ನಷ್ಟದಲ್ಲಿ ಕರಣ್ ಜೋಹರ್? ಧರ್ಮ ಪ್ರೊಡಕ್ಷನ್ ಮಾರಲು ಮುಂದಾದ ನಿರ್ಮಾಪಕ
ಕರಣ್ ಜೋಹರ್ ಬಾಲಿವುಡ್ನ ಬಹು ದೊಡ್ಡ ನಿರ್ಮಾಪಕರಲ್ಲಿ ಒಬ್ಬರು. ಅವರ ತಂದೆ ಕಟ್ಟಿ ಬೆಳೆಸಿದ ಧರ್ಮಾ ಪ್ರೊಡಕ್ಷನ್ ಬಾಲಿವುಡ್ಗೆ ಹಲವು ಐಕಾನಿಕ್ ಸಿನಿಮಾಗಳನ್ನು ನೀಡಿದೆ. ಆದರೆ ಈಗ ಅವರ ತಂದೆ ಕಟ್ಟಿ ಬೆಳೆಸಿದ್ದ ಸಂಸ್ಥೆಯನ್ನು ಮಾರಲು ಮುಂದಾಗಿದ್ದಾರೆ ಕರಣ್ ಜೋಹರ್.
ಕರಣ್ ಜೋಹರ್ ಅವರು ಇತ್ತೀಚೆಗೆ ಸುದ್ದಿಯಲ್ಲಿ ಇದ್ದಾರೆ. ಅವರು ಸಾಕಷ್ಟು ತೆಳ್ಳಗಾಗಿದ್ದ ಕಾರಣ ಅವರಿಗೆ ಯಾವುದಾದರೂ ಕಾಯಿಲೆ ಇದೆಯೇ ಎನ್ನುವ ಪ್ರಶ್ನೆ ಮೂಡಿತ್ತು. ಈಗ ಅವರ ನಿರ್ಮಾಣ ಸಂಸ್ಥೆ ‘ಧರ್ಮ ಪ್ರೊಡಕ್ಷನ್’ ನಷ್ಟದಲ್ಲಿ ಇದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಇದನ್ನು ಅವರು ಮಾರುವ ನಿರ್ಧಾರಕ್ಕೆ ಬಂದಿದ್ದಾರೆ. ಖ್ಯಾತ ಮ್ಯೂಸಿಕ್ ಸಂಸ್ಥೆ ‘ಸರೆಗಮ’ ಇದರ ಬಹುಪಾಲು ಷೇರನ್ನು ಖರೀದಿ ಮಾಡಲಿದೆಯಂತೆ.
ಕರಣ್ ಜೋಹರ್ ಅವರು ಬಾಲಿವುಡ್ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್ನ ಅನೇಕ ಯುವ ಹೀರೋ-ಹೀರೋಯಿನ್ಗಳಿಗೆ ಅವರೇ ಗಾಡ್ ಫಾದರ್. ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರ ಸೇರಿ ಅನೇಕರನ್ನು ಅವರು ಪರಿಚಯಿಸಿದ್ದಾರೆ. ಈಗ ಅವರು ಚಾರ್ಮ್ ಕಳೆದುಕೊಳ್ಳುತ್ತಿದ್ದಾರೆ. ಅವರ ಧರ್ಮ ಪ್ರೊಡಕ್ಷನ್ಸ್ನ ಬಹುಪಾಲು ಷೇರುಗಳನ್ನು ‘ಸರೆಗಮ’ 600 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದೆ.
ಮುಂದಿನ ದಿನಗಳಲ್ಲಿ ಮ್ಯೂಸಿಕ್ ಕಂಪನಿ ಕರಣ್ ಜೋಹರ್ ಕಂಪನಿಯಿಂದ ಹೆಚ್ಚಿನ ಷೇರುಗಳನ್ನು ಖರೀದಿ ಮಾಡಲಿದೆಯಂತೆ. ಧರ್ಮ ಪ್ರೊಡಕ್ಷನ್ನ ಕರಣ್ ಜೋಹರ್ ಅವರೇ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾದಲ್ಲಿ ಕರಣ್ ಜೋಹರ್ ಅವರ ಕೈಯಿಂದ ಹಿಡಿತ ಸಂಪೂರ್ಣವಾಗಿ ತಪ್ಪಲಿದೆ.
ಸರೆಗಮ ಈ ಮೊದಲು ‘ಪಾಕೆಟ್ ಏಸಸ್’ನ ಖರೀದಿ ಮಾಡಿತ್ತು. ಆರಂಭದಲ್ಲಿ ಕಂಪನಿಯ ಶೇ. 51 ಷೇರುಗಳನ್ನು ಖರೀದಿ ಮಾಡಿತ್ತು. ಇದಕ್ಕಾಗಿ 175 ಕೋಟಿ ರೂಪಾಯಿ ಪಾವತಿ ಮಾಡಿತ್ತು. ನಂತರ ಸಂಸ್ಥೆ 385 ಕೋಟಿ ರೂಪಾಯಿ ನೀಡಿ ಸಂಪೂರ್ಣ ಸಂಸ್ಥೆಯನ್ನೇ ತನ್ನದಾಗಿಸಿಕೊಂಡಿತ್ತು.
ಇದನ್ನೂ ಓದಿ:ಕರಣ್ ಜೋಹರ್ಗೆ ಶುರು ಆಗಿದೆಯಾ ಗಂಭೀರ ಕಾಯಿಲೆ? ಕಳವಳ ವ್ಯಕ್ತಪಡಿಸಿದ ನೆಟ್ಟಿಗರು
‘ಧರ್ಮ ಪ್ರೊಡಕ್ಷನ್ಸ್’ಗೆ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಇದೆ. ಈ ಸಂಸ್ಥೆಯನ್ನು ಖರೀದಿ ಮಾಡಿದರೆ ನಂತರ ಅದನ್ನು ಮತ್ತೆ ಕಟ್ಟಬೇಕು ಎಂಬುದು ಇರುವುದಿಲ್ಲ. ಧರ್ಮ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಲಾಭವು 2022ರಲ್ಲಿ 27 ಕೋಟಿ ರೂಪಾಯಿ ಇತ್ತು. 2023ರಲ್ಲಿ ಇದು 10 ಕೋಟಿ ರೂಪಾಯಿಗೆ ಇಳಿದಿತ್ತು. ಸರೆಗಮ ಸಂಸ್ಥೆ ಲಾಭದಲ್ಲಿ ಇದೆ.. 2024ರಲ್ಲಿ 866 ಕೋಟಿ ರೂಪಾಯಿ ಬಿಸ್ನೆಸ್ ಆಗಿದ್ದು ಇದರಿಂದ ಲಾಭ 197 ಕೋಟಿ ರೂಪಾಯಿ ಆಗಿದೆ.
ಕರಣ್ ಜೋಹರ್ ಅವರು ಬಾಲಿವುಡ್ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಿರ್ಮಾಣದ ಜೊತೆಗೆ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ವೈರಲ್ ಆದ ಅವರ ಫೋಟೋವು ಆತಂಕ ಮೂಡಿಸಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ