AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಣ್ ಜೋಹರ್​ಗೆ ಶುರು ಆಗಿದೆಯಾ ಗಂಭೀರ ಕಾಯಿಲೆ? ಕಳವಳ ವ್ಯಕ್ತಪಡಿಸಿದ ನೆಟ್ಟಿಗರು

ದಿನದಿಂದ ದಿನಕ್ಕೆ ಕರಣ್​ ಜೋಹರ್​ ಅವರ ದೇಹದ ತೂಕ ಕಡಿಮೆ ಆಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಈ ಫೋಟೋ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಫೋಟೋ ನೋಡಿದ ಬಹುತೇಕರು ಕರಣ್ ಜೋಹರ್​ ಅವರ ಆರೋಗ್ಯದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅನೇಕರು ಟ್ರೋಲ್​ ಮಾಡುತ್ತಿದ್ದಾರೆ.

ಕರಣ್ ಜೋಹರ್​ಗೆ ಶುರು ಆಗಿದೆಯಾ ಗಂಭೀರ ಕಾಯಿಲೆ? ಕಳವಳ ವ್ಯಕ್ತಪಡಿಸಿದ ನೆಟ್ಟಿಗರು
ಕರಣ್​ ಜೋಹರ್​, ಹರ್ಷ್​ ಗುಜ್ರಾಲ್​
ಮದನ್​ ಕುಮಾರ್​
|

Updated on: Oct 07, 2024 | 4:28 PM

Share

ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್​ ಅವರು ಆಗಾಗ ಜನರ ಗಮನ ಸೆಳೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನೆಟ್ಟಿಗರು ಅವರನ್ನು ಟ್ರೋಲ್​ ಮಾಡುತ್ತಾರೆ. ಬಾಲಿವುಡ್​ನಲ್ಲಿ ನೆಪೋಟಿಸಂ ಪೋಷಿಸುವ ವ್ಯಕ್ತಿ ಎಂಬ ಕಾರಣಕ್ಕೆ ಕರಣ್ ಜೋಹರ್​ ಅವರನ್ನು ಕಂಡರೆ ಬಹುತೇಕರಿಗೆ ಅಸಮಾಧಾನ ಇದೆ. ಈಗ ಕರಣ್​ ಜೋಹರ್​ ಅವರ ಹೊಸ ಫೋಟೋ ವೈರಲ್​ ಆಗಿದೆ. ಆ ಫೋಟೋದಲ್ಲಿ ಅವರು ಸಖತ್​ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಏನಾದರೂ ಕಾಯಿಲೆ ಇರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಹಾಸ್ಯ ಕಲಾವಿವ ಹರ್ಷ್​ ಗುಜ್ರಾಲ್​ ಜೊತೆ ಕರಣ್ ಜೋಹರ್ ಅವರು ಫೋಸ್​ ನೀಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಅನುಮಾನ ಮೂಡುವಂತಿದೆ. ಏನೋ ಅನಾರೋಗ್ಯ ಕಾಡುತ್ತಿರುವುದುದರಿಂದ ಕರಣ್​ ಜೋಹರ್​ ಇಷ್ಟೊಂದು ಸ್ಲಿಮ್​ ಆಗಿದ್ದಾರೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ದೇಹದ ತೂಕ ಕಡಿಮೆ ಆಗುತ್ತಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕರಣ್ ಜೋಹರ್​ ಅವರಿಗೆ ಅನಾರೋಗ್ಯ ಆದಂತಿದೆ. ನನಗೆ ಅವರ ಬಗ್ಗೆ ಕಳವಳ ಉಂಟಾಗಿದೆ. ನೆಗೆಟಿವ್​ ವಿಚಾರಗಳು ಮತ್ತು ಹೊಟ್ಟೆಕಿಚ್ಚು ಅವರ ಆರೋಗ್ಯವನ್ನು ಹಾಳು ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆಲಿಯಾ ಭಟ್​ ಅವರನ್ನು ನಂಬರ್​ 1 ಸ್ಟಾರ್​ ಮಾಡಬೇಕು ಎಂಬ ಪ್ರಯತ್ನದಿಂದ ಕರಣ್ ಜೋಹರ್​ ಅವರಿಗೆ ಸಿಕ್ಕಿದ್ದು ಕೇವಲ ದ್ವೇಷ ಮತ್ತು ನೆಗೆಟಿವಿಟಿ’ ಎಂದು ಒಂದು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ಕರಣ್ ಜೋಹರ್​ ನಿರ್ಮಾಣದ ಸಿನಿಮಾದಲ್ಲಿ ಇಂದ್ರಜಿತ್​ ಲಂಕೇಶ್​ ಪುತ್ರ ಸಮರ್ಜಿತ್

ವೈರಲ್ ಆಗಿರುವ ಫೋಟೋ ನೋಡಿ ಜನರು ಅನೇಕ ರೀತಿಯಲ್ಲಿ ಊಹೆ ಮಾಡಿಕೊಂಡಿದ್ದಾರೆ. ಕರಣ್ ಜೋಹರ್​ ನಶೆಯಲ್ಲಿ ಇರಬಹುದು. ಆ ಕಾರಣದಿಂದಲೇ ಅವರು ದಿನದಿಂದ ದಿನಕ್ಕೆ ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಮೆಂಟ್​ ಕೂಡ ಬಂದಿದೆ. ನಿರ್ಮಾಪಕನಾಗಿ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರೂಪಕನಾಗಿಯೂ ಕರಣ್ ಜೋಹರ್​ ಅವರು ಫೇಮಸ್​ ಆಗಿದ್ದಾರೆ. ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮಕ್ಕೆ ಸಖತ್ ಜನಪ್ರಿಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ