊದಲ ದಿನವೇ ಸಿನಿಮಾ ನೋಡಿ ಎಂಜಾಯ್​ ಮಾಡಿದ್ದಾರೆ. ಅಚ್ಚರಿ ಏನೆಂದರೆ, ನಟ ಧನುಷ್​ ಮತ್ತು ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್​ ಒಂದೇ ಚಿತ್ರಮಂದಿರದಲ್ಲಿ ‘ವೆಟ್ಟೈಯನ್​’ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

ರಜನಿಕಾಂತ್​ ಅವರ ಅಪ್ಪಟ ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ಮಿಸ್​ ಮಾಡಿಕೊಳ್ಳುವುದಿಲ್ಲ. ಅಭಿಮಾನಿಗಳ ಜೊತೆಯಲ್ಲಿ ಕುಳಿತು ಧನುಷ್​ ಕೂಡ ‘ವೆಟ್ಟೈಯನ್​’ ಸಿನಿಮಾ ವೀಕ್ಷಿಸಿದ್ದಾರೆ. ಅದೇ ಚಿತ್ರಮಂದಿರದಲ್ಲಿ ರಜನಿಕಾಂತ್ ಪತ್ನಿ ಲತಾ, ಮಕ್ಕಳಾದ ಐಶ್ವರ್ಯಾ, ಸೌಂದರ್ಯಾ, ಮೊಮ್ಮೊಕ್ಕಳಾದ ಯಾತ್ರ ಮತ್ತು ಲಿಂಗ ಅವರು ಸಿನಿಮಾ ನೋಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

2004ರಲ್ಲಿ ಧನುಷ್​ ಮತ್ತು ಐಶ್ವರ್ಯಾ ಅವರು ಮದುವೆ ಆಗಿದ್ದರು. ಆದರೆ 2022ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು. 18 ವರ್ಷಗಳ ದಾಂಪತ್ಯದ ಬಳಿಕ ಅವರು ಬೇರೆ ಬೇರೆ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಧನುಷ್​ ಅವರು ಡಿವೋರ್ಸ್​ ನೀಡಿ ರಜನಿಕಾಂತ್ ಅವರ ಕುಟುಂಬದಿಂದ ದೂರಾಗಿದ್ದರೂ ಕೂಡ ರಜನಿ ಮೇಲೆ ಅವರಿಗೆ ಇರುವ ಗೌರವ, ಅಭಿಮಾನಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಮೊದಲ ದಿನ ಅವರು ‘ವೆಟ್ಟೈಯನ್​’ ಚಿತ್ರವನ್ನು ಕಣ್ತುಂಬಿಕೊಂಡಿರುವುದೇ ಈ ಮಾತಿಗೆ ಸಾಕ್ಷಿ.

ಇದನ್ನೂ ಓದಿ: Vettaiyan twitter review: ರಜನಿ ಖಾತೆಗೆ ಮತ್ತೊಂದು ಬ್ಲಾಕ್​ ಬಸ್ಟರ್, ಭರವಸೆ ಉಳಿಸಿಕೊಂಡ ಜ್ಞಾನವೇಲು

ಅದ್ದೂರಿ ಬಜೆಟ್​ನಲ್ಲಿ ‘ವೆಟ್ಟೈಯನ್​’ ಸಿನಿಮಾ ಮೂಡಿಬಂದಿದೆ. ಈ ಮೊದಲು ‘ಜೈ ಭೀಮ್​’ ಚಿತ್ರಕ್ಕೆ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಟಿಜೆ ಜ್ಞಾನವೇಲ್​ ಅವರ ನಿರ್ದೇಶನದಲ್ಲಿ ‘ವೆಟ್ಟೈಯನ್​’ ಸಿದ್ಧವಾಗಿದೆ. ಬಾಲಿವುಡ್​ನ ಖ್ಯಾತ ನಟ ಅಮಿತಾಭ್​ ಬಚ್ಚನ್​ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಫಹಾದ್​ ಫಾಸಿಲ್​, ರಾಣಾ ದಗ್ಗುಬಾಟಿ, ಮಂಜು ವಾರಿಯರ್​ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅನಿರುದ್ಧ್​ ರವಿಚಂದರ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.